Published on: December 16, 2022

‘ಆಯುಷ್ಮತಿ’ ಕ್ಲಿನಿಕ್‌

‘ಆಯುಷ್ಮತಿ’ ಕ್ಲಿನಿಕ್‌

ಸುದ್ದಿಯಲ್ಲಿ ಏಕಿದೆ? ಮಹಿಳೆಯರಿಗೆ ಪ್ರತ್ಯೇಕ ಹಾಗು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭವಾಗಲಿದ್ದು, ಈ ಯೋಜನೆಗೆ ಜನವರಿಯಲ್ಲಿಚಾಲನೆ ನೀಡಲು ಆರೋ ಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಮುಖ್ಯಾಂಶಗಳು

  • ಈ ಕ್ಲಿನಿಕ್‌ನಲ್ಲಿ ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಸೇರಿ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಇರಲಿದ್ದಾರೆ.
  • ಇದು ಕೇವಲ ಮಹಿಳೆ ಯರಿಗಾಗಿಯೇ ಮೀಸಲಾದ ಕ್ಲಿನಿಕ್ಗಳು. ಇಲ್ಲಿನುರಿತ ಸ್ತ್ರೀರೋ ಗ ತಜ್ಞರು ಮಹಿಳೆ ಯರ ಆರೋ ಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆ ಹಾಗೂ ಆರೋ ಗ್ಯ ಸಲಹೆಗಳನ್ನು ನೀಡಲಿದ್ದಾರೆ.
  • ಈ ಯೋಜನೆಯನ್ನು ಆಯುಷ್ಮಾನ್ ಭಾರತ್ ಆರೋ ಗ್ಯ ಕರ್ನಾಟಕ ಯೋಜನೆಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.
  • ತಾಯಂದಿರು ಮತ್ತು ಶಿಶು ಮರಣ ತಪ್ಪಿಸಲು ‘ಆಯುಷ್ಮತಿ’ ಹೆಚ್ಚು ಸಹಕಾರಿಯಾಗಲಿವೆ.

ತಾಯಿ ಮತ್ತುಶಿಶು ಮರಣ ತಡೆ:

  • ರಾಜ್ಯದಲ್ಲಿ ಈಗಾಗಲೇ ಹೆರಿಗೆ ಸಂದರ್ಭದಲ್ಲಿತಾಯಿ ಮತ್ತುಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಇದನ್ನು ಮತ್ತಷ್ಟು ತಗ್ಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳು ನೆರವಾಗಲಿವೆ.
  • ಇಲ್ಲಿಗರ್ಭಿಣಿಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಸೇವನೆ ಹಾಗೂ ವೈಯಕ್ತಿಕ ಸ್ವಚ್ಛತೆಯ ಕುರಿತು ಸಲಹೆ, ಅಗತ್ಯ ಔಷಧಗಳ ಉಚಿತ ಪೂರೈಕೆಯಿಂದ ಗರ್ಭಿಣಿಯರಲ್ಲಿಸಾಮಾನ್ಯವಾಗಿ ಕಂಡುಬರುವ ರಕ್ತಹೀನತೆ, ಮಧುಮೇಹ, ರಕ್ತದೊ ತ್ತಡದಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿಸಂಭವಿಸು ತಾಯಿ ಮತ್ತುಶಿಶುಗಳ ಮರಣ ಪ್ರಮಾಣವನ್ನು ತಡೆಯಬಹುದಾಗಿದೆ.

ಉದ್ದೇಶ

ಮಹಿಳೆ ಯರು ಕೆಲಸದ ನಡುವೆ ತಮ್ಮ ಆರೋ ಗ್ಯದ ಬಗ್ಗೆಕಾಳಜಿ ವಹಿಸುವಲ್ಲಿನಿರ್ಲಕ್ಷ್ಯ ವಹಿಸುತ್ತಾರೆ. ಪರಿಣಾಮ ಆರೋಗ್ಯ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಹೋಗುತ್ತಾರೆ. ಇದಕ್ಕೆ ಪರಿಹಾರವಾಗಿ ಹಾಗೂ ಆರಂಭದಲ್ಲೇ ಆರೋಗ್ಯ ಸಮಸ್ಯೆ ಗುರುತಿಸಿ ಸೂಕ್ತಚಿಕಿತ್ಸೆ ಒದಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳನ್ನು ತೆರೆಯಲಾಗುತ್ತಿದೆ.

ಕ್ಲಿನಿಕ್ಗಳಲ್ಲಿ ಲಭ್ಯವಾಗುವ  ಸೇವೆಗಳು:

ಚಿಕ್ಕ ಮತ್ತು ಹದಿಹರೆಯದ ಹೆಣ್ಣುಮಕ್ಕಳಿಂದ ಹಿಡಿದು ಎಲ್ಲಾವಯೋಮಾನದ ಮಹಿಳೆ ಯರಿಗೆ ಆರೋ ಗ್ಯ ಸೇವೆ ದೊ ರೆಯಲಿದೆ. ಮಹಿಳೆ ಯರಲ್ಲಿಹೆಚ್ಚಾಗಿ ಕಂಡುಬರುವ ಮುಟ್ಟಿನ ತೊಂ ದರೆ, ಮಧುಮೇಹ, ರಕ್ತದೊತ್ತಡ, ಬೊ ಜ್ಜು, ಸಂಧಿವಾತ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ, ಗರ್ಭಿಣಿಯರಿಗೆ 9 ತಿಂಗಳ ಕಾಲ ಹಾಗೂ ಬಾಣಂತಿಯರ ಆರೋ ಗ್ಯ ತಪಾಸಣೆ ಮತ್ತುನವಜಾತ ಶಿಶುಗಳ ಸಮಗ್ರ ಅರೈಕೆಯ ಸಲಹೆ, ಗರ್ಭನಿರೋ ಧಕ ಸೇವೆಗಳು, ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿ ಮಹಿಳೆ ಯರಿಗೆ ಸಂಬಂಧಿಸಿದ ಎಲ್ಲಬಗೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು.

4 ಫರ್ಟಿಲಿಟಿ ಕ್ಲಿನಿಕ್ :

ಬಂಜೆತನ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯದಲ್ಲಿಬೆಂಗಳೂರು, ಬೆಳಗಾವಿ, ಮೈಸೂರು ಮತ್ತುಕಲಬುರಗಿ ಕಂದಾಯ ವಿಭಾಗಗಳಲ್ಲಿತಲಾ ಒಂದು ಫರ್ಟಿಲಿಟಿ ಸೆಂಟರ್ಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಈ ಕೇಂದ್ರಗಳನ್ನು ಆರಂಭಿಸುತ್ತಿರುವುದು ದೇಶದಲ್ಲಿಇದು ಮೊದಲು.

ಫರ್ಟಿಲಿಟಿ ಕ್ಲಿನಿಕ್ ತೆರೆಯಲು ಕಾರಣ :

ಬದಲಾದ ಜೀವನ ಶೈಲಿ ಮತ್ತುಆಹಾರ ಕ್ರಮ ಹಾಗೂ ಒತ್ತಡದಿಂದಾಗಿ ಬಹಳಷ್ಟು ದಂಪತಿಗಳಲ್ಲಿಫಲವತ್ತತೆಯ ಸಮಸ್ಯೆ ಹೆಚ್ಚುತ್ತಿದೆ. ಹಾಗಾಗಿ ಬಹಳಷ್ಟು ಮಂದಿ ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇದಕ್ಕೆ ಬಡ ಹಾಗೂ ಮಧ್ಯಮ ವರ್ಗದವರಿಗೆ ಉಚಿತ ಇಲ್ಲವೆ ಕಡಿಮೆ ದರದಲ್ಲಿಐವಿಎಫ್ ಚಿಕಿತ್ಸೆ ಒದಗಿಸಲು ‘ಫರ್ಟಿಲಿಟಿ ಸೆಂಟರ್’ ಪ್ರಾರಂಭಿಸಲಾಗುತ್ತಿದೆ.