Published on: August 13, 2021

ಆಸ್ತಿ ನಗದೀಕರಣಕ್ಕೆ ಯೋಜನೆ

ಆಸ್ತಿ ನಗದೀಕರಣಕ್ಕೆ ಯೋಜನೆ

ಸುದ್ಧಿಯಲ್ಲಿ ಏಕಿದೆ?  ಸರಕಾರ ನಾನಾ ಇಲಾಖೆಗಳಲ್ಲಿನ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ನಗದೀಕರಣಗೊಳಿಸಲು ಯೋಜಿಸಿದೆ.

  • ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಪಿಜಿಸಿಐಎಲ್‌), ರಾಷ್ಟ್ರೀಯ ಹೆದ್ದಾರಿ ಮತ್ತಿತರ ವಲಯಗಳಲ್ಲಿ ಆಸ್ತಿ ನಗದೀಕರಣಕ್ಕೆ ಯೋಜಿಸಲಾಗಿದೆ
  • ಖಾಸಗಿ ಸಹಭಾಗಿತ್ವಕ್ಕೆ ಸಾಧ್ಯತೆ ಇರುವ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಯ ನಗದೀಕರಣ ನಡೆಯಲಿದೆ
  • ನೀತಿ ಆಯೋಗವು ರಾಷ್ಟ್ರೀಯ ಆಸ್ತಿ ನಗದೀಕರಣ ನೀಲನಕ್ಷೆ ತಯಾರಿಸಿದ್ದು, ಇಲಾಖೆಗಳಿಗೆ ಗುರಿ ನೀಡಲಾಗಿದೆ.

ಏನಿದು ಸರಕಾರಿ ಆಸ್ತಿ ನಗದೀಕರಣ?

  • ಸರಕಾರಕ್ಕೆ ಹೊಸ ಆದಾಯ ಮೂಲವನ್ನು ಸೃಷ್ಟಿಸಲು ಸರಕಾರದ ನಾನಾ ಇಲಾಖೆಯಲ್ಲಿ ಬಳಕೆಯಾಗದೆ ಉಳಿದಿರುವ ಅಥವಾ ಭಾಗಶಃ ಬಳಕೆಯಲ್ಲಿರುವ ಆಸ್ತಿಗಳ ಸಂಪೂರ್ಣ ಬಳಕೆಯನ್ನು ಆಸ್ತಿ ನಗದೀಕರಣ ಎನ್ನುತ್ತಾರೆ. ಇದು ಸಾರ್ವಜನಿಕ ಆಸ್ತಿಯ ಬಂಡವಾಳ ಹಿಂತೆಗೆತ ಅಥವಾ ಮಾರಾಟವಲ್ಲ. ಸಾರ್ವಜನಿಕ ಸ್ಥಿರ ಅಥವಾ ಚರ ಆಸ್ತಿಯ ಸಮಗ್ರ ಬಳಕೆ.
  • ರಸ್ತೆ, ರೈಲ್ವೆ ನಿಲ್ದಾಣ, ಮೊಬೈಲ್‌ ಗೋಪುರ, ಪೈಪ್‌ ಲೈನ್‌ ಇತ್ಯಾದಿ ಆಸ್ತಿಗಳನ್ನು ಬಳಸಿಕೊಂಡು ಸರಕಾರದ ಆದಾಯ ಹೆಚ್ಚಿಸುವುದು. ಇದಕ್ಕೆ ಖಾಸಗಿ ಸಹಭಾಗಿತ್ವವನ್ನೂ ಬಳಸಬಹುದು. ಸರಕಾರ 100 ಸರಕಾರಿ ಆಸ್ತಿಗಳ ನಗದೀಕರಣಕ್ಕೆ ಗುರುತಿಸಿದೆ.