Published on: December 10, 2021
ಅತ್ಯಾಧುನಿಕ MI-17 ಹೆಲಿಕಾಪ್ಟರ್
ಅತ್ಯಾಧುನಿಕ MI-17 ಹೆಲಿಕಾಪ್ಟರ್
ಸುದ್ಧಿಯಲ್ಲಿ ಏಕಿದೆ ? ಭಾರತದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ Mi-17V-5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರು ಎಂಬಲ್ಲಿ ಪತನವಾಗಿದೆ.
ಮುಖ್ಯಾಂಶಗಳು
- ಸದ್ಯ ಪತನವಾಗಿರುವ ಈ Mi-17V-5 ವಿಶ್ವದಲ್ಲಿರುವ ಸೇನಾ ಹೆಲಿಕಾಪ್ಟರ್‌ಗಳ ಪೈಕಿ ಅತ್ಯಂತ ಸುಸಜ್ಜಿತ ಕಾಪ್ಟರ್‌ಗಳಲ್ಲಿ ಒಂದಾಗಿದೆ. ವಿಶ್ವದ ಬೇರೆ ಯಾವುದೇ ಸೇನಾ ಅಥವಾ ಸರಕು ಕಾಪ್ಟರ್‌ಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಸುರಕ್ಷಿತ ಕಾಪ್ಟರ್ ಎನ್ನುವ ಅಗ್ಗಳಿಕೆ ಇದರದ್ದು.
ಉತ್ಪಾದನೆ ಹಾಗೂ ಇತಿಹಾಸ
- Mi-17V-5 ಹೆಲಿಕಾಪ್ಟರ್, ಸೇನಾ ಸರಕು ಕಾಪ್ಟರ್‌ನ Mi-8/17 ವರ್ಗಕ್ಕೆ ಸೇರಿದೆ. ರಷ್ಯಾದ ಕಝನ್ ಹೆಲಿಕಾಪ್ಟರ್ಸ್ ಎನ್ನುವ ಕಂಪನಿ ತಯಾರಿಸುವ ಈ ಚಾಪರ್ ವಿಶ್ವಾಸಾರ್ಹತೆ ಹಾಗೂ ಅಗ್ಗದ ದರದಿಂದಾಗಿ ಹೆಚ್ಚು ಗಮನ ಸೆಳೆದಿದೆ. ಶಸ್ತ್ರಾಸ್ತ್ರಗಳ ಸಾಗಣೆ, ಆಗ್ನಿ ಶ್ಯಾಮಕ, ಬೆಂಗಾವಲು, ಪಹರೆ, ರಕ್ಷಣಾ ಕಾರ್ಯಾಚರಣೆ ಮುಂತಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಕಾಪ್ಟರ್ ಅನ್ನು ಬಳಸಿಕೊಳ್ಳಲಾಗುತ್ತದೆ.
- 2008 ರಲ್ಲಿ ಈ ಮಾದರಿಯ 80 ಕಾಪ್ಟರ್‌ಗಳ ಖರೀದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 2011ರಲ್ಲಿ ಮೊದಲ ಕಾಪ್ಟರ್ ಭಾರತೀಯ ವಾಯುಪಡೆಗೆ ಸೇರ್ಪಡೆಯಾಯ್ತು. 2018ರಲ್ಲಿ ಕೊನೆಯ ಕಾಪ್ಟರ್ ಅನ್ನು ರಷ್ಯಾ ಭಾರತಕ್ಕೆ ಹಸ್ತಾಂತರ ಮಾಡಿತ್ತು.
Mi-17V5 ಹೆಲಿಕಾಪ್ಟರ್ ಕುರಿತು ಪ್ರಮುಖ ಅಂಶಗಳು ಇಲ್ಲಿವೆ:
- ತಾಂತ್ರಿಕವಾಗಿ ಅತ್ಯಾಧುನಿಕ ವ್ಯವಸ್ಥೆ ಒಳಗೊಂಡಿರುವ ಹೆಲಿಕಾಪ್ಟರ್.
- ಗರಿಷ್ಠ 13,000 ಕೆ.ಜಿ. ತೂಕವನ್ನು ಹೊತ್ತು ಸಂಚರಿಸಬಹುದಾಗಿದೆ.
- ಶಸ್ತ್ರಸಜ್ಜಿತರಾದ 36 ಯೋಧರನ್ನು ಅಥವಾ 4,000 ಕೆ.ಜಿ.ಯಷ್ಟು ತೂಕವನ್ನು ಹೆಲಿಕಾಪ್ಟರ್ ತಳಭಾಗದಲ್ಲಿ ಹೊತ್ತು ಒಯ್ಯುತ್ತದೆ.
- ಪಿಕೆವಿ–8 ಆಟೊಪೈಲಟ್ ವ್ಯವಸ್ಥೆ, ಮಾರ್ಗಸೂಚಿ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಡಿಸ್‌ಪ್ಲೇಗಾಗಿ ಕೆಎನ್‌ಇಐ–8 ಏವಿಯಾನಿಕ್ಸ್ ಸ್ಯೂಟ್ ಅಳವಡಿಸಲಾಗಿದೆ.
- ಹೆಲಿಕಾಪ್ಟರ್‌ನ ಕ್ಯಾಬಿನ್ ಒಳಗೆ ಮತ್ತು ಕೆಳಗೆ ತೂಗಾಡುವ ರೀತಿಯಲ್ಲಿ ಸರಕು–ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತದೆ. ಇದು ಜಗತ್ತಿನ ಅತ್ಯಾಧುನಿಕ ಸರಕು ಸಾಗಣೆಯ ಹೆಲಿಕಾಪ್ಟರ್ ಆಗಿದೆ.
- ಸೇನಾ ಪಡೆಗಳ ಸಿಬ್ಬಂದಿ ರವಾನೆಗೆ, ಶಸ್ತ್ರಾಸ್ತ್ರಗಳನ್ನು ಸಾಗಿಸಲು, ಅಗ್ನಿ ತುರ್ತು ಸಂದರ್ಭಗಳಲ್ಲಿ ರಕ್ಷಣೆಗಾಗಿ, ಭದ್ರತೆ ಮತ್ತು ಗಸ್ತು ತಿರುಗಲು ಹಾಗೂ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗಳಿಗಾಗಿ ಈ ಹೆಲಿಕಾಪ್ಟರ್ ಬಳಕೆ ಮಾಡಬಹುದಾಗಿದೆ.
- ರೊಸೊಬೊರೊನ್‌ಎಕ್ಸ್‌ಪೋರ್ಟ್’ ಕಂಪನಿಯು 2018ರ ಜುಲೈನಲ್ಲಿ ಅಂತಿಮ ಬ್ಯಾಚ್‌ನ ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು ಪೂರೈಕೆ ಮಾಡಿತು. 2019ರ ಏಪ್ರಿಲ್‌ನಲ್ಲಿ ಭಾರತೀಯ ವಾಯುಪಡೆಯು ಎಂಐ–17ವಿ5 ಹೆಲಿಕಾಪ್ಟರ್‌ಗಳ ದುರಸ್ಥಿ ಮತ್ತು ಪರಿಶೀಲನೆ ವ್ಯವಸ್ಥೆ ಸೌಲಭ್ಯವನ್ನು ಆರಂಭಿಸಿತು.
ರಕ್ಷಣಾ ವ್ಯವಸ್ಥೆ
- ಹೆಲಿಕಾಪ್ಟರ್‌ನ ಕಾಕ್‌ಪಿಟ್ ಮತ್ತು ಪ್ರಮುಖ ಸಾಧನಗಳಿಗೆ ಶಸ್ತ್ರಾಸ್ತ್ರಗಳಿಂದ ರಕ್ಷಣೆಗೆ ಕವಚದ ಸುರಕ್ಷತೆ ಇದೆ. ಮೆಷಿನ್ ಗನ್ ಸಹ ಹೆಲಿಕಾಪ್ಟರ್‌ಗೆ ಅಳವಡಿಸಲು ಅವಕಾಶವಿದೆ.
- ಇಂಧನ ಟ್ಯಾಂಕ್‌ಗಳಿಗೆ ಸ್ಫೋಟದಿಂದ ರಕ್ಷಣೆ ಪಡೆಯಲು ಪಾಲಿಯುರಿಥೇನ್ (polyurethane) ಫೋಮ್‌ನಿಂದ ಸೀಲ್ ಮಾಡಲಾಗಿದೆ.
- ಹೆಲಿಕಾಪ್ಟರ್‌ನಲ್ಲಿ ಸ್ಟೋಮ್- ವಿ (Shturm–v) ಕ್ಷಿಪಣಿಗಳು, ಎಸ್–8 ರಾಕೆಟ್‌ಗಳು, ಒಂದು 23ಎಂಎಂ ಮೆಷಿನ್ ಗನ್, ಪಿಕೆಟಿ ಮೆಷಿನ್ ಗನ್‌ಗಳು, ಎಕೆಎಂ ಸಬ್–ಮೆಷಿನ್ ಗನ್‌ಗಳನ್ನು ಅಳವಡಿಸಬಹುದು. ಗನ್‌ಗಳನ್ನು ಗುರಿಯಿಡಲು ಎಂಟು ಕಡೆ ವ್ಯವಸ್ಥೆ ಇದೆ.
- ಹೆಲಿಕಾಪ್ಟರ್‌ನಲ್ಲಿ ಸ್ಟೋಮ್- ವಿ ಕ್ಷಿಪಣಿಗಳು, ಎಸ್–8 ರಾಕೆಟ್‌ಗಳು, ಒಂದು 23ಎಂಎಂ ಮೆಷಿನ್ ಗನ್, ಪಿಕೆಟಿ ಮೆಷಿನ್ ಗನ್‌ಗಳು, ಎಕೆಎಂ ಸಬ್–ಮೆಷಿನ್ ಗನ್‌ಗಳನ್ನು ಅಳವಡಿಸಬಹುದು. ಗನ್‌ಗಳನ್ನು ಗುರಿಯಿಡಲು ಎಂಟು ಕಡೆ ವ್ಯವಸ್ಥೆ ಇದೆ