Published on: September 14, 2021

ಇನ್ಸ್ಪಿರೇಷನ್ 4

ಇನ್ಸ್ಪಿರೇಷನ್ 4

ಸುದ್ಧಿಯಲ್ಲಿ ಏಕಿದೆ?  ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ, ಇದೇ ಮೊದಲ ಬಾರಿಗೆ ವೃತ್ತಿಪರ ಗಗನಯಾತ್ರಿಗಳಲ್ಲದ ನಾಲ್ವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇನ್ಸ್ಪಿರೇಷನ್ 4 ಎಂಬ ಹೆಸರಿನ ಈ ಯೋಜನೆಯಲ್ಲಿ ನಾಲ್ವರು ಭಿನ್ನ ಭಿನ್ನ ಕ್ಷೇತ್ರಗಳಿಂದ ಬಂದಿರುವ ಜನ ಬಾಹ್ಯಾಕಾಶ ಸೇರಲಿದ್ದಾರೆ.

  • ಇನ್‌ಸ್ಪಿರೇಷನ್ 4 ಸಿಬ್ಬಂದಿ ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ಉಡ್ಢಯನ ವಾಹನ ಮತ್ತು ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಬಾಹ್ಯಾಕಾಶ ಪ್ರಯಾಣ ಮಾಡಲಿದೆ.
  • ಇನ್ಸ್ಪಿರೇಷನ್ 4 ಯೋಜನೆ ಸಾಮಾನ್ಯ ನಾಗರಿಕ ಗಗನಯಾನಿಗಳನ್ಜು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ವಿಶ್ವದ ಮೊಟ್ಟ ಮೊದಲ ಯೋಜನೆ ಎಂಬುದು ವಿಶೇಷ.

ಸ್ಪೇಸ್‌ಎಕ್ಸ್‌ನ Inspiration4 ಯೋಜನೆಯ ನಾಲ್ವರು ಗಗನಯಾತ್ರಿಗಳ ಪರಿಚಯ

  1. ಜೇರೆಡ್ ಐಸಾಕ್ಮನ್:
  • Inspiration4 ಯೋಜನೆಯನ್ನು ಆರಂಭಿಸಿದ ಜೇರೆಡ್ ಐಸಾಕ್ಮನ್, ಇದರ ಮಿಷನ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶಿಫ್ಟ್4 ಸಂಸ್ಥೆಯ ಸಂಸ್ಥಾಪಕ ಸಿಇಒ ಆಗಿರುವ ಐಸಾಕ್ಮನ್, ಡ್ಯ್ಯಾಕನ್ ಇಂಟರ್‌ನ್ಯಾಷನಲ್ ಹೆಸರಿನ ಯುಎಸ್ ಏರ್ ಫೋರ್ಸ್ ಪೈಲಟ್‌ಗಳಿಗೆ ತರಬೇತಿ ನೀಡುವ ಕಂಪನಿಯನ್ನೂ ಸ್ಥಾಪಿಸಿದ್ದಾರೆ.
  1. ಹೇಲಿ ಆರ್ಸೆನ್ಯಾಕ್ಸ್:
  • ಆರ್ಸೆನ್ಯಾಕ್ಸ್ ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿರುವ ಸೇಂಟ್ ಜೂಡ್ಸ್ ಆಸ್ಪತ್ರೆಯಲ್ಲಿ, ಬಾಲ್ಯದಲ್ಲಿ ಮೂಳೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಇವರ ಚಿಕಿತ್ಸಗಾಗಿ ಐಸಾಕ್ಮನ್ ನಿಧಿಸಂಗ್ರಹವನ್ನು ಆಯೋಜಿಸಿದ್ದರು. ಆಕೆ ಇಂದು ವೈದ್ಯ ಸಹಾಯಕರಾಗಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
  1. ಸಿಯಾನ್ ಪ್ರೊಕ್ಟರ್:
  • 51 ವರ್ಷದ ಪ್ರೊಕ್ಟರ್ ಅರಿಜೋನಾದ ಕಾಲೇಜಪೊಂದರಲ್ಲಿ ಭೂವಿಜ್ಞಾನ ವಿಷಯದ ಪ್ರಾಧ್ಯಾಪಕರಿಯಾಗಿದ್ದಾರೆ. ಸಿಯಾನ್ ತಂದೆ ನಾಸಾದ ಅಪೊಲೊ ಮೂನ್ ಮಿಷನ್‌ನಲ್ಲಿ ಕೆಲಸ ಮಾಡಿದವರು. ಸಿಯಾನ್ ಕೂಡ ಗಗನಯಾತ್ರಿ ಆಗಲು ಎರಡು ಬಾರಿ ನಾಸಾಗೆ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಬಾಹ್ಯಾಕಾಶ ತಲುಪಿದ ನಾಲ್ಕನೇ ಆಫ್ರಿಕನ್ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ
  1.  ಕ್ರಿಸ್ ಸೆಂಬ್ರೋಸ್ಕಿ:
  • ಅಮೆರಿಕದ ವಾಯುಸೇನೆಯಲ್ಲಿ ಸೆವೆ ಸಲ್ಲಿಸಿರುವ ಕ್ರಿಸ್ ಸೆಂಬ್ರೋಸ್ಕಿ, ಇರಾಕ್ ಯುದ್ಧದಲ್ಲಿ ಗಮನಾರ್ಹ ಪಾತ್ರ ನಿರ್ವಹಸಿರುವ ಖ್ಯಾತಿ ಹೊಂದಿದ್ದಾರೆ. ವಾಯುಸೇನೆಯಿಂದ ನಿವೃತ್ತರಾಗಿರುವ ಕ್ರಿಸ್, ಸದ್ಯ ವಾಷಿಂಗ್ಟನ್‌ನ ಲಾಕ್‌ಹೀಡ್ ಮಾರ್ಟಿನ್ ಏರೋನಾಟಿಕ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.