Published on: November 14, 2021

ಆರ್ಬಿಐ ಯೋಜನೆ

ಆರ್ಬಿಐ ಯೋಜನೆ

ಸುದ್ಧಿಯಲ್ಲಿ ಏಕಿದೆ ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡು ನವೀನ ಮತ್ತು ಗ್ರಾಹಕ-ಕೇಂದ್ರಿತ ಯೋಜನೆಗಳು ಹೂಡಿಕೆಯ ಮಾರ್ಗಗಳನ್ನು ಹೆಚ್ಚಿಸುವುದಲ್ಲದೆ ಬಂಡವಾಳ ಮಾರುಕಟ್ಟೆಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ದೊರಕಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಯಾವುದು ಆ ಎರಡು ಯೋಜನೆಗಳು ?

  • ಆರ್ ಬಿಐ ರಿಟೇಲ್ ಡೈರೆಕ್ಟ್ ಯೋಜನೆ
  • ರಿಸರ್ವ್ ಬ್ಯಾಂಕ್-ಇಂಟಿಗ್ರೇಟೆಡ್ ಒಂಬಡ್ಸ್ ಮನ್ ಯೋಜನೆ

ಆರ್ ಬಿಐ ರಿಟೇಲ್ ಡೈರೆಕ್ಟ್ ಯೋಜನೆ: ಆರ್‌ಬಿಐ ರಿಟೇಲ್‌ ಡೈರೆಕ್ಟ್‌ ಯೋಜನೆಯು ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಬಾಂಡ್‌ ಮಾರುಕಟ್ಟೆಯು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ

  • ಯೋಜನೆಯ ಮೂಲಕ ಸಣ್ಣ ಹೂಡಿಕೆದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸುವ ಟ್ರೆಷರಿ ಬಾಂಡ್‌, ಟ್ರೆಷರಿ ಬಿಲ್‌ ಹಾಗೂ ಸಾಲಪತ್ರಗಳಲ್ಲಿ ನೇರವಾಗಿ ಹೂಡಿಕೆ ಮಾಡಬಹುದು. ಸಣ್ಣ ಹೂಡಿಕೆದಾರರು ಆರ್‌ಬಿಐ ಮೂಲಕ ತಮ್ಮ ಸರ್ಕಾರಿ ಸಾಲಪತ್ರ ಖಾತೆಯನ್ನು ಆನ್‌ಲೈನ್‌ ಮೂಲಕ ತೆರೆದು, ಉಚಿತವಾಗಿ ಖಾತೆಯ ನಿರ್ವಹಣೆ ಮಾಡಬಹುದಾಗಿದೆ.
  • ಏಕೀಕೃತ ಒಂಬುಡ್ಸ್‌ಮನ್‌ ಯೋಜನೆ: ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಯು ಗ್ರಾಹಕರ ದೂರುಗಳನ್ನು ಪರಿಹರಿಸುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶ ಹೊಂದಿದೆ. ಗ್ರಾಹಕರು ತಮ್ಮ ದೂರುಗಳನ್ನು ಹೇಳಿಕೊಳ್ಳಲು ಹತ್ತಾರು ಕಡೆ ತಿರುಗಬೇಕಿಲ್ಲ. ದೂರುಗಳನ್ನು ಹೇಳಿಕೊಳ್ಳಲು ಹಾಗೂ ಪರಿಹಾರ ಪಡೆಯಲು ಇರುವ ಮಾರ್ಗಗಳ ಬಗ್ಗೆ ಬಹುಭಾಷಾ ಸಹಾಯವಾಣಿಯು ಮಾಹಿತಿ ನೀಡಲಿದೆ
  • ಇಂಟಿಗ್ರೇಟೆಡ್ ಒಂಬಡ್ಸ್ ಮನ್ ಯೋಜನೆ ‘ಒಂದು ರಾಷ್ಟ್ರ-ಒಂದು ಲೋಕಪಾಲ್’-ಒಂದು ಪೋರ್ಟಲ್, ಒಂದು ಇಮೇಲ್ ಮತ್ತು ಒಂದು ವಿಳಾಸದೊಂದಿಗೆ ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ

ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸಿ ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತಗೊಳಿಸುತ್ತವೆ.