Published on: September 14, 2022
ಅತಿದೊಡ್ಡ ಆರ್ಥಿಕತೆ
ಅತಿದೊಡ್ಡ ಆರ್ಥಿಕತೆ
ಸುದ್ದಿಯಲ್ಲಿ ಏಕಿದೆ?
ಅಂತರರಾಷ್ಟ್ರೀ ಯ ಹಣಕಾಸು ನಿಧಿಯ (ಐಎಂಎಫ್) ಅಂದಾಜಿನ ಪ್ರಕಾರ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.
ಮುಖ್ಯಾಂಶಗಳು
- ಐಎಂಎಫ್ನ ದತ್ತಾಂಶ ಮತ್ತು ವಿನಿಮಯ ದರವನ್ನು ಆಧಾರವಾಗಿ ಇಟ್ಟುಕೊಂಡು ಬ್ಲೂಮ್ಬರ್ಗ್ ಸಹ ಭಾರತವು 5ನೇ ಸ್ಥಾನಕ್ಕೆ ಏರಿಕೆ ಎಂದು ಹೇಳಿದೆ.
- ಭಾರತದ ಆರ್ಥಿಕತೆಯ ಮೌಲ್ಯವು ಮಾರ್ಚ್ ತ್ರೈಮಾಸಿಕದಲ್ಲಿ ರೂ. 68.20 ಲಕ್ಷ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್ನ ಆರ್ಥಿಕತೆಯ ಮೌಲ್ಯವು ರೂ. 65.11 ಲಕ್ಷ ಕೋಟಿ ಇದೆ ಎಂದು ಬ್ಲೂಮ್ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ.
- ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, 2ನೇ ಸ್ಥಾನದಲ್ಲಿ ಚೀನಾ, ಜಪಾನ್ 3 ಮತ್ತು ಜರ್ಮನಿ 4ನೇ ಸ್ಥಾನದಲ್ಲಿದೆ ಎನ್ನಲಾಗಿದೆ.
- ಭಾರತ ದಶಕದ ಹಿಂದೆ 11ನೇ ಸ್ಥಾನದಲ್ಲಿತ್ತು. ಬ್ರಿಟನ್ 5ನೇ ಸ್ಥಾನದಲ್ಲಿತ್ತು ವರದಿ ಉಲ್ಲೇಖಿಸಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ
- ವಿಶ್ವಸಂಸ್ಥೆಯ ಅಂಗಸಂಸ್ಥೆಯಾದಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸುವ, ಅಂತರರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸುವ ಮತ್ತು ಬಡತನವನ್ನು ಕಡಿಮೆ ಮಾಡುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
- ಐಎಂಎಫ್ ಅನ್ನು ಬ್ರೆಟನ್ ವುಡ್ಸ್ ಒಪ್ಪಂದದ ಭಾಗವಾಗಿ 1945 ರಲ್ಲಿ ರಚಿಸಲಾಯಿತು, ಇದು ಸ್ಥಿರ ವಿನಿಮಯ ದರದಲ್ಲಿ ಪರಿವರ್ತಿಸಬಹುದಾದ ಕರೆನ್ಸಿಗಳ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಅಂತರರಾಷ್ಟ್ರೀಯ ಹಣಕಾಸು ಸಹಕಾರವನ್ನು ಉತ್ತೇಜಿಸಲು ಪ್ರಯತ್ನಿಸಿತು.
- ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಾಷಿಂಗ್ಟನ್ ಡಿ.ಸಿ ಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಈ ಸಂಸ್ಥೆ ಪ್ರಸ್ತುತ 189 ಸದಸ್ಯ ರಾಷ್ಟ್ರಗಳಿಂದ ಕೂಡಿದೆ.
-
ಉದ್ದೇಶ “ಜಾಗತಿಕ ವಿತ್ತೀಯ ಸಹಕಾರವನ್ನು ಬೆಳೆಸುವುದು, ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸುವುದು, ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವುದು, ಹೆಚ್ಚಿನ ಉದ್ಯೋಗ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ವಿಶ್ವದಾದ್ಯಂತ ಬಡತನವನ್ನು ಕಡಿಮೆ ಮಾಡುವುದು”.