Published on: July 28, 2022

ಅಂಗಮಾರಿ ರೋಗ

ಅಂಗಮಾರಿ ರೋಗ

ಸುದ್ದಿಯಲ್ಲಿ ಏಕಿದೆ?

ಆರಂಭದಲ್ಲಿ ಮಳೆ ಬಾರದೆ ಆಲೂಗೆಡ್ಡೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈಗ ಹುಲುಸಾಗಿ ಬೆಳೆದು ನಿಂತಿರುವ ಬೆಳೆಗೆ ಅಂಗಮಾರಿ ರೋಗದ ಭೀತಿ ಕಾಡುತ್ತಿದೆ.

ಮುಖ್ಯಾಂಶಗಳು

  • ಅರಕಲಗೂಡು, ಆಲೂರು, ಹಾಸನ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. 15 ವರ್ಷಗಳ ಹಿಂದೆ ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಬೆಳೆ, ಈ ವರ್ಷ ಕೇವಲ 3,600 ಹೆಕ್ಟೇರ್‌ಗೆ ಇಳಿದಿದೆ.
  • ಮಳೆ, ರೋಗದ ಬಾಧೆ ಕಾಡದಿದ್ದರೆ, ಒಳ್ಳೆಯ ಬೆಳೆ ಬರುತ್ತದೆ. ಆಗ ಮಾರುಕಟ್ಟೆಯ ಸಮಸ್ಯೆ ಎದುರಾಗುತ್ತದೆ. ಆದರೆ 3–4 ವರ್ಷದಿಂದ ಮಾರುಕಟ್ಟೆಯನ್ನು ನೋಡುವ ಪರಿಸ್ಥಿತಿಯೇ ಬರುತ್ತಿಲ್ಲ. ಆಲೂಗೆಡ್ಡೆ ಹೊಲದಲ್ಲಿಯೇ ಹಾಳಾಗಿ ಹೋಗುತ್ತಿದೆ.
  • ‘ಈ ವರ್ಷ 190 ಹೆಕ್ಟೇರ್‌ ಬೆಳೆ ಮಳೆಯಿಂದ ಹಾಳಾಗಿದೆ’ ಎನ್ನುವುದು ತೋಟಗಾರಿಕೆ ಇಲಾಖೆಯ ಮಾಹಿತಿ. ಆದರೆ, ‘ಶೇ 50 ರಷ್ಟು ಬೆಳೆ ನಷ್ಟವಾಗಿದೆ’ ಎನ್ನುವುದು ರೈತರ ವಾದ.
  • ‘ಪ್ರತಿ ಎಕರೆ ಆಲೂಗೆಡ್ಡೆ ಬೆಳೆಯಲು ರೂ. 50 ಸಾವಿರ ಖರ್ಚಾಗುತ್ತದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಮಳೆ, ಅಂಗಮಾರಿ ರೋಗ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದೆ.

ರೋಗ ಲಕ್ಷಣಗಳು:

  • ಅಂಗಮಾರಿ ರೋಗ ತಗುಲಿದರೆ ಮೊದಲಿಗೆ ನೀರಿನಿಂದ ಆವೃತವಾದ ದುಂಡನೆಯ ಮಚ್ಚೆಗಳು ಎಲೆಯ ಅಂಚಿನಲ್ಲಿ ಕಾಣಿಸುತ್ತಿವೆ. ಈ ಮಚ್ಚೆಗಳು ಕಂದುಬಣ್ಣದಿಂದ ಕೂಡಿದ್ದು, ನಂತರ ಕಪ್ಪಾಗಿ ಬದಲಾಗುತ್ತದೆ.
  • ಎಲೆಯ ಕೆಳ ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದಿಂದ ಕೂಡಿರುತ್ತದೆ. ರೋಗವು ಗಡ್ಡೆಗೆ ಹರಡುತ್ತದೆ. ರೋಗ ಹೆಚ್ಚಾದರೆ ಗಿಡ ಸಾಯುತ್ತದೆ. ರೋಗ ಲಕ್ಷಣಗಳು ಕಂಡುಬಂದ ಪ್ರಾರಂಭಿಕ ಹಂತದಲ್ಲಿ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ ಮಾಡಬೇಕು.