Published on: June 26, 2023

ಹಲಸಿನ ಹಣ್ಣಿಗೆ ಪೇಟೆಂಟ್

ಹಲಸಿನ ಹಣ್ಣಿಗೆ ಪೇಟೆಂಟ್

 ಸುದ್ದಿಯಲ್ಲಿ ಏಕಿದೆ? ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿ ತುಮಕೂರು ಜಿಲ್ಲೆಯ ತಳಿಗಳಾದ ‘ಸಿದ್ದು’ ಹಾಗೂ ‘ಶಂಕರ’ ಹಣ್ಣಿಗೆ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ.

ಮುಖ್ಯಾಂಶಗಳು

  • ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿವಿಎಫ್ಆರ್ಎ) ಈ ಪೇಟೆಂಟ್ ನೀಡಿದೆ.
  • ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಹಲಸಿಗೆ ಸಿಕ್ಕಿರುವ ಮೊದಲ ಪೇಟೆಂಟ್ ಆಗಿದೆ. ‘ಸಿದ್ದು’ ಹಾಗೂ ‘ಶಂಕರ’ ಹಲಸಿನ ಹಣ್ಣಿನ ಮಾಲೀಕರು ಮಾತ್ರ ಇದರ ಹಕ್ಕು ಸ್ವಾಮ್ಯ ಹೊಂದಿರುತ್ತಾರೆ.
  • ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶ ಸಿಗುವುದಿಲ್ಲ. ಹಣ್ಣಿನ ಮಾಲೀಕರು ಅಥವಾ ಅವರು ಅನುಮತಿ ನೀಡಿದವರು ಮಾತ್ರ ಸಸಿಗಳನ್ನು ಬೆಳೆಸಿ,ಮಾರಾಟ ಮಾಡಲು ಅವಕಾಶವಿದೆ.
  • ನಗರದ ಹೊರವಲಯದಲ್ಲಿರುವ ಐಐಎಚ್ಆರ್ ಸಂಸ್ಥೆಯು 2017ರಲ್ಲಿ ಗುಬ್ಬಿ ತಾಲ್ಲೂಕಿನ ಚೇಳೂರಿನ ‘ಸಿದ್ದು’ ಹಲಸು ಮತ್ತು 2019ರಲ್ಲಿ ಚೌಡ್ಲಾಪುರದ ‘ಶಂಕರ’ ಹಲಸಿನ ತಳಿಯನ್ನು ದೇಶದ ಅತ್ಯುತ್ತಮ ಹಲಸಿನ ತಳಿಗಳು ಎಂದು ಗುರುತಿಸಿದೆ.

ಹಣ್ಣುಗಳ ಮಾಹಿತಿ : ಸಿದ್ದು ಹಲಸು  ಕರ್ನಾಟಕದ ಪ್ರಸಿದ್ಧ, ಹೆಚ್ಚು ಪೌಷ್ಟಿಕಾಂಶದ ಹಲಸಿನ ಹಣ್ಣು. ಅಂದಾಜು ಇಳುವರಿ ಪ್ರತಿ ಮರಕ್ಕೆ ಸುಮಾರು 1098 ಕೆ.ಜಿ. ಇದು ತಾಮ್ರದ ಕೆಂಪು ಬಣ್ಣವನ್ನು  ಹೊಂದಿದೆ. ಶಂಕರ್  ಹಲಸು ಕೂಡ ತಾಮ್ರದ ಕೆಂಪು ಬಣ್ಣವನ್ನು  ಹೊಂದಿದೆ.

ಪೇಟೆಂಟ್ ಎಂದರೇನು?

  • ಹಕ್ಕು ಸ್ವಾಮ್ಯದ ಆವಿಷ್ಕಾರಕ್ಕೆ ಅದರ ಮಾಲೀಕರಿಗೆ ನೀಡುವ ವಿಶೇಷ ಅಧಿಕಾರವನ್ನು ಪೇಟೆಂಟ್ ಅಥವಾ ಭೌದ್ದಿಕ ಹಕ್ಕು ಸ್ವಾಮ್ಯ ಎನ್ನುತ್ತಾರೆ. ಇನ್ನೂ ಸುಲಭವಾಗಿ ಹೇಳುವುದಾದರೆ ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಸುದಾರರಿಗೆ ನೀಡಲಾಗುವ ಹಕ್ಕು.
  • ಉದಾಹರಣೆಗೆ ಓರ್ವ ವ್ಯಕ್ತಿಅಥವಾ ಒಂದು ಕಂಪೆನಿ ಲೋಗೋವನ್ನು ತಯಾರಿಸಿದರೆ ಅದನ್ನು ಬಳಸುವ, ಇತರೆಡೆಗಳಲ್ಲಿಉಪಯೋಗಿಸುವ ಹಕ್ಕು ಕೇವಲ ಅವರದ್ದುಮಾತ್ರ ಆಗಿರುತ್ತದ ಅರ್ಜಿ ಸಲ್ಲಿಸುವ ವ್ಯಕ್ತಿಅಥವಾ ಕಂಪೆನಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಇಂತಿಷ್ಟು ವರ್ಷದವರೆಗೆ ಪೇಟೆಂಟ್ ಅಧಿಕಾರವನ್ನು ನೀಡಲಾಗುತ್ತದೆ. ಇದರ ಬಳಿಕ ಅವರ ಅನುಮತಿಯಲ್ಲದೆ ಇತರರು ಬಳಸಿದರೆ ಕೇಸ್ ದಾಖಲಿಸಬಹುದಾಗಿದೆ. ಭಾರತದಲ್ಲಿಸಾಮಾನ್ಯ ಪೇಟೆಂಟ್, ಸಾಂಪ್ರದಾಯಿಕ ಪೇಟೆಂಟ್, ಪಿಸಿಟಿ ರಾಷ್ಟ್ರೀ ಯ ಹಂತದ ಪೇಟೆಂಟ್ ಎಂಬ ಮೂರು ವಿಧಗಳಿವೆ.

ಪ್ರಯೋಜನ

  • ಯಾವುದೇ ವ್ಯಕ್ತಿಅಥವಾ ಸಂಸ್ಥೆಯ ಹೊಸ ಆವಿಷ್ಕಾರಗಳು ದುರುಪಯೋಗವಾಗದಿರಲು ಪೇಟೆಂಟ್ ನಿಯಮಗಳು ಸಹಾಯಕ್ಕೆ ಬರುತ್ತವೆ. ಇದರಿಂದ ಪ್ರತಿಭೆಗೆ ಯಾವುದೇ ಮೋಸವಾಗುವುದಿಲ್ಲ. ಜತೆಗೆ ಕೆಲವೊಂದು ಬಾರಿ ಪೇಟೆಂಟ್ಗಳು ಕೆಲವು ವಸ್ತುಗಳನ್ನು ಉಪಯೋಗಿಸುವ ನಮ್ಮ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಯಾವುದೇ ಮಲ್ಟಿ ನ್ಯಾಷನಲ್ ಕಂಪೆನಿಗಳ ಹೆಸರಿನಲ್ಲಿರುವ ಪೇಟೆಂಟ್ ವಸ್ತು(ಸಸ್ಯ , ಔಷಧ)ಗಳನ್ನು ನಾವು ಅಧಿಕಾರಯುತವಾಗಿ ಉಪಯೋಗಿಸಲಾಗುವುದಿಲ್ಲ.