Published on: March 15, 2023

ಅಮೆರಿಕದ ಪರಮಾಣು ಚಾಲಿತ ಜಲಾಂತರ್ಗಾಮಿ

ಅಮೆರಿಕದ ಪರಮಾಣು ಚಾಲಿತ ಜಲಾಂತರ್ಗಾಮಿ


ಸುದ್ದಿಯಲ್ಲಿ ಏಕಿದೆ? ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾಗಳು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ. ಇದಕ್ಕೆ ಚೀನಾದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


ಮುಖ್ಯಾಂಶಗಳು

  • ಎಯುಕೆಯುಎಸ್ (ಆಸ್ಟ್ರೇಲಿಯಾ–ಬ್ರಿಟನ್–ಅಮೆರಿಕ) ಒಪ್ಪಂದದಡಿ ಆಸ್ಟ್ರೇಲಿಯಾವು ಮೊದಲು ಅಮೆರಿಕದಿಂದ ಮೂರು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಪಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರು ಸ್ಯಾನ್ ಡಿಯಾಗೋದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಈ ಘೋಷಣೆ ಹೊರಡಿಸಲಾಗಿದೆ.
  • ಯೋಜನೆಯ ಉದ್ದೇಶ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಎದುರಿಸಲು ಮತ್ತು ಈ ಪ್ರದೇಶವು ‘ಸ್ವತಂತ್ರ ಮತ್ತು ಮುಕ್ತ’ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.
  • ಒಪ್ಪಂದಕ್ಕೆ ಚೀನಾ ಖಂಡನೆ: ಪರಮಾಣು ಚಾಲಿತ ಜಲಾಂತರ್ಗಾಮಿ ಒಪ್ಪಂದವನ್ನು ಚೀನಾ ಖಂಡಿಸಿದ್ದು, ‘ಈ ಒಪ್ಪಂದವು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’ವನ್ನು ಉಲ್ಲಂಘಿಸುತ್ತದೆ. ಈ ಮೂರು ದೇಶಗಳು ಹೆಚ್ಚು ಅಪಾಯಕಾರಿ ಮತ್ತು ತಪ್ಪು ದಾರಿಯಲ್ಲಿ ಸಾಗುತ್ತಿವೆ’ ಎಂದು ಹೇಳಿದೆ.

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’

  • ಸಾಮಾನ್ಯವಾಗಿ ನಾನ್-ಪ್ರೊಲಿಫರೇಶನ್ ಟ್ರೀಟಿ ಅಥವಾ ಎನ್‌ಪಿಟಿ ಎಂದು ಕರೆಯಲಾಗುತ್ತದೆ, ಇದು ಪರಮಾಣು ನಿಶ್ಯಸ್ತ್ರೀಕರಣ, ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಾಸ್ತ್ರ ತಂತ್ರಜ್ಞಾನದ ಹರಡುವಿಕೆಯನ್ನು ತಡೆಗಟ್ಟುವುದು, ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳಲ್ಲಿ ಸಹಕಾರವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
  • 1 ಜುಲೈ 1968 ರಂದು ಸಹಿ ಮಾಡಲಾಗಿದೆ.
  • ಮಾರ್ಚ್ 1970 ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು.
  • ನಾಲ್ಕು ದೇಶಗಳು – ಭಾರತ, ಇಸ್ರೇಲ್, ಪಾಕಿಸ್ತಾನ ಮತ್ತು ದಕ್ಷಿಣ ಸುಡಾನ್ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.