Published on: December 3, 2022

‘ಆಫ್ರಿಕನ್ ವಿಲೇಜ್’ ಮತದಾರರು

‘ಆಫ್ರಿಕನ್ ವಿಲೇಜ್’ ಮತದಾರರು

ಸುದ್ದಿಯಲ್ಲಿ ಏಕಿದೆ?

ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ ಮತದಾನದ ಹಕ್ಕನ್ನು ನೀಡಲಾಗಿದೆ.

ಮುಖ್ಯಾಂಶಗಳು

  • ಗುಜರಾತ್‌ನ ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿ ಗುಜರಾತ್‌ನ ಆಫ್ರಿಕನ್ ವಿಲೇಜ್ ಎಂದು ಖ್ಯಾತಿಯಾಗಿದೆ.
  • ಇಲ್ಲಿ ಕರ್ನಾಟಕದ ಸಿದ್ಧಿ ಜನಾಂಗವನ್ನು ಹೋಲುವಂತಹಆಫ್ರಿಕನ್ ಮೂಲದ ಬುಡಕಟ್ಟು ಸಮುದಾಯವಿದ್ದು, ಅವರಿಗೆ ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ನೀಡಲಾಗಿದೆ.
  • ಏಳನೇ ಶತಮಾನದಲ್ಲಿ ಅರಬ್ ಮಾರ್ಗವಾಗಿ ಗುಜರಾತ್‌ಗೆ ಈ ಜನಾಂಗದವರು ಬಂದು ನೆಲೆಸಿದ್ದಾರೆ. ತಮ್ಮ ಸಮುದಾಯದಲ್ಲಿ ಮಾತ್ರ ವಿವಾಹವಾಗುವ ಇವರು, ಗುಜರಾತಿ ಭಾಷೆ, ಸಂಸ್ಕೃತಿಯಲ್ಲಿ ಬೆರೆತಿದ್ದಾರೆ.

ಸಿದ್ಧಿ ಜನಾಂಗ

  • ಸಿದ್ದಿ, ಸಿದ್ಧಿ, ಸಿದಿ, ಶೀದಿ, ಹಬ್ಶಿ, ಸವಾಹಿಲಿ ಎಂದು ಮುಂತಾದ ಹೆಸರುಗಳಿಂದ ಗುರ್ತಿಸಲ್ಪಡುವ ಇವರು ಮೂಲತಃ ಪೂರ್ವ ಮತ್ತು ಆಗ್ನೇಯ ಆಫ್ರಿಕಾದ ಬಂಟುಸಮುದಾಯಕ್ಕೆ ಸೇರಿದವರು.
  • ಸಿದ್ದಿಗಳು ಭಾರತದ ಗುಜರಾತ್, ಆಂದ್ರಪ್ರದೇಶ ಮತ್ತು ಕರ್ನಾಟಕದಕೆಲವು ಭಾಗಗಳಲ್ಲಿ ನೆಲೆಸಿರುವುದಂತೂ ಸತ್ಯ. ಅವರಲ್ಲಿ ಬಹಳಷ್ಟು ಜನ ಭಾರತದ ಸ್ವಾತಂತ್ರ್ಯಾ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು.
  • ಇಸ್ಲಾಂ ಧರ್ಮದ ಅನುಯಾಯಿಗಳಾದ ಇವರು ಮಹಮದ್ ಬಿನ್ ಕಾಸಿಮ್ನ ಅರಬ್ ಸೇನಾಪಡೆಯಲ್ಲಿ ಸೈನಿಕರಾಗಿ ಕೂಡಾ ಕೆಲಸ ನಿರ್ವಹಿಸಿದ ಮಾಹಿತಿ ಸಿಗುತ್ತದೆ. ಅಲ್ಲಿ ಅವರನ್ನ ಝಾಂಜಿಸ್ ಎಂದು ಕರೆಯಲಾಗುತ್ತಿತ್ತು.
  • ಹದಿನಾರು ಮತ್ತು ಹದಿನೇಳನೇ ಶತಮಾನದಲ್ಲಿ ಫೋರ್ಚುಗೀಸರು ಇವರನ್ನ ಗೋವಾಕ್ಕೆ ಪೂರ್ವ ಆಫ್ರಿಕಾದಿಂದ ಕದ್ದು ತಂದರು ಎನ್ನಲಾಗುತ್ತದೆ. ಗೋವಾದಲ್ಲಿ ಅವರನ್ನ ತಮ್ಮ ಗುಲಾಮರನ್ನಾಗಿ ಇಟ್ಟುಕೊಂಡಿದ್ದರು..
  • ಇನ್ನೊಂದು ದಾಖಲೆಯ ಪ್ರಕಾರ ನವಾಬರು ತಮ್ಮ ಮಿಲಿಟರಿಯಲ್ಲಿನ ಕೂಲಿ ಕೆಲಸಕ್ಕಾಗಿ ಇವರನ್ನ ಕರೆತಂದರು ಎನ್ನಲಾಗುತ್ತದೆ.
  • ಪ್ರಸ್ತುತ ಇವರು ಕರ್ನಾಟಕದ ಉತ್ತರಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.