Published on: June 16, 2022

‘ಅಗ್ನಿಪಥ್’ ಯೋಜನೆ:

‘ಅಗ್ನಿಪಥ್’ ಯೋಜನೆ:

ಸುದ್ದಿಯಲ್ಲಿ ಏಕಿದೆ? 

ಅಗ್ನಿಪಥ್ ಅಥವಾ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು.

ಮುಖ್ಯಾಂಶಗಳು

  • ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆಯಾಗಿದ್ದು, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ 46,000 ಸೈನಿಕರನ್ನು ಸೇರಿಸಿಕೊಳ್ಳುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ.

ಉದ್ದೇಶ

  • ಅಗ್ನಿಪಥ್ ನೇಮಕಾತಿ ಯೋಜನೆಯು ಪರಿವರ್ತಕ ಉಪಕ್ರಮವಾಗಿದ್ದು ಅದು ಸಶಸ್ತ್ರ ಪಡೆಗಳಿಗೆ ಯುವಜನತೆಯನ್ನು ಸೇರಿಸುವುದಾಗಿದೆ.
  • ಸೇನೆಗೆ ಸೇರಲು ಬಯಸುವ ಎಲ್ಲಾ ಯುವಕರಿಗೂ ಅವಕಾಶ ನೀಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಭಾರತೀಯ ಅರ್ಥವ್ಯವಸ್ಥೆಯೂ ಸುಧಾರಿಸಲಿದೆ. ಭಾರತೀಯ ಸೇನೆಯಲ್ಲಿ ಮಾದರಿ ಬದಲಾವಣೆ ತರುವ ಉದ್ದೇಶವಾಗಿದೆ.

ಅಗ್ನಿಪಥ ಯೋಜನೆ: 

  • ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಲ್ಲಿ ಮಾಡಲಾಗುತ್ತದ್ದು, ಈ ಯೋಜನೆಯಲ್ಲಿ, ದೇಶದ ಎಲ್ಲಾ ಮೂರು ಸೇನೆಗಳಾದ ನೌಕಾಪಡೆ, ಭೂಸೇನೆ, ವಾಯುಸೇನೆಗಳ ಸೈನಿಕರು ಕೇವಲ ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
  • ಅಗ್ನಿಪಥ್ ಅಥವಾ ಅಗ್ನಿಪತ್ ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಭಾರತೀಯ ಯುವಕರಿಗೆ ನೇಮಕಾತಿ ಯೋಜನೆಯಾಗಿದೆ. ಪ್ರವೇಶವನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ನಿಗದಿಪಡಿಸಲಾಗುತ್ತದೆ.
  • ಈ 4 ವರ್ಷಗಳಲ್ಲಿ, ನೇಮಕಗೊಂಡವರಿಗೆ ಅಗತ್ಯವಿರುವ ಕೌಶಲ್ಯಗಳಲ್ಲಿ ಸಶಸ್ತ್ರ ಪಡೆಗಳಿಂದ ತರಬೇತಿ ನೀಡಲಾಗುತ್ತದೆ. ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
  • ಪ್ರತಿ ವರ್ಷ ಒಟ್ಟು 46 ಸಾವಿರ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇವರಲ್ಲಿ ಶೇಕಡಾ 25ರಷ್ಟು ಖಾಯಂ ಆಯೋಗಕ್ಕಾಗಿ 15 ವರ್ಷಗಳ ಹೆಚ್ಚುವರಿ ಅವಧಿಗೆ ಉಳಿಸಿಕೊಳ್ಳಲಾಗುವುದು. ಉಳಿದವರಿಗೆ ನಿವೃತ್ತಿಗೆ ಅವಕಾಶ ನೀಡಿ ಅವರಿಗೆ ಸೇವಾ ನಿಧಿಯನ್ನು ನೀಡಲಾಗುತ್ತದೆ – ಅದರ ಮೊತ್ತ 11.71 ಲಕ್ಷ ರೂಪಾಯಿಗಳಾಗಿರುತ್ತವೆ. ಈ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
  • ಸಶಸ್ತ್ರ ಪಡೆಗಳಲ್ಲಿ ನಿಯಮಿತ ಕೇಡರ್ ಆಗಿ ನೋಂದಣಿಗೆ ಆಯ್ಕೆಯಾದ ವ್ಯಕ್ತಿಗಳು ಕನಿಷ್ಠ 15 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬೇಕಾಗುತ್ತದೆ. ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಗಳು/ಇತರ ಶ್ರೇಣಿಯ ಸೇವಾ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತಾರೆ.
  • “ಅಗ್ನಿಪಥ್” ಯೋಜನೆಯನ್ನು ಮೊದಲು “ಟೂರ್ ಆಫ್ ಡ್ಯೂಟಿ” ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಮೂರು ಸೇವೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು.

ನೇಮಕಾತಿ ಹೇಗೆ?

  • ಸಶಸ್ತ್ರ ಪಡೆಗಳು ಶೀಘ್ರದಲ್ಲೇ ವಿವಿಧ ಕ್ಯಾಂಪಸ್‌ಗಳಲ್ಲಿ ನೇಮಕಾತಿ ರ್ರ್ಯಾಲಿಗಳನ್ನು ಮತ್ತು ವಿಶೇಷ ರ್ರ್ಯಾಲಿಗಳನ್ನು ನಡೆಸುತ್ತವೆ. ಎಲ್ಲಾ ಮೂರು ಸೇವೆಗಳಿಗೆ ಆನ್‌ಲೈನ್ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ದಾಖಲಾತಿಯನ್ನು ಮಾಡಲಾಗುತ್ತದೆ. ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಂತಹ ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಗಳಲ್ಲಿ ವಿಶೇಷ ರ್ರ್ಯಾಲಿಗಳು ಮತ್ತು ಕ್ಯಾಂಪಸ್ ಸಂದರ್ಶನಗಳನ್ನು ಇದಕ್ಕಾಗಿ ನಡೆಸಲಾಗುತ್ತದೆ.

ವಯಸ್ಸು

  • ದಾಖಲಾತಿಯು ‘ಅಖಿಲ ಭಾರತ ಎಲ್ಲಾ ವರ್ಗ’ ಆಧಾರದ ಮೇಲೆ ಇರಲಿದ್ದು, 17.5 ರಿಂದ 21 ವರ್ಷಗಳೊರಗಿನವರು ದಾಖಲಾತಿ ಮಾಡಿಕೊಳ್ಳಬಹುದು.

ಶೈಕ್ಷಣಿಕ ಅರ್ಹತೆ: 

  • ಜನರಲ್ ಡ್ಯೂಟಿ (GD) ಸೈನಿಕನ ಪ್ರವೇಶಕ್ಕಾಗಿ, ಶೈಕ್ಷಣಿಕ ಅರ್ಹತೆ 10 ನೇ ತರಗತಿ, ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಶೈಕ್ಷಣಿಕ ಅಗತ್ಯತೆಗಳು ಬದಲಾಗಬಹುದು.

ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರರಿಗೆ ಪ್ರಯೋಜನಗಳು: 

  • ಅಂತೆಯೇ ಈ ಯೋಜನೆಯೊಂದಿಗೆ ಯೋಧರು ಕೆಲಸವನ್ನು ತೊರೆಯುವಾಗ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯಲಿದ್ದು, ನಾಲ್ಕು ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗುವುದು.
  • ‘ಸೇವಾ ನಿಧಿ’ಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ.
  • ಅಗ್ನಿವೀರ್‌ಗಳಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ನೇಮಕಗೊಂಡ ಅವಧಿಗೆ 48 ಲಕ್ಷಗಳ ಕೊಡುಗೆ ರಹಿತ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.