Published on: October 19, 2022

ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ

ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ

ಸುದ್ದಿಯಲ್ಲಿ ಏಕಿದೆ?

ಪ್ರತಿ ವರ್ಷ ಅಕ್ಟೋಬರ್ 17 ರಂದು ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ 2022, 30 ನೇ ವಾರ್ಷಿಕೋತ್ಸವವನ್ನು ಆಚರಿಸಿತು.
  • ಥೀಮ್: ಆಚರಣೆಯಲ್ಲಿ ಎಲ್ಲರಿಗೂ ಘನತೆ ಎಂಬುದು ಈ ವರ್ಷದ ದಿನದ ವಿಷಯವಾಗಿದೆ.
  • ಈ ವಿಷಯದ ಮೂಲಕ, ವಿಶ್ವಸಂಸ್ಥೆಯು ಎಲ್ಲಾ ಮೂಲಭೂತ ಹಕ್ಕುಗಳಿಗೆ ಆಧಾರವಾಗಿರುವ ಮಾನವ ಘನತೆಗೆ ಒತ್ತು ನೀಡುವ ಮೂಲಕ ಸಾಮಾಜಿಕ ನ್ಯಾಯದ ಪ್ರಚಾರಕ್ಕೆ ಬದ್ಧರಾಗಲು ಪ್ರಪಂಚದಾದ್ಯಂತದ ಜನರನ್ನು ಕರೆ ನೀಡಿತು.
  • ಇತ್ತೀಚಿನ ಅಂದಾಜಿನ ಪ್ರಕಾರ, ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಬಡತನ ರೇಖೆಗಿಂತ ಕೆಳಗಿರುವ 70 ಮಿಲಿಯನ್‌ ಜನರಲ್ಲಿ ಶೇ. 80ರಷ್ಟು ಜನರು ಭಾರತದವರಿದ್ದಾರೆ.
  • 2020ರಲ್ಲಿ ಜಾಗತಿಕ ಮಟ್ಟದಲ್ಲಿ ಕಡು ಬಡತನದ ಮಟ್ಟ ಕಳೆದ ವರ್ಷಕ್ಕಿಂತ ಶೇ.8.4ರಿಂದ ಶೇ. 9.3ಕ್ಕೆ ಏರಿದೆ.

ಉದ್ದೇಶ

  • ಜಗತ್ತಿನಲ್ಲಿ ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸುವುದು, ಅದರಲ್ಲೂ ಮುಂದುವರಿಯುತ್ತಿರುವ ದೇಶಗಳಲ್ಲಿ ಬಡತನವನ್ನು ತೊಡೆದು ಹಾಕುವ ಸಲುವಾಗಿ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಮಾನದಂಡಗಳು

  • ವಿಶ್ವ ಬ್ಯಾಂಕ್‌ನ ಬಡತನ ರೇಖೆಯ ಇತ್ತೀಚಿನ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ 2.15 ಡಾಲರ್‌ (177 ರೂಪಾಯಿ) ಗಿಂತ ಕಡಿಮೆ ಆದಾಯವಿರುವ ವ್ಯಕ್ತಿ ಬಡವ ಎನ್ನಿಸಿಕೊಳ್ಳುತ್ತಾನೆ. ಈ ಮಾನದಂಡದ ಪ್ರಕಾರ ಜಗತ್ತಿನಾದ್ಯಂತ 182 ಮಿಲಿಯನ್‌ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಕಡಿಮೆ, ಮಧ್ಯಮ ಆದಾಯದ ದೇಶಗಳ ಬಡತನ ರೇಖೆಯ ಮಾಪನಕ್ಕೆ 3.65 ಡಾಲರ್‌ (300.83 ರೂ.) ಪರಿಗಣಿಸಲಾಗುತ್ತದೆ.

ಹಿನ್ನೆಲೆ

  • 1987ರ ಅಕ್ಟೋಬರ್‌ 17ರಂದು ಪ್ಯಾರಿಸ್‌ನ ಟ್ರೋಕಾಡೆರೊದಲ್ಲಿ ಸೇರಿದ ಒಂದು ಲಕ್ಷಕ್ಕೂ ಅಧಿಕ ಜನ 1948ರ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಗೆ ಸಹಿ ಹಾಕುವ ಮೂಲಕ ಬಡತನವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಲಾಯಿತು ಮತ್ತು ಈ ಹಕ್ಕುಗಳನ್ನು ಗೌರವಿಸಬೇಕೆಂಬ ನಿರ್ಣಯಕ್ಕೆ ಬರಲಾಯಿತು.
  • ತೀವ್ರ ಬಡತನ, ಹಿಂಸೆ ಮತ್ತು ಹಸಿವಿನಿಂದ ನರಳುವವರ ಪರ ಒಗ್ಗೂಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 1992ರ ಡಿಸೆಂಬರ್‌ 22ರಂದು ನಿರ್ಣಯ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನದ ಆಚರಣೆಗೆ ಚಾಲನೆ ನೀಡಲಾಯಿತು.
  • 1993ರಲ್ಲಿ ಪ್ರಥಮ ಬಾರಿಗೆ ಈ ದಿನವನ್ನು ಆಚರಿಸಲಾಯಿತು.