Published on: September 27, 2021

‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’

‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’

ಸುದ್ಧಿಯಲ್ಲಿ ಏಕಿದೆ?   ಆರೋಗ್ಯ ಕುರಿತ ಸಮಗ್ರ ವಿವರಗಳುಳ್ಳ ಡಿಜಿಟಲ್‌ ಆರೋಗ್ಯ ಕಾರ್ಡ್ ವಿತರಿಸುವ ‘ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಯೋಜನೆಯ ಹಿನ್ನಲೆ ಮತ್ತು ವ್ಯಾಪ್ತಿ

  • ಯೋಜನೆಯ ಪೈಲಟ್ ಕಾರ್ಯಕ್ರಮವನ್ನು ಮೋದಿ 2020ರ ಆಗಸ್ಟ್‌ 15ರಂದು ಪ್ರಕಟಿಸಿದ್ದರು. ಪ್ರಸ್ತುತ ಇದನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆಯುಷ್ಮಾನ್ ಭಾರತ್‌ ಪ್ರಧಾನಮಂತ್ರಿ ಆರೋಗ್ಯ ಯೋಜನೆಯ (ಎಬಿ ಪಿಎಂ ಜೆಎವೈ) 3ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶವ್ಯಾಪಿ ವಿಸ್ತರಿಸಲಾಗುತ್ತದೆ.

ಗುರಿ

  • ಜನ್‌ಧನ್‌, ಆಧಾರ್‌ ಸಂಖ್ಯೆ ನೋಂದಣಿ ಮಾದರಿಯಲ್ಲಿಯೇ ಜಾರಿಗೊಳ್ಳುವ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯು ವಿಸ್ತೃತ ವಿವರ, ಮೂಲಸೌಲಭ್ಯ ಸೇವೆ ಒದಗಿಸುವ ಗುರಿ ಹೊಂದಿದೆ. ಇದೇ ವೇಳೆ ಆರೋಗ್ಯಕ್ಕೆ ಸಂಬಂಧಿಸಿದ ವ್ಯಕ್ತಿಗತ ವಿವರಗಳನ್ನು ಗೋಪ್ಯವಾಗಿಡಲೂ ಒತ್ತು ನೀಡಲಾಗುತ್ತದೆ. ನಾಗರಿಕರ ಸಮ್ಮತಿಯನ್ನು ಆಧರಿಸಿ ಆರೋಗ್ಯ ದಾಖಲೆಗಳ ವಿನಿಮಯಕ್ಕೂ ಅವಕಾಶವಿದೆ

ಏನಿದು ಯೋಜನೆ ?

  • ಈ ಯೋಜನೆಯ ಪ್ರಮುಖ ಅಂಶವೆಂದರೆ ಡಿಜಿಟಲ್ ಆರೋಗ್ಯ ಗುರುತು ಚೀಟಿ ವ್ಯಕ್ತಿಯ ಆರೋಗ್ಯ ಖಾತೆಯಾಗಿರಲಿದೆ. ಸಮಗ್ರ ಆರೋಗ್ಯ ವಿವರಗಳನ್ನು ಹೊಂದಿರಲಿದೆ. ಇದನ್ನು ಮೊಬೈಲ್‌ ಅಪ್ಲಿಕೇಷನ್‌ನಲ್ಲೂ ವೀಕ್ಷಿಸಬಹುದಾಗಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗೆ ನೆರವಾಗುವಂತೆ ಆರೋಗ್ಯಸೇವೆ ವೃತ್ತಿಪರ ನೋಂದಣಿ (ಎಚ್‌ಆರ್‌ಆರ್), ಆರೋಗ್ಯ ಸೇವೆಯ ಸೌಲಭ್ಯ ನೋಂದಣಿ (ಎಚ್‌ಎಫ್‌ಆರ್‌)ಯಲ್ಲಿಯೂ ಈ ವ್ಯಕ್ತಿಗತ ಮಾಹಿತಿಗಳು ಲಭ್ಯವಿರಲಿವೆ.

ಯೋಜನೆಯ ಲಾಭಗಳು

  • ಜನ್ ಧನ್, ಆಧಾರ್ ಮತ್ತು ಮೊಬೈಲ್ (JAM) ಮತ್ತು ಸರ್ಕಾರದ ಇತರ ಡಿಜಿಟಲ್ ಯೋಜನೆಗಳ ಆಧಾರದ ಮೇಲೆ, PM-DHM ಡೇಟಾ, ಮಾಹಿತಿ, ಮೂಲಸೌಕರ್ಯ ಸೇವೆಗಳು ಇತ್ಯಾದಿಗಳ ಮೂಲಕ ತಡೆರಹಿತ ಆನ್‌ಲೈನ್ ವೇದಿಕೆಯನ್ನು ಸೃಷ್ಟಿಸುತ್ತದೆ. PM-DHM ನ ಪ್ರಮುಖ ಅಂಶಗಳಲ್ಲಿ ಪ್ರತಿ ನಾಗರಿಕರಿಗೆ ಆರೋಗ್ಯ ID, ಒಂದು ಅನನ್ಯ 14-ಅಂಕಿಯ ಆರೋಗ್ಯ ಗುರುತಿಸುವಿಕೆ, ಇದು ಅವರ ಆರೋಗ್ಯ ಖಾತೆಯಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಆರೋಗ್ಯ ID ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯ ಭಂಡಾರವಾಗಿರುತ್ತದೆ.
  • ಈ ಕ್ರಮವು ವೈದ್ಯರು, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆ ಸಂಸ್ಥೆಗಳ ಮೇಲಿನ ಒತ್ತಡವನ್ನು ಕುಗ್ಗಿಸಲಿದೆ. ಜನರೂ ಒಂದು ಕ್ಲಿಕ್‌ ಮೂಲಕ ಆರೋಗ್ಯಸೇವೆ ಸೌಲಭ್ಯ ಪಡೆಯಲು ನೆರವಾಗಲಿದೆ
  • ಡಿಜಿಟಲ್‌ ಆರೋಗ್ಯ ಕಾರ್ಡ್‌ ವಿತರಿಸುವ ಈ ಯೋಜನೆಯು ದೇಶದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವ ಕಾರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಆಯುಷ್ಮಾನ್‌ ಭಾರತ್ ಡಿಜಿಟಲ್ ಮಿಷನ್‌ ರೋಗಿಗಳ ರಕ್ಷಣೆ, ಉತ್ತಮ ಚಿಕಿತ್ಸೆ ಒದಗಿಸುವುದಕ್ಕೆ ಪೂರಕವಾಗಿ ವಿಶ್ವಾಸಾರ್ಹವಾದ ಮಾಹಿತಿಯನ್ನು ಒದಗಿಸಲಿದೆ. ಆರೋಗ್ಯ ದಾಖಲೆಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ರಕ್ಷಿಸಲಾಗುತ್ತದೆ. ದೇಶದ ಬಡ ವರ್ಗದವರು ಈ ಯೋಜನೆಯಿಂದ ಹೆಚ್ಚಿನ ಲಾಭ ಪಡೆಯಲಿದ್ದಾರೆ
  • ಬಡವರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಯಾವ ಡೇಟಾವನ್ನು ಸೇರಿಸಲಾಗುವುದು?

  • ಈ ಆರೋಗ್ಯ ಖಾತೆಯು ಪ್ರತಿ ಪರೀಕ್ಷೆ, ಪ್ರತಿ ರೋಗ, ವೈದ್ಯರ ಭೇಟಿ, ಔಷಧಿಗಳು ಮತ್ತು ರೋಗನಿರ್ಣಯದ ವಿವರಗಳನ್ನು ಒಳಗೊಂಡಿರುತ್ತದೆ. ರೋಗಿಯು ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡರೂ ಮತ್ತು ಹೊಸ ವೈದ್ಯರನ್ನು ಭೇಟಿ ಮಾಡಿದರೂ ಈ ಮಾಹಿತಿ ಪೋರ್ಟಬಲ್ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ್ದರಿಂದ ಇದು ತುಂಬಾ ಉಪಯುಕ್ತವಾಗಿದೆ.