Published on: July 13, 2024

ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ

ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ

ಸುದ್ದಿಯಲ್ಲಿ ಏಕಿದೆ? ಇತ್ತೀಚಿಗೆ ನಡೆದ ಭಾರತ ಮತ್ತು ಭೂತಾನ್ ನಡುವೆ ದ್ವಿಪಕ್ಷೀಯ ಸಭೆಯಲ್ಲಿ ಭೂತಾನ್ ದೇಶವು ಭಾರತ ಪ್ರಾರಂಭಿಸಿದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟವನ್ನು ಸೇರಿದೆ.

ಮುಖ್ಯಾಂಶಗಳು

ಈ ಸಭೆಯಲ್ಲಿ ಹವಾಮಾನ ಬದಲಾವಣೆ, ವಾಯು ಗುಣಮಟ್ಟ, ಅರಣ್ಯ, ವನ್ಯಜೀವಿ ನಿರ್ವಹಣೆ ಮತ್ತು ಪರಿಸರ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಎರಡೂ ದೇಶಗಳು ಒಪ್ಪಿಕೊಂಡವು

ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟದ ಬಗ್ಗೆ

ಪ್ರಾರಂಭ: 9ನೇ ಏಪ್ರಿಲ್ 2023 ಪ್ರಾಜೆಕ್ಟ್ ಟೈಗರ್ ನ 50ನೇ ವರ್ಷಾಚರಣೆಯ   ಸಂದರ್ಭದಲ್ಲಿ ಘೋಷಿಸಲಾಯಿತು

2023-24 ರಿಂದ 2027-28 ರವರೆಗಿನ ಐದು ವರ್ಷಗಳ ಅವಧಿಗೆ 150 ಕೋಟಿ ರೂ.ಗಳ ಒಂದು-ಬಾರಿ ಹಣಕಾಸಿನ ಬೆಂಬಲವನ್ನು ನೀಡಲು ಭಾರತ ಬದ್ಧವಾಗಿದೆ

ಪ್ರಧಾನ ಕಛೇರಿ: ಭಾರತ

ಉದ್ದೇಶ: ಈ ಜಾಗತಿಕ ಒಕ್ಕೂಟವು ವಿಶ್ವದ ಏಳು ಪ್ರಮುಖ ಬಿಗ್ ಕ್ಯಾಟ್ ಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.ಅವುಗಳೆಂದರೆ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾ.

ಸದಸ್ಯತ್ವ:  96 ದೇಶಗಳಿಗೆ ಮುಕ್ತವಾಗಿರುತ್ತದೆ. ಈ ದೇಶಗಳು ಈ ಬಿಗ್ ಕ್ಯಾಟ್ ಗಳ ನೈಸರ್ಗಿಕ ಆವಾಸಸ್ಥಾನವನ್ನು ಹೊಂದಿರುವ ದೇಶಗಳಾಗಿವೆ.

ಈ ಮೈತ್ರಿಯು ಇತರ ದೇಶಗಳು, ಸಂರಕ್ಷಣಾ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆಗಳು, ವ್ಯವಹಾರಗಳು ಮತ್ತು ದೊಡ್ಡ ಬಿಗ್ ಕ್ಯಾಟ್ ಗಳನ್ನು ಬೆಂಬಲಿಸಲು ಆಸಕ್ತಿ ಹೊಂದಿರುವ ಕಾರ್ಪೊರೇಟ್‌ಗಳಿಗೆ ಮುಕ್ತವಾಗಿದೆ.

7 ಬಿಗ್ ಕ್ಯಾಟ್ ಗಳಲ್ಲಿ, ಭಾರತವು 5 ಕ್ಕೆ  ನೆಲೆಯಾಗಿದೆ: ಹುಲಿ, ಸಿಂಹ, ಚಿರತೆ, ಹಿಮ ಚಿರತೆ ಮತ್ತು ಚೀತಾ