ಹೊಯ್ಸಳರ ಕಾಲದ ಮೂರು ಅಪರೂಪದ ಶಿಲಾಶಾಸನ
ಹೊಯ್ಸಳರ ಕಾಲದ ಮೂರು ಅಪರೂಪದ ಶಿಲಾಶಾಸನ
ಸುದ್ದಿಯಲ್ಲಿ ಏಕಿದೆ? ಮಂಡ್ಯದ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಯ ರಾಗಿಮುದ್ದನಹಳ್ಳಿಯ ಬೃಂದಾವನ ಕಟ್ಟೆ, ಕೃಷಿ ಭೂಮಿ ಹಾಗೂ ಗೋಮಾಳದಲ್ಲಿ ಶಿಥಿಲಗೊಂಡ ಈಶ್ವರ ದೇವಾಲಯದಲ್ಲಿ ಹೊಯ್ಸಳರ ಕಾಲದ ಅಪರೂಪದ ಮೂರು ಶಿಲಾಶಾಸನಗಳನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ತಂಡ ಪತ್ತೆ ಹಚ್ಚಿದೆ.
ಮುಖ್ಯಾಂಶಗಳು
ಹೊಯ್ಸಳರ ಕಾಲದ ಹೊಸ ಶಿಲ್ಪಿಗಳ ಹೆಸರು ಸಂಶೋಧನೆಯಿಂದ ದೊರೆತಿದೆ.
ಶಾಸನಗಳಲ್ಲಿರುವ ವಿಶೇಷ ವಿಷಯಗಳು
- ದೇವಾಲಯ ಹಾಗೂ ಶಿಲ್ಪಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಉಲ್ಲೇಖವಾಗಿರುವುದು ಶಾಸನಗಳ ವಿಶೇಷ ‘ಕ್ರಿ.ಶ.12ನೇ ಶತಮಾನದಲ್ಲಿ ಕೆತ್ತಲಾದ ಆಸಿತಾಂಗ ಭೈರವ, ಆತ್ಮಬಲಿ, ಸಪ್ತಮಾತೃಕೆ, ಭೈರವಿ, ಯಾಕಿನಿ ಎಂಬ ಯೋಗಿನಿಯ ಶಿಲ್ಪಗಳಿದ್ದು, ಅವುಗಳ ಜೊತೆಗೆ ಶಿಲ್ಪ ಪಟ್ಟಿಕೆಗಳೂ ಇವೆ.
- ಭೈರವ ಶಿಲ್ಪದಲ್ಲಿ ಎರ್ಜೋಜ ಬೈಚೋಜ ಎಂಬ ಶಿಲ್ಪಿಗಳ ಹೆಸರೂ ಇವೆ. ತಂದೆ– ಮಗ ಹೆಸರು ಇರುವುದು ಅಪರೂಪ’.
- ‘ಈಶ್ವರ ದೇವಾಲಯದ ಸಪ್ತಮಾತೃಕೆಯ ಶಾಸನೋಕ್ತ ಶಿಲ್ಪಪಟ್ಟಿಕೆಯಲ್ಲಿ ಆಯಾ ದೇವತೆಗಳು ಪ್ರತಿನಿಧಿಸುವ ಪುರುಷ ದೇವರ ಹೆಸರು ಇರುವುದು ಇದೇ ಮೊದಲು.
- ಪೀಠದ ಮತ್ತೊಂದು ಭಾಗದಲ್ಲಿ ಬೈಚೋಜ ಎಂಬ ಶಿಲ್ಪಿಯ ಹೆಸರೂ ಇದೆ’.
ಭೈರವಿ ಶಿಲ್ಪ
- ‘ರಾಗಿಮುದ್ದನಹಳ್ಳಿಯ ಮಧ್ಯಭಾಗದಲ್ಲಿ ಬೃಂದಾವನದಲ್ಲಿ ಭೈರವಿಯರ ಶಾಸನೋಕ್ತ ಶಿಲ್ಪ ದೊರೆತಿವೆ.
- ಇಲ್ಲಿ ಶಿಲ್ಪಿಗಳಾದ ಬೈಚೋಜ, ಎರ್ಜೋಜ ಎಂಬ ತಂದೆ–ಮಗ ಸೇರಿ ನಿರ್ಮಿಸಿರುವ ಉಲ್ಲೇಖವಿದೆ. ಮದಿಗೊಂಡ ಎಂಬುವರ ಮಗ ಸಿಂದಾಗೌಡ ಎಂಬುವವರು ಮಾಡಿಸಿದರೆಂಬ ದಾನಿಗಳ ವಿವರವೂ ಇದೆ’
ಭೈರವ ಆರಾಧನೆ
ಮೂಡಲಹಳ್ಳಿ ‘ರಾಗಿಮುದ್ದನಹಳ್ಳಿ– ಡಿಂಕಾ ಮಧ್ಯದಲ್ಲಿದ್ದ ಮೂಡಲಹಳ್ಳಿಯು ಹೊಯ್ಸಳರ ಕಾಲದಲ್ಲಿ ಶೈವ ಕೇಂದ್ರವಾಗಿತ್ತು. ಭೈರವ ಆರಾಧನೆ ನಡೆಯುತ್ತಿತ್ತು. ಶಿವಲಿಂಗ ಬಸವ ಭೈರವ ಮತ್ತುಆತನ ಪರಿವಾರವು ಶಿಲ್ಪಗಳಲ್ಲಿಪ್ರಕಟವಾಗಿವೆ’.
- ‘ಭೈರವರಲ್ಲಿ 8 ವಿಧಗಳಿವೆ. ಅದರಲ್ಲಿ ಆಸಿತಾಂಗ ಭೈರವನ ಶಿಲ್ಪ ಸಿಕ್ಕಿದೆ. ಜೊತೆಗೆ ಭೈರವಿಯರ ನಾಲ್ಕು ಶಿಲ್ಪಗಳೂ ದೊರೆತಿದ್ದು ಭೈರವಿಯರ ಆರಾಧನೆಯೂ ಇತ್ತು. ಈ ಶಿಲ್ಪಗಳು ಇರುವೆಡೆ ಯೋಧರು ತಲೆಯನ್ನು ಕತ್ತರಿಸಿಕೊಳ್ಳುವ ಹರಕೆ ಹೊರುತ್ತಿದ್ದರು’.
- ‘ಮೂಡಲಹಳ್ಳಿಯು ನಾಶಗೊಂಡು ಅಲ್ಲಿಯ ಜನರು ಡಿಂಕಾ ರಾಗಿಮುದ್ದನಹಳ್ಳಿಯಲ್ಲಿ ಸ್ಥಳಾಂತರಗೊಂಡಿದ್ದಾರೆ’.
ಭೈರವನ 8 ವಿಧಗಳು
ಅಷ್ಟ ಭೈರವರು ಎಂದು ಕರೆಯಲಾಗುತ್ತದೆ. ಆಸಿತಂಗ ಭೈರವ, ಚಂಡ ಭೈರವ, ಕಪಾಲ ಭೈರವ, ಕ್ರೋಧ ಭೈರವ, ಉನ್ಮತ್ತ ಭೈರವ, ಭೀಷಣ ಭೈರವ, ರುರು ಭೈರವ ಮತ್ತು ಸಂಹಾರ ಭೈರವ. 8 ವಿಧಗಳನ್ನು ಹೊರತುಪಡಿಸಿ ಮತ್ತೊಂದು ಮುಖ್ಯ ವಿಧ ಕಾಲ ಭೈರವ. ಕಾಲ ಭೈರವನನ್ನು ಸ್ವರ್ಣ ಆಕರ್ಷಣ ಭೈರವ ಎಂದು ಕರೆಯಲಾಗುತ್ತದೆ.
ಹೊಯ್ಸಳರು
- ಸ್ಥಾಪಕ : ಸಳ
- ಕಾಲ: ಕ್ರಿ.ಶ. 1000 ದಿಂದ ಕ್ರಿ.ಶ. 1346
- ರಾಜಧಾನಿ :ಸೊಸೆಯೂರು(ಅಂಗಡಿ ಗ್ರಾಮ), ವೇಲಾಪುರ (ಬೇಲೂರು), ಹಳೇಬೀಡು(ದ್ವಾರಸಮುದ್ರ)
- ಹಿಂದಿನವರು : ಕಲ್ಯಾಣಿ ಚಾಲುಕ್ಯರು
- ಯಶಸ್ವಿಯಾದವರು: ವಿಜಯನಗರ ಸಾಮ್ರಾಜ್ಯ
- ಲಾಂಛನ : ಹುಲಿಯನ್ನು ಕೊಲ್ಲುತ್ತಿರುವ ಸಳ