Published on: July 13, 2022

ಅತಿಗೆಂಪು’ ಬೆಳಕು ಹಿಡಿದು ಬಳಸಲು ಸಾಧನ ಅಭಿವೃದ್ಧಿ!

ಅತಿಗೆಂಪು’ ಬೆಳಕು ಹಿಡಿದು ಬಳಸಲು ಸಾಧನ ಅಭಿವೃದ್ಧಿ!

ಸುದ್ದಿಯಲ್ಲಿ ಏಕಿದೆ?

ಕಣ್ಣಿಗೆ ಕಾಣದ ಆದರೆ ವಾತಾವರಣದಲ್ಲಿ ವ್ಯಾಪಕವಾಗಿರುವ ಅತಿಗೆಂಪು ಬೆಳಕನ್ನು (ಇನ್ಫ್ರಾರೆಡ್‌) ಪತ್ತೆ ಮಾಡಿ, ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವ ಮೂಲಕ ಆಪ್ಟಿಕಲ್‌ ಸಂಪರ್ಕ ಸಾಧನಗಳಿಗೆ ಬಳಸ ಬಹುದಾದ ಸಾಧನವನ್ನು ಬೆಂಗಳೂರಿನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮುಖ್ಯಾಂಶಗಳು

  • ‘ಸಿಂಗಲ್‌ ಕ್ರಿಸ್ಟಲೈನ್‌ ಸ್ಕ್ಯಾಂಡಿಯಮ್‌ ನೈಟ್ರೈಡ್‌’ ಎಂಬ ಸಾಧನವನ್ನು ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
  • ಈ ಮೂಲಕ ಅತಿಗೆಂಪು ಬೆಳಕಿನಿಂದ ಸೌರ ಮತ್ತು ಉಷ್ಣ ವಿದ್ಯುತ್‌ ಉತ್ಪಾದಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ವಿದ್ಯುತ್ ಕಾಂತೀಯ ತರಂಗಗಳು ನವೀಕರಿಸಬಹುದಾದ ಇಂಧನ ಮೂಲವಾಗಿದೆ.
  • ‘ಎಲೆಕ್ಟ್ರಾನಿಕ್ಸ್‌ನಿಂದ ಆರೋಗ್ಯ ಕ್ಷೇತ್ರದವರೆಗೆ, ರಕ್ಷಣಾ ಉದ್ದೇಶಗಳಿಂದ ವಿದ್ಯುತ್‌ ತಂತ್ರಜ್ಞಾನದವರೆಗೆ ಅತಿಗೆಂಪು ಬೆಳಕಿನ ಮೂಲಕ್ಕೆ ಭಾರಿ ಬೇಡಿಕೆ ಇದೆ. ಸ್ಕ್ಯಾಂಡಿಯಮ್‌ ನೈಟ್ರೈಡ್‌ ಇನ್ನೂ ಹಲವು ಕ್ಷೇತ್ರಗಳಲ್ಲಿ ಬಳಕೆ ಮಾಡಬಹುದಾಗಿದೆ’. ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್‌ ಫಾರ್‌ ನ್ಯಾನೊ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌, ಸಿಡ್ನಿ ವಿಶ್ವವಿದ್ಯಾಲಯಗಳೂ ಭಾಗಿಯಾಗಿವೆ.

ಉದ್ದೇಶ

  • ವಿದ್ಯುತ್‌ ಉತ್ಪಾದನೆ, ದೂರ ಸಂಪರ್ಕ, ಮಿಲಿಟರಿ, ಭದ್ರತಾ ತಂತ್ರಜ್ಞಾನ, ಸೆನ್ಸಾರ್‌ ಮತ್ತು ಆರೋಗ್ಯ ಆರೈಕೆ ಕ್ಷೇತ್ರಗಳಲ್ಲಿಯೂ ಬಳಸಬಹುದು. ವಿದ್ಯುತ್‌ಕಾಂತೀಯ ಅಲೆಗಳನ್ನು ನಮ್ಮ ಅಗತ್ಯಾನುಸಾರ ಮತ್ತು ನಿಖರವಾಗಿ ಬಳಸಲು ಅತ್ಯುನ್ನತ ತಂತ್ರಜ್ಞಾನವನ್ನು ಬಳಸಲಾಗಿದೆ. ಎಲ್ಲ ಬಗೆಯ ವಿದ್ಯುತ್‌ ಕಾಂತೀಯ ಅಲೆಗಳ ಬಳಕೆ ಸಾಧ್ಯವಿಲ್ಲ. ಅತಿಗೆಂಪು ಬೆಳಕು ಪತ್ತೆ ಇನ್ನೂ ಕಷ್ಟ. ಸಿಂಗಲ್‌ ಕ್ರಿಸ್ಟಲೈನ್‌ ಸ್ಕ್ಯಾಂಡಿಯಮ್‌ ನೈಟ್ರೈಡ್‌ ಹೆಚ್ಚು ಕ್ಷಮತೆಯಿಂದ ಅತಿಗೆಂಪು ಬೆಳಕು ಪತ್ತೆಗೆ ನೆರವಾಗುತ್ತದೆ

ಅತಿಗೆಂಪು ಬೆಳಕು

  • ಅತಿಗೆಂಪು ವಿಕಿರಣ (IR), ಅಥವಾ ಅತಿಗೆಂಪು ಬೆಳಕು, ಮಾನವನ ಕಣ್ಣುಗಳಿಗೆ ಅಗೋಚರವಾಗಿರುವ ಒಂದು ರೀತಿಯ ವಿಕಿರಣ ಶಕ್ತಿಯಾಗಿದೆ ಆದರೆ ಇದರ ಶಾಖವನ್ನು ನಾವು ಅನುಭವಿಸಬಹುದು.
  • ಅತಿಗೆಂಪು ವ್ಯಾಪ್ತಿಯನ್ನು ಸಾಮಾನ್ಯವಾಗಿ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ: ಹತ್ತಿರ ಅತಿಗೆಂಪು ಬೆಳಕಿನ, ತರಂಗಾಂತರ 0.78 ರಿಂದ ಸುಮಾರು 2.5 ಮೈಕ್ರೊಮೀಟರ್‌ಗಳು (ಮೈಕ್ರೊಮೀಟರ್, ಅಥವಾ ಮೈಕ್ರಾನ್, 10-6 ಮೀಟರ್); ಮಧ್ಯಮ ಅತಿಗೆಂಪು ಬೆಳಕಿನ, ತರಂಗಾಂತರ 2.5 ರಿಂದ ಸುಮಾರು 50 ಮೈಕ್ರೋಮೀಟರ್‌ಗಳು; ಮತ್ತು ದೂರದ ಅತಿಗೆಂಪು ಬೆಳಕಿನ, ತರಂಗಾಂತರ 50 ರಿಂದ 1,000 ಮೈಕ್ರೊಮೀಟರ್‌ಗಳು.
  • ಅತಿಗೆಂಪು ಚಿತ್ರಣವನ್ನು ಅತಿಯಾಗಿ ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳಿಗೆ ಉಪಯೋಗಿಸಲಾಗುತ್ತಿದೆ.
  • ಮಿಲಿಟರಿಯೇತರ ಉಪಯೋಗಗಳಲ್ಲಿ ಉಷ್ಣತೆಯ ದಕ್ಷತೆಯ ವಿಮರ್ಶೆ, ರಿಮೋಟ್ ಟೆಂಪರೇಚರ್ ಸೆನ್ಸಿಂಗ್, ಅಲ್ಪವ್ಯಾಪ್ತಿಯ ನಿಸ್ತಂತು ಸಂಪರ್ಕ, ಸ್ಪೇಕ್ಟ್ರೋಸ್ಕೋಪಿ ಮತ್ತು ಹವಾಮಾನ ಮುನ್ಸೂಚನೆಗೆ ಉಪಯೋಗಿಸಲಾಗುತ್ತದೆ.