Published on: September 27, 2022

ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ

ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ

ಸುದ್ದಿಯಲ್ಲಿ ಏಕಿದೆ?

‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೆ.8ರಿಂದ 10ರವರೆಗೆ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿತ್ತು’.

ಮುಖ್ಯಾಂಶಗಳು

  • ಅಧ್ಯಕ್ಷರು: ಇಸ್ರೋದ ಮಾಜಿ ಅಧ್ಯಕ್ಷರು, ಖ್ಯಾತ ವಿಜ್ಞಾನಿ ಎ.ಎಸ್. ಕಿರಣ್‌ಕುಮಾರ್‌.
  • ಸಹಯೋಗ: ಪರಿಷತ್ತಿನ ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗ ನೀಡಿವೆ.
  • ಕಾರ್ಯಕ್ರಮಗಳು: ‘8 ಗೋಷ್ಠಿಗಳು ಹಾಗೂ ಪರಿಣತರಿಂದ 17 ಉ‍ಪನ್ಯಾಸಗಳಿ ದ್ದವು.
  • ಪ್ರಶಸ್ತಿ: ಮೈಸೂರಿನ ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್, ಬೆಂಗಳೂರಿನ ವಿಜ್ಞಾನ ಸಂವಹನಕಾರ ಎಂ.ಆರ್.ನಾಗರಾಜು, ವಿಜಯಪುರದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಆರ್.ಬಳೂರಗಿ ಮತ್ತು ಕುಲಬುರಗಿಯ ಶಿಕ್ಷಣ ತಜ್ಞ ಪ್ರೊ.ಬಿ.ಕೆ.ಚಳಗೇರಿ ಅವರಿಗೆ ಪರಿಷತ್ತಿನಿಂದ ಇದೇ ಮೊದಲಿಗೆ ರಾಜ್ಯಮಟ್ಟದ ‘ಡಾ.ಎಚ್.ನರಸಿಂಹಯ್ಯ (ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ) ಪ್ರಶಸ್ತಿ’ ಪ್ರದಾನ ಮಾಡಲಾಯಿತು.
  • ಉದ್ದೇಶ: ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು, ವಿಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸುವುದು, ವಿಚಾರ ವಿನಿಮಯ ಹಾಗೂ ಹೊಸ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವುದು ಪ್ರಮುಖ ಉದ್ದೇಶವಾಗಿದೆ’.

ನಿರ್ಣಯಗಳು:

  • ರಾಜ್ಯದಲ್ಲಿ ಮೌಢ್ಯ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಸೇರಿದಂತೆ 10 ನಿರ್ಣಯಗಳನ್ನು 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ತೆಗೆದುಕೊಂಡಿತು.
  • ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಅದನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲು ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.
  • ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ದೇಶದಾದ್ಯಂತ ನಿಷೇಧಿಸಿದ್ದರೂ ಹಲವೆಡೆ ಇನ್ನೂ ಬಳಕೆಯಾಗುತ್ತಿದ್ದು, ಮಾರಾಟಗಾರರು ಹಾಗೂ ತಯಾರಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
  • ಜೀವ ವೈವಿಧ್ಯದ ಜೀವಾಳವಾಗಿರುವ ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ರಕ್ಷಣೆಗೆ ಹಾಗೂ ಅಲ್ಲಿ ಅರಣ್ಯೀಕರಣಕ್ಕೆ ವಿಶೇಷ ಯೋಜನೆ ಜಾರಿಗೊಳಿಸಬೇಕು.
  • ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಕೆರೆ ಸಮೀಕ್ಷೆ–ಅಧ್ಯಯನ ನಡೆಸಲು ವಿಶೇಷ ಕಾರ್ಯಕ್ರಮ ರೂ‍ಪಿಸಬೇಕು.
  • ಕೆರೆಗಳ ಅತಿಕ್ರಮಣ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.
  • ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಬೇಕು.
  • ವಿದ್ಯಾರ್ಥಿಗಳನ್ನು ಖಗೋಳ ವಿಜ್ಞಾನದೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಸಂಚಾರಿ ತಾರಾಲಯ ಯೋಜನೆ ಬಲಪಡಿಸಬೇಕು.
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆ ಎಂದು ಪರಿಗಣಿಸಿ, ವಾರ್ಷಿಕ ಅನುದಾನ ಒದಗಿಸಬೇಕು.
  • ಅಖಿಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನವನ್ನು ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸರ್ಕಾರ ಅನುದಾನ ನೀಡಬೇಕು.
  • ‘ಜೇಮ್ಸ್‌ ವೆಬ್ ದೂರದರ್ಶಕ’ ಮಾದರಿಯಂತೆ ಇಸ್ರೋನಿಂದಲೂ ಬಾಹ್ಯಾಕಾಶ ದೂರದರ್ಶಕ ಉಡಾವಣೆಗೆ ಅನುದಾನ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.

‘ಜೇಮ್ಸ್‌ ವೆಬ್ ದೂರದರ್ಶಕ’

  • ಜೇಮ್ಸ್ ವೆಬ್ ಎಂಬುದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಅಭಿವೃದ್ಧಿಪಡಿಸಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕವಾಗಿದೆ.
  • ಉಡಾವಣೆ ದಿನ: 25 ಡಿಸೆಂಬರ್ 2021 ಕ್ಕೆ 5:50 pm IST
  • ಶಕ್ತಿ(power): 2,000 ವ್ಯಾಟ್ಗಳು
  • ದ್ರವ್ಯರಾಶಿ: 6,161 ಕೆಜಿ
  • ಉಡಾವಣಾ ಸ್ಥಳ: ಗಯಾನಾ ಬಾಹ್ಯಾಕಾಶ ಕೇಂದ್ರ
  • ತಯಾರಕರು: ನಾರ್ತ್ರೋಪ್ ಗ್ರುಮ್ಮನ್, ಬಾಲ್ ಏರೋಸ್ಪೇಸ್ & ಟೆಕ್ನಾಲಜೀಸ್
  • ಸಂಸ್ಥೆಗಳು: ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, ನಾಸಾ, ಕೆನಡಾದ ಬಾಹ್ಯಾಕಾಶ ಸಂಸ್ಥೆ
  • ಈ ಅತ್ಯಾಧುನಿಕ ದೂರದರ್ಶಕವು ಅತಿ ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್‌’ ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚವನ್ನು ಸಹ ಹೊಂದಿದೆ.
  • ಈ ಸಾಧನವು ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ ಎಂದು ನಾಸಾ ತಿಳಿಸಿದೆ.
  • ‘ಜೇಮ್ಸ್ ವೆಬ್’ ಇದೀಗ ಕಾರ್ಟ್‌ವೀಲ್ ಗ್ಯಾಲಕ್ಸಿಯ (Cartwheel Galaxy) ಮೋಡಿಮಾಡುವಂತಹ ಮತ್ತು ಹೆಚ್ಚು ವಿವರವಾದ ಚಿತ್ರಗಳನ್ನು ಸೆರೆಹಿಡಿದಿದೆ.
  • ಜೇಮ್ಸ್ ವೆಬ್ ಈ ಚಿತ್ರವು ಬ್ರಹ್ಮಾಂಡದಲ್ಲಿ ಸುಮಾರು 500 ಬೆಳಕಿನ ವರ್ಷಗಳ(ಲೈಟ್ ಇಯರ್ಸ್) ದೂರದಲ್ಲಿರುವ ಸಕ್ರಿಯ ಕಪ್ಪು ಕುಳಿಯ ಚಿತ್ರವಾಗಿದ್ದು, ಈ ಚಿತ್ರವು ನಕ್ಷತ್ರಪುಂಜವು ಶತಕೋಟಿ ವರ್ಷಗಳಲ್ಲಿ ಬದಲಾವಣೆಗಳ ಮೂಲಕ ಹೇಗೆ ಸಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.
  • ಜೇಮ್ಸ್ ವೆಬ್ ಸೆರೆಹಿಡಿದಿರುವ ಕಾರ್ಟ್‌ವೀಲ್ ಗ್ಯಾಲಕ್ಸಿ ಎರಡು ಉಂಗುರಗಳನ್ನು ಹೊಂದಿದೆ – ಪ್ರಕಾಶಮಾನವಾದ ಒಳ ಉಂಗುರ ಮತ್ತು ಸುತ್ತಮುತ್ತಲಿನ ವರ್ಣರಂಜಿತ ಉಂಗುರಗಳಿವೆ.
  • ಇದರ ರಚನೆಯು “ದೊಡ್ಡ ಸುರುಳಿಯಾಕಾರದ ನಕ್ಷತ್ರಪುಂಜ ಮತ್ತು ಸಣ್ಣ ನಕ್ಷತ್ರಪುಂಜದ ನಡುವಿನ ಹೆಚ್ಚಿನ ವೇಗದ ಘರ್ಷಣೆಯ ತೀವ್ರವಾದ ಘಟನೆಯ ಫಲಿತಾಂಶವಾಗಿದೆ” ಎಂದು NASA ಅಭಿಪ್ರಾಯಪಟ್ಟಿದೆ ಈ ಗ್ಯಾಲಕ್ಸಿಯು “ಅಸ್ತವ್ಯಸ್ತವಾಗಿರುವ ಅದರ ಘರ್ಷಣೆಯ ಮೊದಲು ಸಾಮಾನ್ಯ ನಕ್ಷತ್ರಪುಂಜವಾಗಿದೆ” ಮತ್ತು ನಂತರದ ಸಮಯದೊಂದಿಗೆ ರೂಪಾಂತರಗೊಳ್ಳುತ್ತಿರುವ ಸಾಧ್ಯತೆಯಿದೆ ಎಂದು ನಾಸಾ ಹೇಳಿದೆ.