Published on: October 22, 2021

ಆಹಾರ ಭದ್ರತೆ ಸೂಚ್ಯಂಕದಲ್ಲಿ ಭಾರತಕ್ಕೆ 71ನೇ ಸ್ಥಾನ

ಆಹಾರ ಭದ್ರತೆ ಸೂಚ್ಯಂಕದಲ್ಲಿ ಭಾರತಕ್ಕೆ 71ನೇ ಸ್ಥಾನ

ಸುದ್ಧಿಯಲ್ಲಿ ಏಕಿದೆ? ಜಾಗತಿಕ ಆಹಾರ ಭದ್ರತೆ (ಜಿಎಫ್‌ಎಸ್‌) ಸೂಚ್ಯಂಕದಲ್ಲಿ ಭಾರತವು 113 ದೇಶಗಳ ಪೈಕಿ 71ನೆಯ ಸ್ಥಾನ ಪಡೆದಿದೆ. ಕೈಗೆಟಕುವ ದರದಲ್ಲಿ ಆಹಾರ ಸಿಗುವ ವಿಚಾರದಲ್ಲಿ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಹಿಂದೆ ಇದೆ ಎಂದು ವರದಿಯೊಂದು ಹೇಳಿದೆ.

ವರದಿಯಲ್ಲಿ ಏನಿದೆ ?

  • ಎಕನಾಮಿಸ್ಟ್‌ ಇಂಪ್ಯಾಕ್ಟ್‌ ಮತ್ತು ಕಾರ್ಟೆವಾ ಅಗ್ರಿಸೈನ್ಸ್ ಸಂಸ್ಥೆಗಳು ಈ ವರದಿ ಸಿದ್ಧಪಡಿಸಿವೆ.
  • ಕೈಗೆಟಕುವ ದರದಲ್ಲಿ ಆಹಾರ ವಿಚಾರದಲ್ಲಿ ಪಾಕಿಸ್ತಾನವು (52.6 ಅಂಕ) ಭಾರತಕ್ಕಿಂತ (50.2 ಅಂಕ) ಹೆಚ್ಚಿನ ಅಂಕ ಪಡೆದಿದೆ, ಶ್ರೀಲಂಕಾ 62.9 ಅಂಕ ಪಡೆದಿದೆ.
  • ಐರ್ಲೆಂಡ್, ಆಸ್ಟ್ರೇಲಿಯಾ, ಬ್ರಿಟನ್, ಫಿನ್‌ಲೆಂಡ್‌, ಸ್ವಿಟ್ಜರ್ಲೆಂಡ್‌, ನೆದರ್ಲೆಂಡ್‌, ಕೆನಡಾ, ಜಪಾನ್, ಫ್ರಾನ್ಸ್‌ ಮತ್ತು ಅಮೆರಿಕ ಮೊದಲ ಸ್ಥಾನಗಳಲ್ಲಿ ಇವೆ. ಈ ದೇಶಗಳ ಜಿಎಫ್‌ಎಸ್‌ ಅಂಕವು 77.8ರಿಂದ 80ರ ನಡುವೆ ಇದೆ ಎಂದು ವರದಿಯು ಹೇಳಿದೆ.
  • ಜಿಎಫ್‌ಎಸ್‌ ಸೂಚ್ಯಂಕದಲ್ಲಿ ಪಾಕಿಸ್ತಾನ 75ನೆಯ ಸ್ಥಾನದಲ್ಲಿ, ಶ್ರೀಲಂಕಾ 77ರಲ್ಲಿ, ನೇಪಾಳ ಮತ್ತು ಬಾಂಗ್ಲಾದೇಶ ಕ್ರಮವಾಗಿ 79 ಮತ್ತು 84ನೆಯ ಸ್ಥಾನದಲ್ಲಿ ಇವೆ.
  • ಚೀನಾ ದೇಶವು 34ನೆಯ ಸ್ಥಾನದಲ್ಲಿದೆ. ಆಹಾರದ ಲಭ್ಯತೆ, ಗುಣಮಟ್ಟ, ಸುರಕ್ಷತೆ, ಆಹಾರ ಉತ್ಪಾದನೆಗಾಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಿಭಾಗಗಳಲ್ಲಿ ಭಾರತವು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕಿಂತ ಉತ್ತಮ ಸ್ಥಾನದಲ್ಲಿದೆ.
  • ಆಹಾರ ಭದ್ರತೆ ವಿಚಾರದಲ್ಲಿ ಹತ್ತು ವರ್ಷಗಳಲ್ಲಿ ಭಾರತದ ಅಂಕಗಳಲ್ಲಿ 2.7ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನದ ಅಂಕಗಳು 9ರಷ್ಟು, ನೇಪಾಳದ ಅಂಕಗಳು 7ರಷ್ಟು ಮತ್ತು ಬಾಂಗ್ಲಾದೇಶದ ಅಂಕಗಳು 4.7ರಷ್ಟು ಜಾಸ್ತಿ ಆಗಿವೆ.

ಮಾನದಂಡ

  • ಕೈಗೆಟಕುವ ದರದಲ್ಲಿ ಆಹಾರ, ಲಭ್ಯತೆ, ಗುಣಮಟ್ಟ, ಸುರಕ್ಷತೆ ಮಾನದಂಡಗಳ ಆಧಾರದಲ್ಲಿ ದೇಶಗಳಿಗೆ ಅಂಕ ನೀಡಲಾಗಿದೆ. ಆಹಾರ ಭದ್ರತೆಯನ್ನು ಸೂಚಿಸುವ 58 ಅಂಶಗಳನ್ನು ವರದಿಯು ಪರಿಗಣಿಸಿದೆ

ಕಾಳಜಿಗಳೇನು?

  • ಶೂನ್ಯ ಹಸಿವಿನ ಸುಸ್ಥಿರ ಅಭಿವೃದ್ಧಿ ಗುರಿಗೆ ಸಂಬಂಧಿಸಿದಂತೆ ಏಳು ವರ್ಷಗಳ ಪ್ರಗತಿಯ ನಂತರ ಜಾಗತಿಕ ಆಹಾರ ಭದ್ರತೆಯು ಸತತ ಎರಡನೇ ವರ್ಷ ಕಡಿಮೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ದೇಶಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, ಆಹಾರ ವ್ಯವಸ್ಥೆಗಳು ಇನ್ನೂ ಹವಾಮಾನ, ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಆಘಾತಗಳಿಗೆ ಗುರಿಯಾಗುತ್ತಿವೆ.