Published on: March 1, 2022

ಹಿಟ್ ಅಂಡ್ ರನ್ ಮೋಟಾರು ಅಪಘಾತ ಯೋಜನೆ -2022

ಹಿಟ್ ಅಂಡ್ ರನ್ ಮೋಟಾರು ಅಪಘಾತ ಯೋಜನೆ -2022

http://beccajcampbell.com/tag/questioning-reality/ ಸುದ್ಧಿಯಲ್ಲಿ ಏಕಿದೆ ?ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರ  ಕುಟುಂಬಕ್ಕೆ ಇನ್ಮುಂದೆ 8 ಪಟ್ಟು ಹೆಚ್ಚು ಪರಿಹಾರ ಸಿಗಲಿದೆ.

  • ಈ ಯೋಜನೆಗೆ Calauan ಹಿಟ್ ಅಂಡ್ ರನ್ ಮೋಟಾರು ಅಪಘಾತ ಯೋಜನೆ -2022 ಸಂತ್ರಸ್ತರಿಗೆ ಪರಿಹಾರ ಎಂದು ಹೆಸರಿಡಲಾಗಿದ್ದು, ಇದು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ

ಏನಿದು ಯೋಜನೆ ?

  • ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಸಂತ್ರಸ್ತ ಸಾವಿನ ನಂತರ ಸಂಬಂಧಿಕರಿಗೆ ನೀಡುವ ಪರಿಹಾರವನ್ನು ಏಪ್ರಿಲ್ 1 ರಿಂದ 8 ಪಟ್ಟು ಹೆಚ್ಚಿಸಿ 2 ಲಕ್ಷ ರೂಪಾಯಿಗೆ ಏರಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಇದರ ಪ್ರಕಾರ ಅಪಘಾತ ಪ್ರಕರಣಗಳಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಪರಿಹಾರದ ಮೊತ್ತವನ್ನು ರೂ. 12. 500 ನಿಂದ ರೂ. 50,000ಕ್ಕೆ ಹೆಚ್ಚಿಸಲಾಗಿದೆ.
  • ಈ ಹಿಂದೆ ಹಿಟ್ ಅಂಡ್ ರನ್ ಕೇಸ್ ನಲ್ಲಿ ಮರಣ ಹೊಂದಿದ್ದವಿರೆ 25 ಸಾವಿರ ರೂ. ಪರಿಹಾರ ನೀಡಲಾಗುತಿತ್ತು. ಆದರೆ, ಇನ್ಮುಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಹಾಗೂ ಮರಣ ಹೊಂದಿದಲ್ಲಿ ರೂ. 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
  • ಸಂತ್ರಸ್ತರಿಗೆ ಪರಿಹಾರ ಮತ್ತು ಪಾವತಿ ಬಿಡುಗಡೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಕಾಲಮಿತಿಯನ್ನು ಸಹ ನಿಗದಿಪಡಿಸಲಾಗಿದೆ
  • ಸರ್ಕಾರದ ಅಂಕಿಅಂಶಗಳ ಪ್ರಕಾರ 2020ರಲ್ಲಿ ಭಾರತದಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, 1,31,714 ಸಾವುಗಳು ಸಂಭವಿಸಿವೆ.