Published on: November 24, 2021

ಉರಗ ಉದ್ಯಾನ ಸ್ಥಾಪನೆ

ಉರಗ ಉದ್ಯಾನ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ ? ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ (Anti Venom) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ ಸ್ಥಾಪನೆಗೆ ಮುಂದಾಗಿದೆ.

ಮುಖ್ಯಾಂಶಗಳು

  • ರಾಜ್ಯಸರ್ಕಾರದ ಐಟಿ ಬಿಟಿ ಇಲಾಖೆಯಿಂದ ಅನುದಾನಿತ ಎವಲ್ಯೂಷನರಿ ವೆನೋಮಿಕ್ಸ್ ಲ್ಯಾಬ್ ಈ ಕಾರ್ಯಕ್ಕೆ ಮುಂದಾಗಿದೆ. ಉರಗ ಉದ್ಯಾನದಲ್ಲಿ ಮುಖ್ಯವಾಗಿ ಹಾವುಗಳನ್ನು ಕೇಂದ್ರೀಕರಿಸಲಾಗಿದೆ.
  • ಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. ಹಾವುಗಳನ್ನು ಹೊರತುಪಡಿಸಿ, ಚೇಳು ಮತ್ತು ಜೇಡಗಳೂ ಈ ಉರಗ ಉದ್ಯಾನದಲ್ಲಿವೆ.
  • ಸದ್ಯ ಲಭ್ಯವಿರುವ ವಿಷ ನಿರೋಧಕ ಔಷಧಗಳು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಹೊಸ ಸಂಶೋಧನೆ ಮಹತ್ತರ ಪಾತ್ರ ವಹಿಸಿದೆ