Published on: December 25, 2021

ಆಯುಷ್ ವಿಶ್ವವಿದ್ಯಾಲಯ

ಆಯುಷ್ ವಿಶ್ವವಿದ್ಯಾಲಯ

ಸುದ್ಧಿಯಲ್ಲಿ ಏಕಿದೆ ? ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ಸೇರಿಸುವ ದೂರದೃಷ್ಟಿಯೊಂದಿಗೆ, ರಾಜ್ಯ ಸರ್ಕಾರ ಶಿವಮೊಗ್ಗ ನಗರದ ಸಮೀಪದ ಸೋಗಾನೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯೋಜಿಸಿದೆ.

  • ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪಥಿ ಮತ್ತು ಟಿಬೆಟಿಯನ್ ಔಷಧ ಪದ್ಧತಿಗಳ ಮೇಲೆ ಆಯುಷ್ ವಿಶ್ವವಿದ್ಯಾಲಯ ಬೆಳಕು ಚೆಲ್ಲಲಿದೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆಯಾಗಲಿರುವ ಇಂತಹ ವಿಶ್ವವಿದ್ಯಾನಿಲಯದಿಂದ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಆಗಲಿದೆ