Published on: November 17, 2022
ಹವಾಮಾನ ಬದಲಾವಣೆ ಸೂಚ್ಯಂಕ:
ಹವಾಮಾನ ಬದಲಾವಣೆ ಸೂಚ್ಯಂಕ:
ಸುದ್ದಿಯಲ್ಲಿ ಏಕಿದೆ?
ಭಾರತವು 2023ನೇ ಸಾಲಿನ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಎಂಟನೇ ಸ್ಥಾನಕ್ಕೇರಿದೆ.
ಮುಖ್ಯಾಂಶಗಳು
- ಇಂಧನಗಳ ಗರಿಷ್ಠ ಬಳಕೆ, ಹಸಿರುಮನೆ ಅನಿಲದ ಹೊರಸೂಸುವಿಕೆಯ ತಗ್ಗಿಸುವಿಕೆ ಹಾಗೂ ಇನ್ನಿತರ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ಪಟ್ಟಿಯಲ್ಲಿ ಭಾರತವು ಎರಡು ಸ್ಥಾನ ಪ್ರಗತಿ ಕಂಡಿದೆ ಎಂದು ಪ್ರಕಟಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ.
- ‘ಭಾರತವು ಹಸಿರುಮನೆ ಅನಿಲ ಹೊರಸೂಸುವಿಕೆ ಹಾಗೂ ಇಂಧನ ಬಳಕೆ ವಿಭಾಗಗಳಲ್ಲಿ ಗರಿಷ್ಠ ರೇಟಿಂಗ್ ಪಡೆದಿದೆ. ಆದರೆ ಹವಾಮಾನ ನೀತಿ ಹಾಗೂ ನವೀಕರಿಸಬಹುದಾದ ಇಂಧನ ವಿಭಾಗಗಳಲ್ಲಿ ಮಧ್ಯಮ ರೇಟಿಂಗ್ ಹೊಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ವರದಿ ಸಿದ್ಧಪಡಿಸಿದವರು : ಜರ್ಮನ್‌ವಾಚ್, ನ್ಯೂಕ್ಲೈಮೇಟ್ ಇನ್‌ಸ್ಟಿಟ್ಯೂಟ್ ಮತ್ತು ಕ್ಲೈಮೇಟ್ ಆ್ಯಕ್ಷನ್ ನೆಟ್ವರ್ಕ್ ಎಂಬ ಸರ್ಕಾರೇತರ ಸಂಸ್ಥೆಗಳು.
- ಆಧಾರ: 2030ರ ವೇಳೆಗೆ ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ಅರ್ಧಕ್ಕೆ ತಗ್ಗಿಸುವ ದಿಸೆಯಲ್ಲಿ ರಾಷ್ಟ್ರಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಿವೆ
ವಿವಿಧ ಸ್ಥಾನಗಳನ್ನು ಪಡೆದ ದೇಶಗಳು
- ಎಲ್ಲಾ ಸೂಚ್ಯಂಕ ವಿಭಾಗಗಳಲ್ಲಿ ಯಾವ ರಾಷ್ಟ್ರವೂ ಉತ್ತಮ ಸಾಮರ್ಥ್ಯ ತೋರಿಲ್ಲ. ಹೀಗಾಗಿ ಪಟ್ಟಿಯಲ್ಲಿನ ಮೊದಲ ಮೂರು ಸ್ಥಾನಗಳನ್ನು ಖಾಲಿ ಬಿಡಲಾಗಿದೆ.
- ಡೆನ್ಮಾರ್ಕ್ ನಾಲ್ಕನೇ ಸ್ಥಾನದಲ್ಲಿದ್ದು, ಸ್ವೀಡನ್ ಹಾಗೂ ಚಿಲಿ ದೇಶಗಳು ಕ್ರಮವಾಗಿ 5 ಮತ್ತು 6ನೇ ಸ್ಥಾನಗಳನ್ನು ಪಡೆದಿವೆ’
- ‘ಜಗತ್ತಿನ ದೊಡ್ಡ ಮಾಲಿನ್ಯಕಾರಕ ರಾಷ್ಟ್ರ ಎನಿಸಿರುವ ಚೀನಾ ಈ ಪಟ್ಟಿಯಲ್ಲಿ 13 ಸ್ಥಾನ ಕುಸಿತ ಕಂಡಿದೆ. ಒಟ್ಟಾರೆ ಅತಿ ಕಡಿಮೆ ರೇಟಿಂಗ್ ಹೊಂದಿರುವ ಈ ರಾಷ್ಟ್ರ 51ನೇ ಸ್ಥಾನದಲ್ಲಿದೆ.
- ಅಮೆರಿಕವು 52ನೇ ಸ್ಥಾನ ತನ್ನದಾಗಿಸಿಕೊಂಡಿದೆ. ಈ ದೇಶ ಪಟ್ಟಿಯಲ್ಲಿ ಮೂರು ಸ್ಥಾನ ಮೇಲೇರಿದೆ. ಕಜಕಸ್ಥಾನ (61), ಸೌದಿ ಅರೇಬಿಯಾ (62) ಹಾಗೂ ಇರಾನ್ (63) ಅಂತಿಮ ಮೂರು ಸ್ಥಾನಗಳಲ್ಲಿವೆ’.