Published on: July 20, 2023
ಆಯ್‌ಸ್ಟರ್ ಮ್ಯಾಕ್ರೋಸೈಬೆ ಅಭಿವೃದ್ಧಿ
ಆಯ್‌ಸ್ಟರ್ ಮ್ಯಾಕ್ರೋಸೈಬೆ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ? ಅಧಿಕ ತಾಪಮಾನದಲ್ಲಿ ಬೆಳೆಯುವ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಅಣಬೆ ತಳಿಗಳನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್ಆರ್) ಅಭಿವೃದ್ಧಿಪಡಿಸಿದೆ.
ಮುಖ್ಯಾಂಶಗಳು
- ಮ್ಯಾಕ್ರೋ ಸೈಬೆ ತಳಿ ಹೆಸರಿನ ಅಣಬೆಯನ್ನು ಬೆಂಗಳೂರಿನ ಸಿದ್ದಾಪುರದಿಂದ ಸಂಗ್ರಹಿಸಲಾಗಿದ್ದು, ಟ್ಯೂಬರ್ ಆಯ್ಸ್ಟರ್ ಅಣಬೆಯನ್ನು ತ್ರಿಪುರಾದ ಮಾರುಕಟ್ಟೆಯಿಂದ ಸಂಗ್ರಹಿಸಲಾಗಿದೆ.
- ಭಾರತದಲ್ಲಿಯೇ ಮೊದಲ ಬಾರಿಗೆ ಈ ಎರಡು ಅಣಬೆಗಳ ವಾಣಿಜ್ಯ ಉತ್ಪಾದನಾ ತಂತ್ರಜ್ಞಾನವನ್ನು ಐಐಎಚ್ಆರ್ ಅಭಿವೃದ್ಧಿಪಡಿಸಿದೆ.
- ‘ಭಾರತದಲ್ಲಿ ಇದುವರೆಗೂ ಹಾಲು ಅಣಬೆಯನ್ನು (ಮಿಲ್ಕಿ)ಮಾತ್ರ ಹೆಚ್ಚಿನ ತಾಪಮಾನದಲ್ಲಿ ಬೆಳೆಯಲಾಗುತ್ತಿತ್ತು. ಈಗ ಮ್ಯಾಕ್ರೋ ಸೈಬೆ ಅಣಬೆಯು ಹೆಚ್ಚಿನ ತಾಪಮಾನದಲ್ಲಿ ಬೆಳೆಯುವ ಮತ್ತೊಂದು ಅಣಬೆಯಾಗಿದೆ.
ಮ್ಯಾಕ್ರೋ ಸೈಬೆ
- ಹಾಲು ಅಣಬೆಗಿಂತ ಅಧಿಕ ಪ್ರೋಟೀನ್, ಪೋಷಕಾಂಶ, ಹೆಚ್ಚು ರುಚಿಕರವಾಗಿರವಾಗಿದೆ’. ‘ಮೈಕ್ರೋ ಸೈಬೆ ಅಣಬೆಯನ್ನು 30–40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ ಶೇ 85ರಷ್ಟು ಆರ್ದ್ರತೆಯಲ್ಲಿ ಬೆಳೆಯಬಹುದು. ಕೇವಲ ಕಡಿಮೆ ತಾಪಮಾನದಲ್ಲಿ ಬೆಳೆಯಲಾಗುತ್ತಿದ್ದ ಅಣಬೆಯನ್ನು ಈಗ, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳು ಸೇರಿ ಅಧಿಕ ತಾಪಮಾನವಿರುವ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯಬಹುದು’.
‘ಟ್ಯೂಬರ್ ಆಯ್ಸ್ಟರ್
- ಅಣಬೆಯನ್ನು ಈಶಾನ್ಯ ರಾಜ್ಯಗಳಲ್ಲಿ ಮಳೆಗಾಲದಲ್ಲಿ ಮಾತ್ರ ಸಂಗ್ರಹಿಸಿ ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.
- ಐಐಎಚ್ಆರ್ ಈ ಅಣಬೆಯನ್ನು ಸಂಗ್ರಹಿಸಿ ಸತತ ನಾಲ್ಕು ವರ್ಷಗಳ ಸಂಶೋಧನೆಮಾಡುವುದರ ಮೂಲಕ ಅಭಿವೃದ್ಧಿಪಡಿಸಿದೆ. ಈಗ ಟ್ಯೂಬರ್ ಆಯ್ಸ್ಟರ್ ಅಣಬೆಯನ್ನು ಈಶಾನ್ಯ ರಾಜ್ಯಗಳಲ್ಲಿ ವರ್ಷದ ಯಾವುದೇ ಋತುಮಾನದಲ್ಲಿ ಸುಲಭವಾಗಿ ಬೆಳೆಯಬಹುದು.
- ಈ ಅಣಬೆಯಲ್ಲಿ ಶೇ 40.34 ರಷ್ಟು ಪೌಷ್ಟಿಕಾಂಶ ಇದೆ. ಇದರಲ್ಲಿ ಮಕ್ಕಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಬಹುದು.
- ಈ ಅಣಬೆಯು ಶೇ. 28-32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ ಶೇ 85 ರಷ್ಟು ಆರ್ದ್ರತೆಯಲ್ಲಿ ಬೆಳೆಯಬಹುದು’.
ವಿಶೇಷತೆ
- ಬಹುತೇಕ ಜನ ಅಣಬೆಯನ್ನು ಮಾಂಸಾಹಾರವೆಂದು ಭಾವಿಸುತ್ತಾರೆ. ವಾಸನೆ ಇರುತ್ತದೆ ಎಂದು ತಾಜಾ ಅಣಬೆ ತಿನ್ನಲು ಹಲವು ಜನ ಇಷ್ಟಪಡುವುದಿಲ್ಲ. ಆದರೆ, ಐಐಎಚ್‍ಆರ್ ಅಣಬೆಯಿಂದ ಚಟ್ನಿಪುಡಿ, ರಸಂ ಪುಡಿ ತಯಾರಿಸಿದ್ದು, ಈ ಪುಡಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಯಾವುದೇ ತರಹದ ವಾಸನೆ ಬರುವುದಿಲ್ಲ.ಮಾಮೂಲಿ ರಸಂ , ಚಟ್ನಿಯಂತೆಯೇ ಇರುತ್ತದೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್ಆರ್)
- ಕೇಂದ್ರ ಕಛೇರಿ: ಬೆಂಗಳೂರು
- ಸ್ಥಾಪನೆ: 1967
- ಸ್ಥಾಪಕರು: ಭಾರತೀಯ ಕೃಷಿ ಸಂಶೋಧನೆಯ ಮಂಡಳಿ
- ಇದು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತದಲ್ಲಿ ಹಣ್ಣುಗಳು, ತರಕಾರಿ, ಅಲಂಕಾರಿಕ, ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯಗಳು ಮತ್ತು ಅಣಬೆಗಳಂತಹ ನಿರೀಕ್ಷಿತ ಮತ್ತು ಅನ್ವಯಿಕ ಸಂಶೋಧನೆಗಳಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.