Published on: October 18, 2021

ಎಥನಾಲ್ ಉತ್ಪಾದನೆ

ಎಥನಾಲ್ ಉತ್ಪಾದನೆ

ಸುದ್ಧಿಯಲ್ಲಿ ಏಕಿದೆ? ಸಕ್ಕರೆಗೆ ಹೋಲಿಸಿದರೆ ಎಥನಾಲ್‌ ಉತ್ಪಾದನೆಯಲ್ಲಿ ಲಾಭದ ಪ್ರಮಾಣ ಅಧಿಕ. ಹೀಗಾಗಿ, ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ಎಥನಾಲ್‌ ಉತ್ಪಾದನೆಗೆ ಆಸಕ್ತಿ ತೋರುತ್ತಿವೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ದಿನೇದಿನೆ ಏರುತ್ತಿದ್ದು, ಎಥನಾಲ್‌ಗೆ ರಾಷ್ಟ್ರ-ಮಟ್ಟದಲ್ಲೂ ಬಹುಬೇಡಿಕೆ ಸೃಷ್ಟಿಯಾಗಿದೆ.

ಎಥೆನಾಲ್ ಬಗ್ಗೆ:

  • ಇದು ಪ್ರಮುಖ ಜೈವಿಕ ಇಂಧನಗಳಲ್ಲಿ ಒಂದಾಗಿದೆ, ಇದು ನೈಸರ್ಗಿಕವಾಗಿ ಯೀಸ್ಟ್‌ಗಳಿಂದ ಸಕ್ಕರೆ ಹುದುಗುವಿಕೆ ಅಥವಾ ಎಥಿಲೀನ್ ಹೈಡ್ರೇಶನ್‌ನಂತಹ ಪೆಟ್ರೋಕೆಮಿಕಲ್ ಪ್ರಕ್ರಿಯೆಗಳ ಮೂಲಕ ಉತ್ಪತ್ತಿಯಾಗುತ್ತದೆ.

ಮಿಶ್ರಣ ಗುರಿ:

  • ಭಾರತ ಸರ್ಕಾರವು 2025 ರಿಂದ 2030 ಕ್ಕೆ ಪೆಟ್ರೋಲ್‌ನಲ್ಲಿ 20% ಎಥೆನಾಲ್ ಬೆರೆಸುವ (E20 ಎಂದೂ ಕರೆಯುತ್ತಾರೆ) ಗುರಿಯನ್ನು ಮುಂದುವರಿಸಿದೆ.
  • ಪ್ರಸ್ತುತ, ಭಾರತದಲ್ಲಿ 8.5% ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ.

ಹೊರಸೂಸುವಿಕೆಯ ಮೇಲೆ ಪರಿಣಾಮ:

  • ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯು ಇಂಗಾಲದ ಮಾನಾಕ್ಸೈಡ್ (CO), ಹೈಡ್ರೋಕಾರ್ಬನ್ (HC) ಮತ್ತು ನೈಟ್ರೋಜನ್ ಆಕ್ಸೈಡ್ (NOx) ನಂತಹ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
  • ಅಸಿಟಾಲ್ಡಿಹೈಡ್ ಹೊರಸೂಸುವಿಕೆಯಂತಹ ಅನಿಯಂತ್ರಿತ ಕಾರ್ಬೊನಿಲ್ ಹೊರಸೂಸುವಿಕೆಗಳು ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ E10 ಮತ್ತು E20 ನೊಂದಿಗೆ ಹೆಚ್ಚಾಗಿದೆ. ಆದಾಗ್ಯೂ, ಈ ಹೊರಸೂಸುವಿಕೆಗಳು ತುಲನಾತ್ಮಕವಾಗಿ ಕಡಿಮೆ.

ಅನುಕೂಲಗಳು

  • ಉತ್ಪಾದನಾ ಪ್ರಕ್ರಿಯೆ, ಅಪಾಯಗಳ ನಿರ್ವಹಣೆ, ಸಂಸ್ಕರಣೆ, ಬೆಲೆ, ಮಾರಾಟ, ಪಾವತಿ ಮತ್ತು ಅದರ ಉಪ ಉತ್ಪನಕ್ಕೀರುವ ಬೇಡಿಕೆ ಮತ್ತು ಅನುಕೂಲಗಳೂ ಹೆಚ್ಚು. ಈ ಹಿನ್ನೆಲೆಯಲ್ಲಿ ಸರಕಾರವು ಎಥನಾಲ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದು, ಭವಿಷ್ಯದಲ್ಲಿ ಪರ್ಯಾಯ ಇಂಧನ ಶಕ್ತಿಯಾಗಿ ಎಥನಾಲ್‌ ಹೊರಹೊಮ್ಮಲಿದೆ.
  • ನಿಯಂತ್ರಣಕ್ಕೆ ಬಾರದ ಹಣದುಬ್ಬರದ ಪರಿಸ್ಥಿತಿಯಲ್ಲಿ ಎಥನಾಲ್‌ ಉತ್ಪಾದನೆ ಸರಳ ಮತ್ತು ಪರ್ಯಾಯ ಇಂಧನ ಶಕ್ತಿಯು ಹೌದು. ಈ ಹಿನ್ನೆಲೆಯಲ್ಲಿ ಕಬ್ಬಿನ ಉಪ ಉತ್ಪನ್ನವಾಗಿ ಎಥನಾಲ್‌ ಉತ್ಪಾದಿಸುವ ಬದಲಾಗಿ ಮುಖ್ಯ ಉತ್ಪನ್ನವಾಗಿಯೇ ಉತ್ಪಾದಿಸಲು ಕಾರ್ಖಾನೆಗಳು ಆಸಕ್ತಿ ಹೊಂದಿವೆ.

ಉತ್ಪಾದನೆ

  • ರಾಜ್ಯದಲ್ಲಿರುವ 67 ಸಕ್ಕರೆ ಕಾರ್ಖಾನೆಗಳ ಪೈಕಿ 32 ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ತ್ಯಾಜ್ಯದಿಂದ ಪ್ರತಿನಿತ್ಯ 60 ಲೀಟರ್‌ನಿಂದ 300 ಲೀಟರ್‌ ಎಥನಾಲ್‌ ಉತ್ಪಾದನೆಗೆ ಅನುಮತಿ ಪಡೆದುಕೊಂಡಿವೆ.
  • ಮಿಶ್ರಣ ಸಾಮರ್ಥ್ಯ92: 8 ಅನುಪಾತದಲ್ಲಿ ಪೆಟ್ರೋಲ್‌, ಡೀಸೆಲ್‌ ಜತೆ ಎಥನಾಲ್‌ ಮಿಶ್ರಣ ನಡೆಯುತ್ತಿದೆ. 2025ರ ಒಳಗಾಗಿ 75:25 ಮಿಶ್ರಣ ಸಾಮರ್ಥ್ಯ ಹೊಂದುವ ಗುರಿ ಇದೆ. ಕೇಂದ್ರದ ಆಶಯದಂತೆ ಗುರಿ ಸಾಧಿಸಿದರೆ ವಾರ್ಷಿಕ 30 ಸಾವಿರ ಕೋಟಿ ರೂ. ಸರಕಾರಕ್ಕೆ ಉಳಿತಾಯವಾಗಲಿದೆ.
  • ಒಂದು ಟನ್ ಕಬ್ಬಿನಿಂದ ನೇರವಾಗಿ 100 ಲೀಟರ್ ಎಥನಲ್, ಕಬ್ಬಿನ ತ್ಯಾಜ್ಯದಿಂದ ಶೇ.30ರಷ್ಟು ಎಥನಲ್ ಉತ್ಪಾದಿಸಬಹುದು

ಕಾರ್ಖಾನೆಗಳಿಗೆ ಆಗುವ ಲಾಭವೇನು?

  • ಪ್ರತಿ ಟನ್ ಕಬ್ಬಿಗೆ 70ರಿಂದ 100 ಕೆಜಿ ಸಕ್ಕರೆ ಉತ್ಪಾದಿಸಬಹುದು. ಪ್ರತಿ ಕೆಜಿ ಸಕ್ಕರೆಗೆ ಸರಕಾರ 34.50ರೂ. ಬೆಂಬಲ ಬೆಲೆ ನೀಡುತ್ತದೆ. ಪ್ರತಿ ಟನ್ ಕಬ್ಬಿಗೆ ನೇರವಾಗಿ ಎಥನಾಲ್ ಉತ್ಪಾದಿಸಿದರೇ 100ರಿಂದ 120ಲೀಟರ್ ಉತ್ಪಾದನೆ ಆಗುತ್ತದೆ. ಪ್ರತಿ ಲೀಟರ್ ಗೆ 59ರೂ. ಬೆಲೆ ನೀಡಿ ಸರಕಾರವೇ ಖರೀದಿಸುತ್ತದೆ