Published on: September 9, 2021

ಎನ್ಆರ್ಐಎಫ್ ಶ್ರೇಯಾಂಕ

ಎನ್ಆರ್ಐಎಫ್ ಶ್ರೇಯಾಂಕ

ಸುದ್ಧಿಯಲ್ಲಿ ಏಕಿದೆ? ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ ನ 6 ನೇ ಎಡಿಷನ್ ನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಕಟಿಸಿದ್ದು,  ದೇಶದ ಟಾಪ್ 10 ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 8 ಐಐಟಿಗಳು ಹಾಗೂ ಎರಡು ಎನ್ಐಟಿಗಳಿವೆ.

  • ಶಿಕ್ಷಣ ಸಚಿವಾಲಯದ ಎನ್ಐಆರ್ ಎಫ್ ಶ್ರೇಯಾಂಕದಲ್ಲಿ ಐಐಟಿ ಮದ್ರಾಸ್ ದೇಶದ ಉನ್ನತ ಶೈಕ್ಷಣಿಕ ಸಂಸ್ಥೆಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
  • ಸಂಶೋಧನಾ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಸ್ ಸಿ ಅಗ್ರಶ್ರೇಣಿ ಪಡೆದುಕೊಂಡಿದೆ
  • ಅಹ್ಮದಾಬಾದ್ ಐಐಎಂ ಅತ್ಯುತ್ತಮ ಬಿ-ಸ್ಕೂಲ್ ಆಗಿದ್ದು, ಜಾಮಿಯಾ ಹಮ್ದಾರ್ದ್ ಫಾರ್ಮಸಿ ಅಧ್ಯಯನಕ್ಕೆ ಅತ್ಯುತ್ತಮ ಸಂಸ್ಥೆಯಾಗಿದೆ.
  • ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಾಂಡ ಹೌಸ್ ಪ್ರಥಮ ಶ್ರೇಣಿಯನ್ನು ಪಡೆದಿದ್ದರೆ, ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ದೆಹಲಿ ಹಾಗೂ ಲೊಯೋಲಾ ಕಾಲೇಜು, ಚೆನ್ನೈ ನಂತರದ ಸ್ಥಾನಗಳಲ್ಲಿ ಇದೆ.
  • ಎನ್ಐಆರ್ ಎಫ್ ನ ಶ್ರೇಯಾಂಕದಲ್ಲಿ ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ಏಮ್ಸ್ ದೆಹಲಿ ಇದ್ದರೆ, ಪಿಜಿಐಎಂಇಆರ್ ಚಂಡಿಗಢ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಂತರದ ಸ್ಥಾನಗಳಲ್ಲಿವೆ