Published on: December 14, 2022

ಇಂಧನ ಸಂರಕ್ಷಣಾ ಮಸೂದೆ (ತಿದ್ದುಪಡಿ)–2022

ಇಂಧನ ಸಂರಕ್ಷಣಾ ಮಸೂದೆ (ತಿದ್ದುಪಡಿ)–2022

ಸುದ್ದಿಯಲ್ಲಿ ಏಕಿದೆ? ಪಳೆಯುಳಿಕೆಯೇತರ ಇಂಧನ ಮೂಲಗಳಾದ ಬಯೋಮಾಸ್‌, ಇಥೆನಾಲ್‌ ಮತ್ತು ಹಸಿರು ಹೈಡ್ರೋಜನ್‌ ಬಳಕೆಯನ್ನು ಕಡ್ಡಾಯಗೊಳಿಸುವ ಇಂಧನ ಸಂರಕ್ಷಣಾ ಮಸೂದೆ (ತಿದ್ದುಪಡಿ)–2022ಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ.

ಮುಖ್ಯಾಂಶಗಳು

  • 2022 ಆಗಸ್ಟ್‌ನಲ್ಲಿ ನಡೆದಿದ್ದ ಲೋಕಸಭಾ ಅಧಿವೇಶನದಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿತ್ತು.
  • ರಾಜ್ಯಸಭೆಯಲ್ಲಿ ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಮಸೂದೆಯಲ್ಲಿರುವ ಅಂಶಗಳು

  • ಇಂಧನ ಬಳಕೆಯ ಮಾನದಂಡಗಳನ್ನು ಅನುಸರಿಸಲು ವಿಫಲವಾಗುವ ಕೈಗಾರಿಕಾ ಘಟಕಗಳು ಅಥವಾ ಹಡಗುಗಳು ಮತ್ತು ವಾಹನ ಉತ್ಪಾದನಾ ಕಂಪನಿಗಳಿಗೆ ದಂಡ ವಿಧಿಸುವ ಅವಕಾಶವನ್ನು ಈ ಮಸೂದೆ ಕಲ್ಪಿಸಲಿದೆ.
  • 2001 ರ ಇಂಧನ ಸಂರಕ್ಷಣಾ ಕಾಯಿದೆಯು ಇಂಧನ ಉಳಿತಾಯದ ಬಗ್ಗೆ ವ್ಯವಹರಿಸಿದರೆ, ಪ್ರಸ್ತುತ ಮಸೂದೆಯು ಪರಿಸರವನ್ನು ಉಳಿಸುವ ಮತ್ತು ವಿದ್ಯುತ್ ಉತ್ಪಾದಿಸುವಾಗ ಪಳೆಯುಳಿಕೆ ಮತ್ತು ಪಳೆಯುಳಿಕೆಯಲ್ಲದ ಇಂಧನಗಳ ಬಳಕೆಯಿಂದ ಹವಾಮಾನ ಬದಲಾವಣೆಯನ್ನು ಸಂರಕ್ಷಿಸುವ ಬಗ್ಗೆ ವ್ಯವಹರಿಸುತ್ತದೆ.
  • ಮಸೂದೆಯು ಪರಿಸರ ಕಾನೂನುಗಳ ಒಂದು ಅಂಶವಾದ ಇಂಗಾಲದ ಹೊರಸೂಸುವಿಕೆ ಮತ್ತು ಹವಾಮಾನ ಬದಲಾವಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದೆ.
  • ಪಳೆಯುಳಿಕೆಯೇತರ ಇಂಧನ : ಪಳೆಯುಳಿಕೆಗಳಿಂದ ಪಡೆಯದ ಇಂಧನ ಉದಾಹರಣೆಗೆ: ಬಯೋಮಾಸ್‌, ಇಥೆನಾಲ್‌,ಹಸಿರು ಹೈಡ್ರೋಜನ್‌ ಮತ್ತು ಸೌರ ಶಕ್ತಿ ಇತ್ಯಾದಿ.

ಅನುಕೂಲಗಳು

  • ನವೀಕರಿಸಬಹುದಾದ ಇಂಧನಗಳ ಬಳಕೆ ಉತ್ತೇಜಿಸುವ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ತನ್ನ ಅಂತರರಾಷ್ಟ್ರೀಯ ಬದ್ಧತೆ ಸಾಧಿಸಲು ದೇಶಕ್ಕೆ ಈ ಮಸೂದೆ ಸಹಕಾರಿಯಾಗಿದೆ.
  • ಪ್ಯಾರಿಸ್‌ ಒಪ್ಪಂದಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲೂ ಇದು ಭಾರತಕ್ಕೆ ನೆರವಾಗಲಿದೆ.
  • ‘ಈ ಮಸೂದೆಯು ಪರಿಸರ ಸ್ನೇಹಿಯಾಗಿದ್ದು, ದೇಶದಲ್ಲಿ ಕಾರ್ಬನ್‌ ಟ್ರೇಡಿಂಗ್‌ಗೆ ಅನುವು ಮಾಡಿಕೊಡಲಿದೆ’.

ಭಾರತ ತೆಗೆದುಕೊಂಡಿರುವ ಕ್ರಮಗಳು

  • ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್‌.ಆರ್‌.ಇ.) ಮತ್ತು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐ.ಆರ್‌.ಇ.ಎನ್‌.ಎ.) ನಡುವೆ 2022ರ ಜನವರಿಯಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಆಧಾರದ ಮೇಲೆ ಹಸಿರು ಇಂಧನ ಸ್ಥಿತ್ಯಂತರಗಳ ಬಗ್ಗೆ ಮಹತ್ವಾಕಾಂಕ್ಷೆ, ನಾಯಕತ್ವ ಮತ್ತು ಜ್ಞಾನವನ್ನು ಉತ್ತೇಜಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಈ ಒಪ್ಪಂದವು ಭಾರತದ ಇಂಧನ ಪರಿವರ್ತನೆ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ವಿಶ್ವಕ್ಕೆ ಸಹಾಯ ಮಾಡುತ್ತದೆ.
  • ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದದಲ್ಲಿ ಕಲ್ಪಿಸಲಾಗಿರುವ ಸಹಕಾರ ಕ್ಷೇತ್ರಗಳು 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ವಿದ್ಯುತ್‌ ಸಾಮರ್ಥ್ಯ‌ದ 500 ಗಿಗಾವ್ಯಾಟ್‌ ಸಾಮರ್ಥ್ಯ‌ದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತವನ್ನು ಬೆಂಬಲಿಸಲಿವೆ. ಇದು ಆತ್ಮ ನಿರ್ಭರ ಭಾರತವನ್ನು ಉತ್ತೇಜಿಸುತ್ತದೆ.

ಈ ಒಪ್ಪಂದದ ಪ್ರಮುಖ ಲಕ್ಷ ಣಗಳಲ್ಲಿಈ ಕೆಳಗಿನ ಕ್ಷೇತ್ರಗಳಲ್ಲಿವರ್ಧಿತ ಸಹಕಾರವೂ ಸೇರಿದೆ:

  1. ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳ ಸ್ಕೇಲಿಂಗ್‌ ಅಪ್‌ ಬಗ್ಗೆ ಭಾರತದಿಂದ ಜ್ಞಾನ ಹಂಚಿಕೆಗೆ ಅನುವು ಮಾಡಿಕೊಡುವುದು
  2. ದೀರ್ಘಕಾಲೀನ ಇಂಧನ ಯೋಜನೆಯಲ್ಲಿಭಾರತದ ಪ್ರಯತ್ನಗಳನ್ನು ಬೆಂಬಲಿಸುವುದು
  3. ಭಾರತದಲ್ಲಿನಾವೀನ್ಯತೆ ವಾತಾವರಣವನ್ನು ಬಲಪಡಿಸಲು ಸಹಯೋಗ
  4. ಹಸಿರು ಜಲಜನಕದ ವೇಗವರ್ಧಕ ಅಭಿವೃದ್ಧಿ ಮತ್ತು ನಿಯೋಜನೆಯ ಮೂಲಕ ವೆಚ್ಚ-ಪರಿಣಾಮಕಾರಿ ಡಿಕಾರ್ಬನೈಸೇಶನ್‌ ಕಡೆಗೆ ಚಲಿಸುವುದು.

ಪಳೆಯುಳಿಕೆ ಇಂಧನ :

  • ಖನಿಜ ಸಂಪನ್ಮೂಲ ಎಂದೂ ಕರೆಯಲ್ಪಡುವ ಪಳೆಯುಳಿಕೆ ಸಂಪನ್ಮೂಲವು ನೈಸರ್ಗಿಕ ಸಾಂಪ್ರದಾಯಿಕ ಇಂಧನ ಮೂಲವಾಗಿದ್ದು, ಹೈಡ್ರೋಕಾರ್ಬನ್ ಹೊಂದಿರುವ ನೈಸರ್ಗಿಕ ಅನಿಲ, ತೈಲ ಮತ್ತು ಕಲ್ಲಿದ್ದಲನ್ನು ಒಳಗೊಂಡಿದೆ. ಆಮ್ಲಜನಕ ಮುಕ್ತ ವಾತಾವರಣದಲ್ಲಿ ದೀರ್ಘಕಾಲೀನ ಜೀವಿಗಳ ಪ್ರತಿಕ್ರಿಯೆಗಳ ಪರಿಣಾಮವಾಗಿ ಇದು ಸಂಭವಿಸುತ್ತದೆ.

ಪಳೆಯುಳಿಕೆ ಇಂಧನದ ಅನಾನುಕೂಲಗಳು

  • ಪರಿಸರದ ಮೇಲೆ:ಈ ಪಳೆಯುಳಿಕೆ ಇಂಧನಗಳ ದಹನ, ಹೊರತೆಗೆಯುವಿಕೆ, ಸಂಸ್ಕರಣೆ ಮತ್ತು ಸಾಗಣೆ ಹಸಿರುಮನೆ ಪರಿಣಾಮದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಬಹುತೇಕ 80% ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಜಾಗತಿಕವಾಗಿ ಅವು ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದವು.
  • ಆರೋಗ್ಯದ ಮೇಲೆ :ಜನಸಂಖ್ಯೆಯು ಮಾಲಿನ್ಯದಿಂದ ಪ್ರಭಾವಿತವಾಗಿರುತ್ತದೆ ಮತ್ತು ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದೆ. ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಏಕೆಂದರೆ ಆಡುವಾಗ. ಓಡುವಾಗ, ಅವರು ಹೆಚ್ಚು ಗಾಳಿಯನ್ನು ಉಸಿರಾಡುತ್ತಾರೆ ಮತ್ತು ಹೆಚ್ಚು
  • ನೀರು ಕುಡಿಯುತ್ತಾರೆ. ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವಷ್ಟು ನಮ್ಮ ಚಯಾಪಚಯ ಕ್ರಿಯೆಯು ಇನ್ನೂ
  • ಅಭಿವೃದ್ಧಿ ಹೊಂದಿಲ್ಲ.

ಕಾರ್ಬನ್‌ ಟ್ರೇಡಿಂಗ್‌

  • ವಿವಿಧ ದೇಶಗಳ ವಾತಾವರಣಕ್ಕೆ ಇಂಗಾಲಾಮ್ಲಅಥವಾ ಹಸಿರು ಮನೆ ಅನಿಲ ಹೊರಸೂಸುವಿಕೆ ಹಕ್ಕಿನ ಕೊಡು -ಕೊಳ್ಳುವಿಕೆಗೆ ಕಾರ್ಬನ್ ಟ್ರೇಡಿಂಗ್ ಎಂದು ಕರೆಯಲಾಗುತ್ತಿದೆ.
  • ಜಪಾನ್ನಲ್ಲಿ 1997 ರಲ್ಲಿನಡೆದ ಕ್ಯುಟೊ ಶಿಷ್ಟಾಚಾರ ಒಪ್ಪಂದದ ನಂತರ ಈ ವ್ಯಾಪಾರ ಆರಂಭವಾಯಿತು. ವಿಶ್ವದ 180 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.

ಪ್ಯಾರಿಸ್ ಒಪ್ಪಂದ

  • ಪ್ಯಾರಿಸ್ ಒಪ್ಪಂದವು 2020ರ ನಂತರದ ಹವಾಮಾನ ಕ್ರಮಗಳಿಗೆ ಸಂಬಂಧಿಸಿದ್ದಾಗಿದೆ. 2020ಕ್ಕೆ ಮುಂಚಿನ ಅವಧಿಯಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕ್ಯೋಟೋ ಶಿಷ್ಟಾಚಾರದಂತೆ ನಡೆದುಕೊಳ್ಳಬೇಕು ಮತ್ತು
  • ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಯಂ ಸಂಕಲ್ಪ ಕೈಗೊಳ್ಳಬೇಕು.
  • 2015ರ ಡಿಸೆಂಬರ್ 12ರಂದು 185 ರಾಷ್ಟ್ರಗಳು ಈ ಪ್ಯಾರಿಸ್ ಒಪ್ಪಂದವನ್ನು ಅಂಗೀಕರಿಸಿದ್ದವು ಮತ್ತು ಭಾರತವು 2016ರ ಏಪ್ರಿಲ್ 22ರಂದು ನ್ಯೂಯಾರ್ಕ್ ನಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿತ್ತು.
  • ಪ್ಯಾರಿಸ್ ಒಪ್ಪಂದದ ನಿಬಂಧನೆಗಳಂತೆ ಯಾವಾಗ 55 ರಾಷ್ಟ್ರಗಳು ಒಟ್ಟಾರೆ ಜಾಗತಿಕ ಇಂಗಾಲದ ಹೊರಸೂಸುವಿಕೆ
  • ತಡೆಗೆ ಶೇಕಡ 55ರಷ್ಟು ಕೊಡುಗೆ ನೀಡುವುದನ್ನು ಸ್ಥಿರೀಕರಣ ಮಾಡುತ್ತವೋ ಆಗ ಈ ಒಪ್ಪಂದ ಜಾರಿಗೆ ಬರಲಿದೆ.
  • ಭಾರತವು ಪ್ಯಾರಿಸ್ ಒಪ್ಪಂದ (ಹವಾಮಾನ ಬದಲಾವಣೆ ಕುರಿತ)ವನ್ನು ಗಾಂಧಿ ಜಯಂತಿ ದಿನವಾದ 2016ರ ಅಕ್ಟೋಬರ್ 2ರಂದು ಸ್ವೀಕರಿಸಿತು .