Published on: October 7, 2021

‘ಆರ್ಟ್ ವಿಡಿಯೋ ವಾಲ್’

‘ಆರ್ಟ್ ವಿಡಿಯೋ ವಾಲ್’

ಸುದ್ಧಿಯಲ್ಲಿ ಏಕಿದೆ? ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ.

  • ಈ ಗೋಡೆ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ವರ್ಧಿತ ಪದರವನ್ನು ನೀಡಲಿದ್ದು ದೇಶದಲ್ಲಿ ಇಂಥಹದ್ದೊಂದು ಪ್ರಯೋಗ ಇದೇ ಮೊದಲಾಗಿದೆ.
  • 16 ಅಡಿ ಉದ್ದ 10 ಅಡಿ ಅಗಲ ಅಳತೆಯಿರುವ ಈ ಗೋಡೆಗೆ 16 ವಿಂಡೋಗಳಿದ್ದು ಏಕ ಕಾಲಕ್ಕೆ ರೈಲ್ವೆ ನಿಲ್ದಾಣದಾದ್ಯಂತ ವಿವಿಧ ಭಾಗಗಳಲ್ಲಿ ಕಣ್ಗಾವಲು ವಹಿಸುವುದಕ್ಕೆ ಸಹಕಾರಿಯಾಗಲಿದ್ದು ಕೃತಕ ಬುದ್ಧಿಮತ್ತೆ ಆಧರಿತ ಚಾಲನೆಯನ್ನು ಹೊಂದಿದೆ. ಅರ್ ಪಿಎಫ್ ಈ ವ್ಯವಸ್ಥೆಯ ಕಮಾಂಡ್ ನಿಯಂತ್ರಣ ಕೇಂದ್ರವನ್ನು ನಿಭಾಯಿಸಲಿದೆ.
  • ಈ ಹೊಸ ವ್ಯವಸ್ಥೆ ಆರ್ ಪಿಎಫ್ ಪ್ನ್ ( ಓಮ್ನಿಪ್ರೆಸೆಂಟ್ ನೆಟ್ವರ್ಕ್ ಎನ್ಸೆಂಬಲ್) ನ ಭಾಗವಗಿದ್ದು 2.2 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಕೆ ಮಾಡಲಾಗಿದೆ
  • ಫೇಶಿಯಲ್ ರೆಕಗ್ನಿಷನ್ ಗೆ ಸಿಸಿಟಿವಿ ಕ್ಯಾಮರಾವನ್ನು ಬಳಕೆ ಮಾಡಲಾಗುತ್ತದೆ. ಪೊಲೀಸರು ಧರಿಸುವ ಬಾಡಿ ಕ್ಯಾಮರಾಗಳು, ಬ್ಯಾಗೇಜ್ ಸ್ಕ್ಯಾನರ್ ಗಳು, ವಾಹನತಪಾಸಣೆ ಒಂದು ಭಾಗದಲ್ಲಿರಲಿದೆ. ಆಲ್ಗರಿದಂ ಫೀಡ್ ನ ಆಧಾರದಲ್ಲಿ 24*7 ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ.