Published on: November 18, 2021

‘ಆಪರೇಷನ್ ಹರ್ಕ್ಯುಲಸ್’

‘ಆಪರೇಷನ್ ಹರ್ಕ್ಯುಲಸ್’

ಸುದ್ಧಿಯಲ್ಲಿ ಏಕಿದೆ ?   ಉತ್ತರ ವಲಯದಲ್ಲಿ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಜಂಟಿ ಸಮರಾಭ್ಯಾಸ ನಡೆಸಿದವು. ಈ ಕಾರ್ಯಾಚರಣೆಗೆ ‘ಆಪರೇಷನ್ ಹರ್ಕ್ಯುಲಸ್’ ಎಂದು ಹೆಸರಿಸಡಲಾಗಿತ್ತು.

  • ಈ ಪ್ರಯತ್ನವು ಭಾರತೀಯ ವಾಯುಪಡೆಯ ಅಂತರ್ಗತ ಹೆವಿ-ಲಿಫ್ಟ್ ಸಾಮರ್ಥ್ಯದ ವಾಸ್ತವ ಪ್ರದರ್ಶನವಾಗಿದೆ. ಈ ಹಿಂದೆ ಯಾವುದೇ ಆಕಸ್ಮಿಕ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
  • ಏರ್ ಲಿಫ್ಟ್ ಗಾಗಿ ಸಿ-17, ಐಎಲ್ -76 ಮತ್ತು ಎಎನ್ -32 ವಿಮಾನಗಳನ್ನು ಬಳಸಲಾಯಿತು. ಇವುಗಳು ಪೂರ್ವ ಏರ್ ಕಮಾಂಡ್ ವಾಯುನೆಲೆಯಿಂದ ಟೇಕ್ ಆಫ್ ಆದವು. ಮುಂದಿನ 4-5 ತಿಂಗಳುಗಳವರೆಗೆ ಭಾರತದ ಉಳಿದ ಪ್ರದೇಶಗಳಿಂದ ಈ ಪ್ರದೇಶ ಕಡಿತಗೊಳ್ಳುವುದರಿಂದ ಸಾಕಷ್ಟು ಪಡಿತರ, ಸಂಪನ್ಮೂಲಗಳ ಅಗತ್ಯವಿದೆ.