Published on: May 16, 2023

“ಆಂಟಿಫ್ರೀಜ್ ಕಂಟೇನರ್”

“ಆಂಟಿಫ್ರೀಜ್ ಕಂಟೇನರ್”

ಸುದ್ದಿಯಲ್ಲಿ ಏಕಿದೆ? ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ(DFRL) ವಿಜ್ಞಾನಿಗಳು ಸಿಯಾಚಿನ್‌ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು “ಆಂಟಿಫ್ರೀಜ್ ಕಂಟೇನರ್” ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.
ಮುಖ್ಯಾಂಶಗಳು
• ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸೈನಿಕರು “ರಾಕ್-ಹಾರ್ಡ್” ಮೊಟ್ಟೆಗಳು, “ಟೊಮ್ಯಾಟೊ” ಮತ್ತು “ಜ್ಯೂಸ್ ಬ್ರಿಕ್ಸ್”ಗಳನ್ನು ಒಡೆಯುವ ವೀಡಿಯೊಗಳು ಕೆಲವು ವರ್ಷಗಳ ಹಿಂದೆ ವೈರಲ್ ಆದ ನಂತರ, ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಆರಂಭಿಸಿದರು.
• ಉದ್ದೇಶ : ಇದು ಎತ್ತರದ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳಿಗೆ “ರಾಕ್-ಹಾರ್ಡ್” ಮೊಟ್ಟೆಗಳು, “ಜ್ಯೂಸ್ ಬ್ರಿಕ್ಸ್” ಮತ್ತು ಹೆಪ್ಪುಗಟ್ಟಿದ ಹಣ್ಣುಗಳು ಹಾಗೂ ತರಕಾರಿಗಳ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
• ಪ್ರಯೋಜನ : “ಈ ಆಂಟಿಫ್ರೀಜ್ ಇನ್ಸುಲೇಟೆಡ್ ಕಂಟೇನರ್‌ನೊಂದಿಗೆ, ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಬಹುದು ಅಥವಾ ಸಂಗ್ರಹಿಸಬಹುದು. ಸುಮಾರು 90 ಗಂಟೆಗಳ ಕಾಲ ಘನೀಕರಿಸುವ ಮತ್ತು ತಣ್ಣಗಾಗದಂತೆ ತಾಜಾತನವನ್ನು ಉಳಿಸಿಕೊಳ್ಳಬಹುದು. ಈ ಕಂಟೇನರ್‌ ಗೆ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯವಿಲ್ಲ.
‘ಆಯುಷ್ಮಾನ್ ಅಸೋಮ್ – ಮುಖ್ಯ ಮಂತ್ರಿ ಜನ್ ಆರೋಗ್ಯ ಯೋಜನೆ’
ಸುದ್ದಿಯಲ್ಲಿ ಏಕಿದೆ? ಅಸ್ಸಾಂ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ‘ಆಯುಷ್ಮಾನ್ ಅಸೋಮ್ – ಮುಖ್ಯ ಮಂತ್ರಿ ಜನ್ ಆರೋಗ್ಯ ಯೋಜನೆ’ಯನ್ನು ಪ್ರಾರಂಭಿಸಿದೆ.
ಮುಖ್ಯಾಂಶಗಳು
• ಆರಂಭದಲ್ಲಿ 26 ಲಕ್ಷ ಕುಟುಂಬಗಳನ್ನು ಒಳಗೊಂಡಿರಲಿದೆ.
• ‘ಆಯುಷ್ಮಾನ್ ಅಸೋಮ್’ ಯೋಜನೆಯ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿಪಟ್ಟಿ ಮಾಡಲ್ಪಟ್ಟವರಾಗಿರುತ್ತಾರೆ.
• ಈ ಯೋಜನೆಯು ರಾಜ್ಯದಲ್ಲಿ ಪಟ್ಟಿ ಮಾಡಲಾದ 300ಕ್ಕೂ ಆಸ್ಪತ್ರೆಗಳಲ್ಲಿ 1,578 ವೈದ್ಯಕೀಯ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉನ್ನತಿ ಮತ್ತುಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ‘ಅಂತ್ಯೋದಯ’ದ ನಿರಂತರ ಅನ್ವೇಷಣೆಯು ‘ಮುಖ್ಯ ಮಂತ್ರಿ ಜನ ಆರೋಗ್ಯ ಯೋಜನೆ’ಯ ಹಿಂದಿನ ಪ್ರೇರಕ ಅಂಶವಾಗಿದೆ.
• ಅಟಲ್ ಅಮೃತ್ ಅಭಿಯಾನ್ ಸೊಸೈಟಿಯು ಹೊಸ ಯೋಜನೆಯ ದೈನಂದಿನ ಕಾರ್ಯಾಚರಣೆಗಳಿಗೆ ಜವಾಬ್ದಾರವಾಗಿರುತ್ತದೆ.
• ಆಗಸ್ಟ್ 15 ರಿಂದ ಅಸ್ಸಾಂ ಸರ್ಕಾರದ ಉದ್ಯೋಗಿಗಳಿಗೆ ಆರೋಗ್ಯ ಯೋಜನೆಯಾದ ‘ಮುಖ್ಯ ಮಂತ್ರಿ ಲೋಕ ಸೇವಾ ಆರೋಗ್ಯ ಯೋಜನೆ’ಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಯಿತು.
ಉದ್ದೇಶ: ಕೆಲವು ಮಿತಿಗಳ ಕಾರಣದಿಂದಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಅನೇಕ ಕುಟುಂಬಗಳು ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯಿಂದ ಹೊರಗುಳಿದಿವೆ, ಹೊಸ ಯೋಜನೆಯು ಹೊರಗುಳಿದ ಕುಟುಂಬಗಳಿಗೆ ಅದೇ ರೀತಿಯ ನಗದು ರಹಿತ ಆರೋಗ್ಯ ಪ್ರಯೋಜನಗಳನ್ನು ಖಚಿತಪಡಿಸುತ್ತದೆ. ಈ ಮೂಲಕ ಸರಳವಾಗಿ ಆರೋಗ್ಯ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.