Published on: September 5, 2021
ಹನ್ಸಾ-ಎನ್ ಜಿ
ಹನ್ಸಾ-ಎನ್ ಜಿ
ಸುದ್ಧಿಯಲ್ಲಿ ಏಕಿದೆ? ಬೆಂಗಳೂರಿನ ವಿಮಾನ ತರಬೇತಿ ವಲಯಕ್ಕೆ ಹೊಸ ತಲೆಮಾರಿನ ಹನ್ಸಾ-ಎನ್ ಜಿ ತರಬೇತಿ ವಿಮಾನ ಸೇರ್ಪಡೆಗೊಂಡಿದ್ದು, ಹನ್ಸಾ-ಎನ್ ಜಿ ಮೊದಲ ವಿಮಾನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿತು.
- ಸಿಎಸ್ಐಆರ್ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್) ಸಂಸ್ಥೆ ಹನ್ಸಾ-ಎನ್ಜಿ (ಮುಂದಿನ ತಲೆಮಾರಿನ) ವಿಮಾನವನ್ನು ವಿನ್ಯಾಸಗೊಳಿಸಿ ತಯಾರಿಸಿದೆ
ಹನ್ಸಾ-ಎನ್ಜಿ ವಿಮಾನದ ವೈಶಿಷ್ಟ್ಯಗಳು
- ಕ್ಯಾಬಿನ್ ಸೌಕರ್ಯದೊಂದಿಗೆ ಗಾಜಿನ ಕಾಕ್ಪಿಟ್ಗಳು, ಹೆಚ್ಚಿನ ದಕ್ಷ ಡಿಜಿಟಲ್ ನಿಯಂತ್ರಿತ ಎಂಜಿನ್, ವಿದ್ಯುತ್ ಚಾಲಿತ ಫ್ಲಾಪ್ಗಳು, ದೀರ್ಘ ಸಹಿಷ್ಣುತೆ, ಕಡಿಮೆ ಸ್ವಾಧೀನ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ಒಳಗೊಂಡಿವೆ
- ಹನ್ಸಾ-ಎನ್ಜಿ ತರಬೇತಿ ವಿಮಾನದ ಎಲ್ಲ ಸಂಯೋಜಿತ ಭಾಗಗಳು JAR-VLA ವಿಭಾಗದ ಅಡಿಯಲ್ಲಿ ಡಿಜಿಸಿಎ 2000 ರಲ್ಲಿ ಪ್ರಮಾಣೀಕರಿಸಿದ್ಧವಾಗಿವೆ.
- ಡಿಜಿಟಲ್ ನಿಯಂತ್ರಿತ ರೊಟಾಕ್ಸ್ 912 ಐಎಸ್ಸಿ ಎಂಜಿನ್ನ ಆಯ್ಕೆಯು ವಿಮಾನ ಶ್ರೇಣಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ.