Published on: November 6, 2021

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಸುದ್ಧಿಯಲ್ಲಿ ಏಕಿದೆ?  ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್‌ಫೀಚರ್ ಚಿತ್ರಗಳು ಆಯ್ಕೆಯಾಗಿವೆ.

  • ಈ ಚಿತ್ರಗಳನ್ನು ಗೋವಾದಲ್ಲಿ ಇದೆ 20 ರಿಂದ 28 ರವರೆಗೆ ಪ್ರದರ್ಶಿಸಲಾಗುವುದು.
  • ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಿದೆ. ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ, ಕನ್ನಡದ 4 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಕನ್ನಡದ 4 ಚಿತ್ರಗಳು

  • ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’, ಪ್ರವೀಣ ಕೃಪಾಕರ ಅವರ ’ತಲೆದಂಡ’, ಮನಸೊರೆ ನಿರ್ದೇಶನದ ’ಆಕ್ಟ್ 1978’ ಮತ್ತು ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
  • ಫೀಚರ್ಸ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ನೇತೃತ್ವದಲ್ಲಿ, 12 ಜ್ಯೂರಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.