Published on: May 30, 2024
ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)
ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)
ಸುದ್ದಿಯಲ್ಲಿ ಏಕಿದೆ? ಸ್ಪೇನ್ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 99ನೇ ಸದಸ್ಯ ರಾಷ್ಟ್ರವಾಗಿದೆ.
ಅಂತಾರಾಷ್ಟ್ರೀಯ ಸೌರ ಒಕ್ಕೂಟ
- ಇದು 2015 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ(UNFCCC) ದಲ್ಲಿ 21 ನೇ ಕಾನ್ಫರೆನ್ಸ್ ಆಫ್ ಪಾರ್ಟಿಟೀಸ್ (COP21) ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್‌ನಿಂದ ಜಂಟಿಯಾಗಿ ಪ್ರಾರಂಭಿಸಲಾಯಿತು.
- ಪ್ರಧಾನ ಕಛೇರಿ: ಇದು ಗುರುಗ್ರಾಮ್ (ಹರಿಯಾಣ)
- ISA ಯ ಮೊದಲ ಅಸೆಂಬ್ಲಿಯು ಅಕ್ಟೋಬರ್ 2018 ರಲ್ಲಿ ಭಾರತದ ಗ್ರೇಟರ್ ನೋಯ್ಡಾದಲ್ಲಿ ನಡೆಯಿತು.
- ಆರಂಭದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ದೇಶಗಳು ಅಂತರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯರಾಗಲು ಅರ್ಹತೆ ಹೊಂದಿದ್ದವು.
- ಜುಲೈ 2020 ರಿಂದ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯತ್ವವು ವಿಶ್ವಸಂಸ್ಥೆಯ ಎಲ್ಲಾ ಸದಸ್ಯರಿಗೆ ಮುಕ್ತವಾಗಿದೆ.
- ದೃಷ್ಟಿಕೋನ :ನಾವು ಒಟ್ಟಾಗಿ ಸೂರ್ಯನನ್ನು ಪ್ರಕಾಶಮಾನವಾಗಿ ಮಾಡೋಣ.
- ಮಿಷನ್: ಪ್ರತಿ ಮನೆ, ಎಷ್ಟೇ ದೂರದಲ್ಲಿದ್ದರೂ, ಮನೆಯಲ್ಲಿ ಬೆಳಕು ಇರುತ್ತದೆ.
- ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಆರನೇ ಅಸೆಂಬ್ಲಿಯು ಅಕ್ಟೋಬರ್ 30 ರಿಂದ ನವೆಂಬರ್ 2, 2023 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ.
- ISA ನ ಮಹಾನಿರ್ದೇಶಕರು(ಡೈರೆಕ್ಟರ್ ಜನರಲ್):
- ISA ಡೈರೆಕ್ಟರ್ ಜನರಲ್((ಪ್ರಸ್ತುತ ಡಾ. ಅಜಯ್ ಮಾಥುರ್) ನೇತೃತ್ವದಲ್ಲಿದೆ.
- ಡೈರೆಕ್ಟರ್ ಜನರಲ್ ಅವರು ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಾರೆ ಮತ್ತು ISA ಸೆಕ್ರೆಟರಿಯೇಟ್ನ ಕಾರ್ಯಗಳನ್ನು ನಿರ್ವಹಿಸುತ್ತಾರೆ.
- ಅವರು ISA ಅಸೆಂಬ್ಲಿಗೆ ಜವಾಬ್ದಾರರಾಗಿದ್ದಾರೆ.
- ಅಧಿಕಾರಾವಧಿ: ನಾಲ್ಕು ವರ್ಷಗಳ ಅವಧಿಯನ್ನು ಹೊಂದಿದ್ದಾರೆ ಮತ್ತು ಮರುಚುನಾವಣೆಗೆ ಅರ್ಹರಾಗಿರುತ್ತಾರೆ.
ISA ನ ಗುರಿ
ಪಳೆಯುಳಿಕೆ ಇಂಧನಗಳಿಗೆ ಪ್ರತಿಯಾಗಿ ಸೌರಶಕ್ತಿಯ ವ್ಯಾಪಕ ಬಳಕೆಯನ್ನು ಉತ್ತೇಜಿಸಲು ಪ್ರಪಂಚದ ದೇಶಗಳನ್ನು ಒಟ್ಟುಗೂಡಿಸುವ ಗುರಿಯನ್ನು ISA ಹೊಂದಿದೆ. ಸೌರ ಶಕ್ತಿಯನ್ನು ಕಲ್ಲಿದ್ದಲು, ಪೆಟ್ರೋಲಿಯಂ ತೈಲಗಳು ಮುಂತಾದ ಪಳೆಯುಳಿಕೆ ಇಂಧನಗಳಿಗಿಂತ ಹೆಚ್ಚು ಪರಿಸರ ಸ್ನೇಹಿ ಎಂದು ಪರಿಗಣಿಸಲಾಗಿದೆ.
ISA ನ ಸದಸ್ಯರು
119 ದೇಶಗಳು ಇಲ್ಲಿಯವರೆಗೆ ISA ಫ್ರೇಮ್‌ವರ್ಕ್ ಒಪ್ಪಂದಕ್ಕೆ ಸಹಿ ಹಾಕಿವೆ. ಅದರಲ್ಲಿ 99 ದೇಶಗಳು ಪೂರ್ಣ ಸದಸ್ಯರಾಗಲು ಅಗತ್ಯವಾದ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಇನ್ಸ್ಟ್ರುಮೆಂಟ್ ಆಫ್ ರೆಟಿಫಿಕೇಶನ್ ಅನ್ನು ಅಂಗೀಕರಿಸಿವೆ ಮತ್ತುಅನುಮೋದಿಸಿವೆ
ಸ್ಪೇನ್ ಬಗ್ಗೆ
ಸ್ಪೇನ್ ನೈಋತ್ಯ ಯುರೋಪಿನ ಐಬೇರಿಯನ್ ಪರ್ಯಾಯ ದ್ವೀಪದಲ್ಲಿದೆ.
- ಇದು ಸಾಂವಿಧಾನಿಕ ರಾಜಪ್ರಭುತ್ವವಾಗಿದೆ ಮತ್ತು ಚುನಾಯಿತ ಸರ್ಕಾರದಿಂದ ಆಳಲ್ಪಡುತ್ತದೆ.
- ಇದು ಯುರೋಪಿಯನ್ ಒಕ್ಕೂಟದ ಸದಸ್ಯ ಮತ್ತು ಯುರೋ ವಲಯದ ಭಾಗವಾಗಿದೆ. ಯುರೋ ವಲಯವು ತಮ್ಮ ಕರೆನ್ಸಿಯನ್ನು ರದ್ದುಗೊಳಿಸಿದ ಮತ್ತು ಒಂದೇ ಸಾಮಾನ್ಯ ಕರೆನ್ಸಿ ಯೂರೋವನ್ನು ಅಳವಡಿಸಿಕೊಂಡ ಯುರೋಪಿಯನ್ ಒಕ್ಕೂಟದ ದೇಶಗಳನ್ನು ಸೂಚಿಸುತ್ತದೆ.
- ರಾಜಧಾನಿ: ಮ್ಯಾಡ್ರಿಡ್
- ಪ್ರಧಾನ ಮಂತ್ರಿ: ಪೆಡ್ರೊ ಸ್ಯಾಂಚೆಜ್
- ಕರೆನ್ಸಿ: ಯುರೋ