Published on: June 21, 2023

‘ಇಂಡಿ ಲಿಂಬೆ’ಗೆ ಭೌಗೋಳಿಕ (ಜಿಐ) ಮಾನ್ಯತೆ

‘ಇಂಡಿ ಲಿಂಬೆ’ಗೆ ಭೌಗೋಳಿಕ (ಜಿಐ) ಮಾನ್ಯತೆ

ಸುದ್ದಿಯಲ್ಲಿ ಏಕಿದೆ? ವಿಜಯಪುರ ಜಿಲ್ಲೆಯ ಇಂಡಿ ಲಿಂಬೆಗೆ ಕೇಂದ್ರ ಸರ್ಕಾರದಿಂದ ಭೌಗೋಳಿಕ ಮಾನ್ಯತೆ (ಜಿಯೋ ಗ್ರಫಿಕಲ್ ಟ್ಯಾಗ್) ಲಭಿಸಿದೆ. ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್’ ಪಡೆದ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ.

ಮುಖ್ಯಾಂಶಗಳು

  • ಇದು ‘ಕಾಗ್ಝಿ’ ಲಿಂಬೆ ಎಂದೇ ಪ್ರಸಿದ್ಧವಾಗಿದೆ.
  • ‘ಇಂಡಿಯಲ್ಲಿನ ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ‘ಇಂಡಿ ಲಿಂಬೆ’ಗೆ ಜಿಐ ಟ್ಯಾಗ್ ಪಡೆಯುವ ಸಂಬಂಧ ಅಧ್ಯಯನ ವರದಿ ತಯಾರಿಸಿ, ಚೆನ್ನೈ ನಲ್ಲಿರುವ ಕೇಂ ದ್ರ ಸರ್ಕಾರದ ಜಿಐ ಟ್ಯಾಗ್ ಕಚೇರಿಗೆ 2021ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಕಳೆದ ಮಾರ್ಚ್‌ 31ಕ್ಕೆ ಐಜಿ ಟ್ಯಾಗ್ಮಾನ್ಯತೆ ಲಭಿಸಿದ್ದು, ಇದು 2031ಮಾರ್ಚ್‌ 25ರವರೆಗೆ ಇರಲಿದೆ’.
  • ವಿಜಯಪುರ ಜಿಲ್ಲೆಯ ಇಂಡಿ (5,500 ಹೆಕ್ಟೇ ರ್) ಮತ್ತು ಸಿಂದಗಿ(4,500 ಹೆಕ್ಟೇ ರ್) ತಾಲ್ಲೂಕುಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಲಿಂಬೆ ಬೆಳೆಯಲಾಗುತ್ತದೆ.

ಲಿಂಬೆಯ ವಿಶೇಷತೆ

  • ವಿಜಯಪುರ ಜಿಲ್ಲೆಯಲ್ಲಿ ‘ಕಾಗ್ಜಿ’ ತಳಿಯ ಲಿಂಬೆ ಉತ್ಪಾದನೆ ಹೆಚ್ಚು. ಈ ತಳಿಯ ಹಣ್ಣುಗಳು ದುಂಡಗಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಹಣ್ಣಿನ ರಸ ಹುಳಿಯಾಗಿದ್ದು, ವಿಶಿಷ್ಟ ಸುವಾಸನೆ ಹೊಂದಿದೆ.
  • ಜಿಲ್ಲೆಯ ಒಣ ಹವೆಯು ಲಿಂಬೆ ಬೆಳೆ ಬೆಳೆಯಲು ಸೂಕ್ತವಾಗಿದೆ. ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿ ಕಡಿಮೆ ನೀರಿದ್ದರೂ ಲಿಂಬೆ ಬೆಳೆ ಬೆಳೆಯಬಹುದು. ಲಿಂಬೆ ವರ್ಷವಿಡೀ ಹೊಸ ಚಿಗುರಿನೊಂದಿಗೆ ಹೂ, ಹಣ್ಣು ಬಿಡುತ್ತದೆ.
  • ಒಂದು ವರ್ಷ ದಲ್ಲಿ ಎಕರೆಗೆ 10 ಟನ್ ಇಳುವರಿ ನಿರೀಕ್ಷಿಸಬಹುದು.
  • ವಿದೇಶಕ್ಕೂ ರಫ್ತು: ರಾಜ್ಯದಿಂದ ನೆರೆಯ ಬಾಂಗ್ಲಾ ದೇಶ, ನೇಪಾಳ, ದುಬೈ, ಅಬುದಾಬಿ, ಕುವೈತ್, ಶ್ರೀಲಂಕಾ, ಪಾಕಿಸ್ತಾನ ಸೇರಿ 25 ದೇಶಗಳಿಗೆ ಉತ್ಕೃಷ್ಟ ಗುಣಮಟ್ಟದ ಲಿಂಬೆ ರಫ್ತು ಮಾಡಲಾಗುತ್ತಿದೆ.

ಇಂಡಿ ಲಿಂಬೆಯ ಇತಿಹಾಸ

  • ‘ವಿಜಯಪುರದ ಆದಿಲ್ಶಾಹಿ ಅರಸರು ಕರ್ಜೂರ ತಂಬಾಕು ಮತ್ತು ಲಿಂಬೆ ಬೆಳೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದಾರೆ. ಆದರೆ ಲಿಂಬೆ ಬೆಳೆಯನ್ನು ರಾಜ್ಯಕ್ಕೆ ಆದಿಲ್ಶಾಹಿ ಅರಸರೇ ಪರಿಚಯಿಸಿದ್ದು ಎಂಬುದಕ್ಕೆ ಪೂರಕ ಸಾಕ್ಷಾಧಾರಗಳ ಕೊರತೆ ಇದೆ’. ಲಿಂಬೆ ಹಾಗೂ ಲಿಂಬೆ ಜಾತಿಗೆ ಸೇರಿದ ಕಿತ್ತಳೆ ಹಾಗೂ ಮೊಸಂಬಿ ಬೆಳೆಗಳ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ ಪ್ರೋ ತ್ಸಾಹದ ದೃಷ್ಟಿಯಿಂದ ರಾಜ್ಯ ಸರ್ಕಾ ರವು 2017 ಮೇ 16ರಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದೆ.

ನಿಮಗಿದು ತಿಳಿದಿರಲಿ

  • ವಿಜಯಪುರ ಜಿಲ್ಲೆ ‘ಲಿಂಬೆ ಕಣಜ’ ಎಂದೇ ಪ್ರಸಿದ್ಧವಾಗಿದೆ. ‘ವಿಜಯಪುರ ಜಿಲ್ಲೆಯು ರಾಜ್ಯದ ವಿಸ್ತೀರ್ಣದಲ್ಲಿ ಶೇ 58ರಷ್ಟು (12,220 ಹೆಕ್ಟೆರ್)ಹೊಂದಿದೆ. ಕಲಬುರಗಿ ಎರಡನೇ ಸ್ಥಾನ, ಬಾಗಲಕೋಟೆ ಮೂರನೇ ಮತ್ತು ಬೆಳಗಾವಿ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿವೆ.