Published on: August 15, 2023

ಹೆರಾನ್ ಮಾರ್ಕ್ 2

ಹೆರಾನ್ ಮಾರ್ಕ್ 2

ಸುದ್ದಿಯಲ್ಲಿ ಏಕಿದೆ? ಭಾರತೀಯ ವಾಯು ಪಡೆಯು ಚೀನಾ ಮತ್ತು ಪಾಕಿಸ್ತಾನ ದೇಶಗಳ ಗಡಿಯಲ್ಲಿ ದಾಳಿ ಸಾಮರ್ಥ್ಯ ಉಳ್ಳ ಹೆರಾನ್ ಮಾರ್ಕ್ 2  ಸರ್ವೇಕ್ಷಣಾ ಡ್ರೋನ್‌ಗಳನ್ನು ನಿಯೋಜಿಸಿದೆ.

ಮುಖ್ಯಾಂಶಗಳು

 • ಭಾರತದ ಜಮ್ಮು ಕಾಶ್ಮೀರದ ಉತ್ತರ ವಲಯದ ಗಡಿಯ ಮುಂಚೂಣಿ ಪ್ರದೇಶಗಳಲ್ಲಿ 4 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ.
 • ಈ ಡ್ರೋನ್‌ಗಳು ಸರ್ವೇಕ್ಷಣೆ ಮಾತ್ರವಲ್ಲ, ದಾಳಿಯನ್ನೂ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ.
 • ನಿಯೋಜಿಸಿದವರು: ಭಾರತೀಯ ವಾಯು ಪಡೆ

ಡ್ರೋನ್ ಗಳ ವಿಶೇಷತೆ

 • ಸದಾ ಕಾಲ ಉಪಗ್ರಹಗಳ ಜೊತೆ ಸಂವಹನ ಸಂಪರ್ಕ ಹೊಂದಿರುತ್ತವೆ.
 • ಅತಿ ದೂರದವರೆಗೆ ಇಂಧನ ಮರುಭರ್ತಿ ಇಲ್ಲದೆ ಸಂಚರಿಸಬಲ್ಲವು. ಒಮ್ಮೆ ಇಂಧನ ಭರ್ತಿಯಾದರೆ 36 ಗಂಟೆ ಕಾಲ ಕಾರ್ಯ ನಿರ್ವಹಿಸಬಲ್ಲವು.
 • ಲೇಸರ್‌ ತಂತ್ರಜ್ಞಾನದ ಮೂಲಕ ಶತ್ರುಗಳ ನೆಲೆ ಗುರ್ತಿಸಬಲ್ಲವು.
 • ಬೇಹುಗಾರಿಕೆ, ಸರ್ವೇಕ್ಷಣೆ ಹಾಗೂ ಭಾರತೀಯ ವಾಯು ಪಡೆಗೆ ಮಾಹಿತಿ ರವಾನಿಸುವ ಕಾರ್ಯಗಳನ್ನು ಈ ಡ್ರೋನ್ ಮಾಡುತ್ತದೆ.
 • ಈ ಡ್ರೋನ್‌ಗಳಲ್ಲಿ ಟ್ಯಾಂಕರ್‌ಗಳನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಗಳು. ಆಗಸದಿಂದ ನೆಲಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳು, ಬಾಂಬ್‌ಗಳೂ ಇವೆ.
 • ಪ್ರತಿಕೂಲ ಹವಾಮಾನದಲ್ಲೂ ಕಾರ್ಯ ನಿರ್ವಹಿಸಬಲ್ಲವು.
 • 35,000 ಸಾವಿರ ಅಡಿಯವರೆಗೂ ಹಾರುವ ಸಾಮರ್ಥ್ಯವನ್ನು ಹೊಂದಿವೆ

ಉದ್ದೇಶ

 • ಅತಿ ದೂರದಿಂದಲೇ ಶತ್ರುಗಳ ನೆಲೆಯನ್ನು ಗುರುತಿಸುವ ಸಾಮರ್ಥ್ಯ ಡ್ರೋನ್‌ಗಳಿಗೆ ಇರುವ ಕಾರಣ, ಇವುಗಳ ನೆರವಿನಿಂದ ವಾಯು ಪಡೆಯ ಫೈಟರ್‌ ಜೆಟ್‌ಗಳು ಶತ್ರುಗಳ ನೆಲೆಗಳನ್ನು ದೂರಗಾಮಿ ಕ್ಷಿಪಣಿಗಳ ಮೂಲಕ ನಾಶಪಡಿಸಬಹುದಾಗಿದೆ. ‘ದೃಷ್ಟಿಯ ವ್ಯಾಪ್ತಿಯ ಆಚೆಗಿನ’ ಸರ್ವೇಕ್ಷಣೆಗೂ ನೆರವಾಗಬಲ್ಲದು. ಇವುಗಳ ನೆರವಿನಿಂದ ಇಡೀ ದೇಶವನ್ನ ಒಂದೇ ಸ್ಥಳದಿಂದ ಸರ್ವೇಕ್ಷಣೆ ಮಾಡಲು ಸಾಧ್ಯವಾಗಲಿದೆ.