Published on: October 10, 2022
ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ
ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ
ಸುದ್ದಿಯಲ್ಲಿ ಏಕಿದೆ?
ಅಕ್ಟೋಬರ ೨ ಗಾಂಧಿ ಜಯಂತಿ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿ ನಿಮಿತ್ತ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರ ಪೂರ್ಣ ವ್ಯಕ್ತಿಚಿತ್ರವನ್ನು ಹಾಲೊಗ್ರಾಮ್ ಮೂಲಕ ಪ್ರದರ್ಶಿಸಿ, ಶಿಕ್ಷಣ ಕುರಿತ ಅವರ ಚಿಂತನೆಗಳನ್ನು ಪ್ರಸಾರ ಮಾಡಲಾಯಿತು.
ಮುಖ್ಯಾಂಶಗಳು
- ಅಂತರರಾಷ್ಟ್ರೀಯ ಅಂಹಿಸೆ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ ಹಾಗೂ ಯುನೆಸ್ಕೊದ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಯು (ಎಂಜಿಐಇಪಿ) ಕಾರ್ಯಕ್ರಮ ಆಯೋಜಿಸಿತ್ತು.
- ವಿಷಯ : ‘ಮಾನವನ ಏಳಿಗೆಗಾಗಿ ಶಿಕ್ಷಣ’
ಅಂತರಾಷ್ಟ್ರೀಯ ಅಹಿಂಸಾ ಶಿಲ್ಪ
- ಅಂತರಾಷ್ಟ್ರೀಯ ಅಹಿಂಸಾ ದಿನದ ದ್ಯೋತಕವಾಗಿ ಕಾರ್ಲ್ ಫೆಡ್ರಿಕ್ ರಾಯಿಟರ್ ಸ್ವಾರ್ಡ್ ರಿಂದ ನಿರ್ಮಿತವಾದ ಅಹಿಂಸಾ ಶಿಲ್ಪ ಸ್ವೀಡನ್ ನ ಮಾಲ್ಮೋನಲ್ಲಿದೆ.
ಹಾಲೊಗ್ರಾಮ್ ಎಂದರೇನು?
- ಹೊಲೊಗ್ರಾಮ್ ಎಂದರೆ ವರ್ಚುವಲ್ ತ್ರಿಡಿ ಚಿತ್ರವಾಗಿದೆ. ಅಂದರೆ ನೈಜ ವಸ್ತುಗಳಂತೆಯೆ ಪ್ರತಿಬಿಂಬಿಸುವ ಬೆಳಕಿನ ಕಿರಣಗಳ ಸಹಾಯದಿಂದ ರಚಿಸಲಾದ ವರ್ಚುವಲ್ 3D ಚಿತ್ರಗಳಾಗಿವೆ.