Published on: December 21, 2021

‘ಇ-ಸಹಮತಿ’

‘ಇ-ಸಹಮತಿ’

ಸುದ್ಧಿಯಲ್ಲಿ ಏಕಿದೆ? ಸರಕಾರದ ನಾನಾ ಇಲಾಖೆಗಳು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸರಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಅಧಿಕೃತ ದತ್ತಾಂಶವನ್ನು ಉದ್ಯೋಗದಾತ ಕಂಪೆನಿಗಳು, ಸಂಸ್ಥೆಗಳೊಂದಿಗೆ ತ್ವರಿತಗತಿಯಲ್ಲಿ ಹಂಚಿಕೊಳ್ಳಲು ‘ಇ-ಸಹಮತಿ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ಮುಖ್ಯಾಂಶಗಳು

  • ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿಅನುಷ್ಠಾನಗೊಳ್ಳುತ್ತಿದೆ.
  • ಎನ್‌ಐಸಿಯು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇ-ಆಡಳಿತ ಇಲಾಖೆಯಿಂದ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಅನುವಾಗುವಂತೆ ಮೊಬೈಲ್‌ ಆ್ಯಪ್‌ ಅನ್ನು ಸಹ ಸಿದ್ಧಪಡಿಸಲಾಗುತ್ತಿದೆ
  • ಈ ತಂತ್ರಾಂಶದಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ದತ್ತಾಂಶ ಹಂಚಿಕೆಯ ಸಂಪೂರ್ಣ ನಿಯಂತ್ರಣವು ಸಂಬಂಧಪಟ್ಟ ವಿದ್ಯಾರ್ಥಿ ಅಥವಾ ನಾಗರಿಕರ ಕೈಯಲ್ಲಿಯೇ ಇರುತ್ತದೆ. ಅವರ ಒಪ್ಪಿಗೆ ಮೇಲೆಯೇ ಡಿಜಿಟಲ್‌ ಸಹಿಯುಳ್ಳ ದಾಖಲೆಗಳನ್ನು ರವಾನಿಸಲಾಗುತ್ತದೆ. ಇದರಲ್ಲಿ ಸರಕಾರದ ಪಾತ್ರ ಇರುವುದಿಲ್ಲ. ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯ ನಿರ್ವಹಿಸುತ್ತದೆ
  • ನಾನಾ ಕಂಪನಿಗಳು ನೇಮಕಾತಿ ವೇಳೆ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಲು ಬಯಸುತ್ತವೆ. ಅಂತಹ ಕಂಪನಿಗಳು ವಿಶ್ವವಿದ್ಯಾಲಯಗಳು, ಪರೀಕ್ಷಾ ಮಂಡಳಿಗಳಲ್ಲಿ ಲಭ್ಯವಿರುವ ವಿಷಯವಾರು ಅಂಕಗಳ ಮಾಹಿತಿಯನ್ನು ಇ-ಸಹಮತಿ ತಂತ್ರಾಂಶದ ಮುಖೇನ ಪಡೆಯಬಹುದು. ಇದಕ್ಕೆ ಕಡ್ಡಾಯವಾಗಿ ವಿದ್ಯಾರ್ಥಿಗಳ ಒಪ್ಪಿಗೆ ಬೇಕಾಗುತ್ತದೆ. ರಾಜ್ಯದ 65 ವಿಶ್ವವಿದ್ಯಾಲಯಗಳ ಪೈಕಿ 63 ವಿವಿಗಳು ಈಗಾಗಲೇ ಇ-ಸಹಮತಿ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿವೆ
  • ಅಧಿಕೃತ ಕಂಪನಿಗಳಿಗೆ ಮಾತ್ರ ಇ-ಸಹಮತಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 50 ಸಾವಿರ ರೂ. ಶುಲ್ಕ ಪಾವತಿಸಿ ನೋಂದಣಿಯಾಗಬಹುದು. ಜತೆಗೆ ಪ್ರತಿಯೊಂದು ದಾಖಲೆಗೆ ಶಿಕ್ಷಣ ಸಂಸ್ಥೆಗಳು ಅಥವಾ ಇಲಾಖೆಗಳು ನಿಗದಿಪಡಿಸುವ ಶುಲ್ಕವನ್ನು ಕಂಪೆನಿಗಳೇ ಭರಿಸಬೇಕು.
  • ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಅನುಮೋದನೆ ನೀಡಿದರೆ ಮಾತ್ರ ಕಂಪೆನಿಗಳ ನೋಂದಣಿಗೆ ಅವಕಾಶ ನೀಡಲಾಗುವುದು. ನಕಲಿ ಕಂಪನಿಗಳು, ದತ್ತಾಂಶವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಅವಕಾಶ ನೀಡುವುದಿಲ್ಲ