Published on: April 7, 2022
ಅತಿ ಹೆಚ್ಚಿನ ಉಷ್ಣಾಂಶ
ಅತಿ ಹೆಚ್ಚಿನ ಉಷ್ಣಾಂಶ
ಸುದ್ಧಿಯಲ್ಲಿ ಏಕಿದೆ ? ಭಾರತ 122 ವರ್ಷಗಳಲ್ಲೇ 2022 ರ ಮಾರ್ಚ್ ತಿಂಗಳು ಅತಿ ಹೆಚ್ಚು ಉಷ್ಣಾಂಶ ದಾಖಲಾದ ಮಾಸವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಹೆಚ್ಚು ಉಷ್ಣಾಂಶ ದಾಖಲಾಗಲು ಕಾರಣ
- ಕಡಿಮೆ ಮಳೆಯ ಪರಿಣಾಮವಾಗಿ ಈ ಉಷ್ಣಾಂಶ ದಾಖಲಾಗಿದ್ದು. ದೇಶಾದ್ಯಂತ 8.9 ಎಂಎಂ ಮಳೆ ದಾಖಲಾಗಿದ್ದು, ಸರಾಸರಿ 30.4 ಎಂಎಂ ಗಿಂತಲೂ ಶೇ.71 ರಷ್ಟು ಕಡಿಮೆ ಆಗಿದೆ ಎಂದು ಇಲಾಖೆ ತಿಳಿಸಿದೆ.
- ಆಕಾಶವು ಮೋಡರಹಿತವಾಗಿತ್ತು, ಇದರಿಂದಾಗಿ ಭೂಮಿಯು ನೇರವಾಗಿ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುತ್ತದೆ, ಹೀಗಾಗಿ, ತಾಪಮಾನವನ್ನು ಹೆಚ್ಚುತ್ತದೆ. ಅಲ್ಲದೆ, ಮಳೆಯ ಕೊರತೆಯಿಂದಾಗಿ ಈ ತಾಪಮಾನ ಹೆಚ್ಚಾಗಿದೆ. ತಾಪಮಾನದಲ್ಲಿ ದಾಖಲೆಯ ಏರಿಕೆಗೆ ಜಗತ್ತಿನಾದ್ಯಂತ ಜಾಗತಿಕ ತಾಪಮಾನವೂ ಒಂದು ಕಾರಣವಾಗಿದೆ.
- 1909 ರಲ್ಲಿ 7.2 ಎಂಎಂ ಮಳೆಯಾಗಿತ್ತು, ಇದಕ್ಕೂ ಮುನ್ನ 1908 ರಲ್ಲಿ 8.7 ಎಂಎಂ ಮಳೆಯಾಗಿತ್ತು.
ಮಾರ್ಚ್ನಲ್ಲಿ ದೇಶದಲ್ಲಿ ಸರಾಸರಿ ತಾಪಮಾನ
- ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಸರಾಸರಿ ಗರಿಷ್ಠ 33.10 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.
- 2010 ರಲ್ಲಿ ಮಾರ್ಚ್ ತಿಂಗಳಲ್ಲಿ ದೇಶದ ಉಷ್ಣಾಂಶ ಸರಾಸರಿ 33.09 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಇದಕ್ಕೂ ಮುನ್ನ 26.67 ಡಿಗ್ರಿ ಸೆಲ್ಷಿಯಸ್ ನಷ್ಟು ಉಷ್ಣಾಂಶ ಗರಿಷ್ಠ ಉಷ್ಣಾಂಶವಾಗಿತ್ತು.