Published on: December 6, 2022
ಹಾರ್ನ್ ಬಿಲ್ (ಮಂಗಟ್ಟೆ) ಫೆಸ್ಟಿವಲ್
ಹಾರ್ನ್ ಬಿಲ್ (ಮಂಗಟ್ಟೆ) ಫೆಸ್ಟಿವಲ್
ಸುದ್ದಿಯಲ್ಲಿ ಏಕಿದೆ?
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಹಾರ್ನ್ ಬಿಲ್ (ಮಂಗಟ್ಟೆ) ಫೆಸ್ಟಿವಲ್ ನಾಗಾಲ್ಯಾಂಡ್ ನಅತೀ ದೊಡ್ಡ ವಾರ್ಷಿಕ ಹಬ್ಬವಾಗಿದೆ.
ಮುಖ್ಯಾಂಶಗಳು
- ಇದು ನಾಗಾ ಬುಡಕಟ್ಟು ಜನರ ಜೀವನ ಮತ್ತು ಇತಿಹಾಸದ ಕಡೆ ಸಂಪೂರ್ಣ ಬೆಳಕು ಚೆಲ್ಲುತ್ತದೆ.
- ಏಳು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ನಾಗಾ ಬುಡಕಟ್ಟು ಜನಾಂಗಗಳ ಶ್ರೀಮಂತ ಮತ್ತು ಸ್ಪಂದನಶೀಲ ಸಂಸ್ಕೃತಿಯನ್ನು ತೋರಿಸುತ್ತದೆ.
- ಹಾರ್ನ್ ಬಿಲ್ ಹಕ್ಕಿಯ ಗರಿಯನ್ನು ನಾಗಾ ಬುಡಕಟ್ಟು ಜನರು ತಮ್ಮ ಶಿರವಸ್ತ್ರದಲ್ಲಿ ಅಳವಡಿಸಿರುವ ಕಾರಣ ಈ ಹಬ್ಬಕ್ಕೆ ಹಾರ್ನ್ ಬಿಲ್ ಹೆಸರು ಬಂದಿದೆ.
- ಆಚರಣೆಗಳು ನೃತ್ಯ ಪ್ರದರ್ಶನ, ಕರಕುಶಲ, ಮೆರವಣಿಗೆಗಳು, ಆಟಗಳು, ಕ್ರೀಡೆ, ಆಹಾರ ಜಾತ್ರೆಗಳು ಮತ್ತು ಧಾರ್ಮಿಕ ಸಮಾರಂಭಗಳು ಒಳಗೊಂಡಿದೆ.
- ನಾಗಾ ವೀರರ ಕೆಚ್ಚೆದೆಯ ಕೆಲಸವನ್ನು ಹೊಗಳುವ ಹಾಡುಗಳು ಹಬ್ಬದ ಸಮಯದಲ್ಲಿ ದೊಡ್ಡ ಆಕರ್ಷಣೆಗಳಲ್ಲಿ ಒಂದಾಗಿದೆ.
- ಆಯೋಜಕರು : ಪ್ರವಾಸೋದ್ಯಮ, ಕಲಾ ಮತ್ತು ಸಂಸ್ಕೃತಿ ಇಲಾಖೆ
- ಸ್ಥಳ : ಕೊಹಿಮಾದಿಂದ 12 ಕಿ.ಮೀ. ದೂರದಲ್ಲಿರುವ ನಾಗಾ ಹೆರಿಟೇಜ್ ವಿಲೇಜ್ ನಲ್ಲಿ
ಹಾರ್ನ್ ಬಿಲ್ (ಮಂಗಟ್ಟೆ)
- ಹಾರ್ನ್ಬಿಲ್ ಅನ್ನು ಕಾನ್ಕೇವ್-ಕ್ಯಾಸ್ಕ್ವೆಡ್ ಹಾರ್ನ್ಬಿಲ್, ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ಬಿಲ್ ಎಂದೂ ಕರೆಯುತ್ತಾರೆ
- ಸಂರಕ್ಷಣಾ ಸ್ಥಿತಿ: ಅಪಾಯದ ಸಮೀಪ (ಜನಸಂಖ್ಯೆ ಕಡಿಮೆಯಾಗುತ್ತಿದೆ)
- ವೈಜ್ಞಾನಿಕ ಹೆಸರು: ಬುಸೆರೋಸ್ ಬೈಕಾರ್ನಿಸ್
- ಜಾತಿ: ಬುಸೆರೋಟಿಡೆ
- ರಾಜ್ಯ ಪಕ್ಷಿ: ಅರುಣಾಚಲ ಪ್ರದೇಶ ಮತ್ತು ಕೇರಳ
- ಇದು ಪ್ರಧಾನವಾಗಿ ಹಣ್ಣುಗಳನ್ನು ತಿನ್ನುತ್ತದೆ, ಆದರೆ ಸಣ್ಣ ಸಸ್ತನಿಗಳು, ಸರೀಸೃಪಗಳು ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತದೆ.
- ಇದನ್ನು 2018 ರಿಂದ IUCN ರೆಡ್ ಲಿಸ್ಟ್ನಲ್ಲಿ ದುರ್ಬಲ ಎಂದು ಪಟ್ಟಿ ಮಾಡಲಾಗಿದೆ.
ಎಲ್ಲೆಲ್ಲಿ ಕಾಣಸಿಗುತ್ತದೆ?
- ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಾಣಸಿಗುತ್ತದೆ.
- ಗ್ರೇಟ್ ಹಾರ್ನ್ಬಿಲ್, ಮಲಬಾರ್ ಫೈಡ್ ಹಾರ್ನ್’ಬಿಲ್, ಮಲಬಾರ್ ಗ್ರೇ ಹಾರ್ನ್ಬಿಲ್, ಇಂಡಿಯನ್ ಗ್ರೇ ಹಾರ್ನ್’ಬಿಲ್ ಪ್ರಭೇದಗಳನ್ನು ದಾಂಡೇಲಿಯಲ್ಲಿ ನೋಡಬಹುದು.
-
ಗ್ರೇಟ್ ಹಾರ್ನ್ಬಿಲ್ ಭಾರತದಲ್ಲಿ ಕಂಡು ಬಂದರೆ, ಮಲಬಾರ್ ಫೈಡ್ ಹಾರ್ನ್ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣ ಸಿಗುತ್ತದೆ.