Published on: March 8, 2023

ಎತ್ತರದ ಸಾಗರಗಳ ಒಪ್ಪಂದ

ಎತ್ತರದ ಸಾಗರಗಳ ಒಪ್ಪಂದ


ಸುದ್ದಿಯಲ್ಲಿ  ಏಕಿದೆ? ವಿಶ್ವದ ಸಾಗರಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರಾಶಿ ರಕ್ಷಿಸಲು ಭಾರತ ಸೇರಿದಂತೆ ಸುಮಾರು 200 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ.


ಮುಖ್ಯಾಂಶಗಳು

  • 2007ರಲ್ಲಿ ಆರಂಭವಾದ ಮಾತುಕತೆ ಕೊನೆಯ ಕ್ಷಣದವರೆಗೂ ಭಿನ್ನಾಭಿಪ್ರಾಯಗಳಿಂದ ಅಡ್ಡಿಯಾಗಿತ್ತು. ಸ್ಪಂಜುಗಳು, ಕ್ರಿಲ್, ಹವಳಗಳು, ಕಡಲಕಳೆಗಳು, ಬ್ಯಾಕ್ಟೀರಿಯಾ ಮತ್ತು ಖನಿಜಗಳಂತಹ ಆಳ ಸಮುದ್ರದಲ್ಲಿ ವ್ಯಾಪಕವಾಗಿ ಲಭ್ಯವಿರುವ ಸಮುದ್ರದ  ಸಂಪನ್ಮೂಲಗಳನ್ನು ಹೇಗೆ ಹಂಚಿಕೊಳ್ಳುವುದು ಎಂಬುದು ಒಂದು ಪ್ರಮುಖ ಸಮಸ್ಯೆಯಾಗಿತ್ತು.
  • ಕೈಗಾರಿಕೀಕರಣಗೊಂಡ ರಾಷ್ಟ್ರಗಳು  ಔಷಧಗಳು, ಸೌಂದರ್ಯವರ್ಧಕಗಳು, ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳ ತಯಾರಿಕೆ ಮತ್ತು ಇತರ ಕೈಗಾರಿಕಾ ಉದ್ದೇಶಗಳಿಗಾಗಿ ಈ ಸಂಪನ್ಮೂಲಗಳನ್ನು ಗುರಿ ಮಾಡಿಕೊಂಡಿದ್ದವು.
  • ಸಮುದ್ರದ ಕಾನೂನಿನ ಕುರಿತಾದ ಮೊದಲ ಯುಎನ್ ಸಮಾವೇಶದಲ್ಲಿಯೇ ಸುಮಾರು 40 ವರ್ಷಗಳ ಹಿಂದೆ ಸಹಿ ಹಾಕಲಾಗಿತ್ತು.  ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಪ್ರತಿ ದೇಶವು ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವ  ಸನ್ನಿವೇಶವನ್ನು ಪರಿಹರಿಸಲಿಲ್ಲ

ಏನಿದು ಒಪ್ಪಂದ?

  • ಶೇ. 60 ರಷ್ಟು ಭೂ ಮೇಲ್ಮೈ ಆವರಿಸಿರುವ, ಹವಾಮಾನವನ್ನು ನಿಯಂತ್ರಿಸುವ ಮತ್ತು ನಾವು ಉಸಿರಾಡುವ ಅರ್ಧದಷ್ಟು  ಆಮ್ಲಜನಕ  ಉತ್ಪಾದಿಸುವ ಎತ್ತರದ ಸಮುದ್ರಗಳನ್ನು ರಕ್ಷಿಸಲು ಇದು ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ.
  • ಸಾಮಾನ್ಯವಾಗಿ ಎತ್ತರದ ಸಮುದ್ರಗಳು ದೇಶಗಳ ವಿಶೇಷ ಆರ್ಥಿಕ ವಲಯಗಳ ಗಡಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಯಾವುದೇ ದೇಶದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ.
  • ಈ ಒಪ್ಪಂದವು ಮೀನುಗಾರಿಕೆ, ಹಡಗು ಮತ್ತು ಸಂಶೋಧನೆಯ ಮೇಲೆ ಎಲ್ಲಾ ದೇಶಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ.

ಒಪ್ಪಂದದ ಗುರಿ

  • 2030 ರ ವೇಳೆಗೆ ಶೇ.30 ರಷ್ಟು ಎತ್ತರದ ಸಮುದ್ರಗಳ ‘ನೀರನ್ನು ಸಂರಕ್ಷಿಸಲು ಮತ್ತು ಮುಂದಿನ ಮಾತುಕತೆಗಳಿಗಾಗಿ ರಾಷ್ಟ್ರಗಳ ಸಮ್ಮೇಳನ ಆಯೋಜನೆಗೆ ನೆರವಾಗುವುದು. ಸಂರಕ್ಷಿತ ನೀರು ಎಂದರೆ ಮೀನುಗಾರಿಕೆ, ಹಡಗುಗಳ ಯಾವ ಮಾರ್ಗ ಬಳಸಬಹುದು ಮತ್ತು  ಆಳವಾದ ಸಮುದ್ರದ ಗಣಿಗಾರಿಕೆಯಂತಹ ಪರಿಶೋಧನಾ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಇರುತ್ತವೆ.
  • ಭಾರತೀಯ ನಿಯೋಗ:  ಈ ಒಪ್ಪಂದ ವೇಳೆ  ಸೆಂಟರ್ ಫಾರ್ ಮೆರೈನ್ ಲಿವಿಂಗ್ ರಿಸೋರ್ಸಸ್ ಅಂಡ್ ಇಕಾಲಜಿಯ ನಿಯೋಗವು ಭಾರತವನ್ನು ಪ್ರತಿನಿಧಿಸಿದೆ.