Published on: November 7, 2022

ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ

ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ

ಸುದ್ದಿಯಲ್ಲಿ ಏಕಿದೆ?

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ವಲಸೆ ಬಂದು ಪ್ರಸ್ತುತ ಗುಜರಾತ್ನ ಆನಂದ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, 2019 (ಸಿಎಎ) ಅಡಿ ಪೌರತ್ವ ನೀಡಿಲ್ಲ ಬದಲಾಗಿ ಪೌರತ್ವ ಕಾಯ್ದೆ, 1955ರ ಅಡಿಯಲ್ಲಿ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮುಖ್ಯಾಂಶಗಳು

  • ಸಿಎಎ ಕಾಯ್ದೆ ಅಡಿಯಲ್ಲಿನ ನಿಯಮಗಳನ್ನು ಕೇಂದ್ರ ಸರ್ಕಾರ ಇನ್ನೂ ರೂಪಿಸಿಲ್ಲ. ಸಿಎಎ ಅಡಿ ಯಾರಿಗೂ ಈವರೆಗೆ ಪೌರತ್ವ ನೀಡಿಲ್ಲ.ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ಸಹ ಸಿಎಎ ಒದಗಿಸುತ್ತದೆ.
  • ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ ಪ್ರಕಾರ, ಗುಜರಾತ್‌ನ ಆನಂದ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ, ಜೈನ, ಸಿಖ್, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ವಲಸಿಗರಿಗೆ ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ ನಿಯಮಗಳು 2009ರ ನಿಯಮಗಳಿಗೆ ಅನುಗುಣವಾಗಿ, ಸೆಕ್ಷನ್ 5ರ ಅಡಿ ಭಾರತೀಯ ನಾಗರಿಕರೆಂದು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಅಥವಾ ಸೆಕ್ಷನ್ 6ರ ಅಡಿ ದೇಶೀಕರಣ ಪ್ರಮಾಣಪತ್ರ ನೀಡಲಾಗುತ್ತದೆ.