Published on: December 6, 2021

‘ಇನ್ಪೋಸಿಸ್ ಪ್ರಶಸ್ತಿ-2021’

‘ಇನ್ಪೋಸಿಸ್ ಪ್ರಶಸ್ತಿ-2021’

ಸುದ್ಧಿಯಲ್ಲಿ ಏಕಿದೆ? ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ (ಐಎಸ್‌ಎಫ್‌), ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್‌ ಸೈನ್ಸ್‌, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಂತಹ ಆರು ಕ್ಷೇತ್ರಗಳ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಇನ್ಫೋಸಿಸ್‌ ಪ್ರಶಸ್ತಿ 2021 ಅನ್ನು ನೀಡಿ ಗೌರವಿಸಲಾಯಿತು.

ಇನ್ಫೋಸಿಸ್‌ ಪ್ರಶಸ್ತಿ 2021ರ ವಿಜೇತರು:

  • ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಅಗ್ರಗಣ್ಯ ಸಾಧನೆ ಮಾಡಿರುವ ಹಿನ್ನೆಲೆ ಡಾ.ಚಂದ್ರಶೇಖರ್‌ ನಾಯರ್‌ ಅವರಿಗೆ,ಮಾನವೀಯತೆ ವಿಭಾಗದಲ್ಲಿ ಡಾ.ಏಂಜಲಾ ಬ್ಯಾರೆಟೋ ಕ್ಸೇವಿಯರ್‌ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
  • ಜೀವ ವಿಜ್ಞಾನಗಳು ವಿಭಾಗದಲ್ಲಿ ಪ್ರೊ. ಮಹೇಶ್‌ ಶಂಕರನ್‌ ಅವರಿಗೆ ಪ್ರಶಸ್ತಿ ನೀಡಲಾಯಿತು.
  • ಗಣಿತ ವಿಜ್ಞಾನಗಳು ವಿಭಾಗದಲ್ಲಿ ಡಾ. ನೀರಜ್‌ ಕಯಾಲ್ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.
  • ಭೌತಿಕ ವಿಜ್ಞಾನಗಳು ವಿಭಾಗದಲ್ಲಿ ಪ್ರೊ. ಬೆಡಂಗದಾಸ್‌ ಮೊಹಾಂತಿ ಅವರಿಗೆ ಇನ್ಫೋಸಿಸ್ ಪ್ರಶಸ್ತಿ 2021 ಅನ್ನು ನೀಡಲಾಗಿದೆ.
  • ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ನವದೆಹಲಿಯ ಜೆಎನ್‌ಯು ವಿವಿಯ ಕಾನೂನು ಮತ್ತು ಆಡಳಿತದ ಆಧ್ಯಯನ ಕೇಂದ್ರದ ಡಾ. ಪ್ರತೀಕ್ಷಾ ಬಾಕ್ಸಿ ಅವರ ಲೈಂಗಿಕ ಹಿಂಸೆ ಮತ್ತು ನ್ಯಾಯಶಾಸ್ತ್ರದ ಕುರಿತಾದ ಅವರ ವಿಶೇಷ ಕೆಲಸಗಳಿಗಾಗಿ ಇನ್ಫೋಸಿಸ್ ಪ್ರಶಸ್ತಿ 2021 ನೀಡಲಾಗಿದೆ.