Published on: April 23, 2022

ಆಯುಷ್ ಮಾರ್ಕ್’

ಆಯುಷ್ ಮಾರ್ಕ್’

ಸುದ್ಧಿಯಲ್ಲಿ ಏಕಿದೆ?  ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸುವುದಕ್ಕಾಗಿ ಶೀಘ್ರದಲ್ಲೇ ‘ಆಯುಷ್ ಮಾರ್ಕ್’ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆ

ಎಲ್ಲಿ ನಡೆಯಿತು ?

  • ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರ

ಮುಖ್ಯಾಂಶಗಳು

  • ಆಯುಷ್ ಉತ್ಪನ್ನಗಳ ಗುಣಮಟ್ಟಕ್ಕೆ ಕಾರಣವಾಗುವ ಸಾಂಪ್ರದಾಯಿಕ ಔಷಧ ಉತ್ಪನ್ನಗಳನ್ನು ಗುರುತಿಸಿ ದೃಢೀಕರಿಸಲಾಗುವುದು.
  • ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಆಯುಷ್ ಔಷಧಿಗಳು ವ್ಯಾಪಕ ಕೊಡುಗೆ ನೀಡಿವೆ. ಆಯುಷ್‌ನಲ್ಲಿ ಹೂಡಿಕೆ ಮತ್ತು ಸಂಶೋಧನೆಯನ್ನು ಹೆಚ್ಚಿಸುವ ಅಗತ್ಯವಿದೆ. ಇದರಿಂದ ವಿಶ್ವದ ಹೆಚ್ಚಿನ ಜನಸಂಖ್ಯೆಗೆ ಉತ್ತಮ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸಬಹುದು. ಆಯುಷ್ ಕ್ಷೇತ್ರದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಿಂದ ರೈತರ ಆದಾಯವೂ ಹೆಚ್ಚುತ್ತದೆ ಹಾಗೂ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ.
  • ವಿಶ್ವದಲ್ಲಿ ಆಯುಷ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಆಯುಷ್‌ನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಆಯುಷ್ ಸ್ಟಾರ್ಟಪ್‌ಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆಯುಷ್ ಸ್ಟಾರ್ಟಪ್‌ನಲ್ಲೂ ಯುನಿಕಾರ್ನ್ ಆಗಲಿದೆ

ಆಯುಷ್ ವೀಸಾ ಬಗ್ಗೆ

  • ಸಾಂಪ್ರದಾಯಿಕ ಚಿಕಿತ್ಸೆಗಳಿಗಾಗಿ ಭಾರತಕ್ಕೆ ಬರುವವರಿಗಾಗಿ ‘ಆಯುಷ್ ವೀಸಾ’ ಕೆಟಗರಿಯನ್ನೂ ಆರಂಭಿಸಲಾಗುವುದು.
  • ಭಾರತೀಯ ಆಯುಷ್ ಉತ್ಪನ್ನಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ತೆರೆಯುತ್ತದೆ. ಇದರಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿಗರಿಗೆ ಅನುಕೂಲವಾಗಲಿದೆ

ಆಯುಷ್ ಟ್ರೇಡ್‌ಮಾರ್ಕ್

  • ಸುಮಾರು 50 ದೇಶಗಳೊಂದಿಗೆ ಆಯುಷ್ ಉತ್ಪನ್ನಗಳ ವಿನಿಮಯದ ಒಪ್ಪಂದಗಳಿಗೆ ಸರ್ಕಾರ ಸಹಿ ಹಾಕಿದೆ. ಇದಲ್ಲದೇ ಆಯುಷ್ ಟ್ರೇಡ್‌ಮಾರ್ಕ್ ಅನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಆಯುಷ್ ಉತ್ಪನ್ನಗಳ ಪ್ರಮಾಣೀಕರಣಕ್ಕೆ ಕಾರಣವಾಗುತ್ತದೆ.

ಆಯುಷ್ ಬಗ್ಗೆ

  • ಆಯುಷ್ ಎನ್ನುವುದು ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಶ ಮತ್ತು ಹೋಮಿಯೋಪಥಿ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ.