Published on: August 2, 2021
ಎನ್ಸಿಎಸ್ ವರದಿ
ಎನ್ಸಿಎಸ್ ವರದಿ
ಸುದ್ಧಿಯಲ್ಲಿ ಏಕಿದೆ ? ಭಾರತದಲ್ಲಿ ಭೂಕಂಪ ಸಂಭವಿಸುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್ಸಿಎಸ್) ಬಿಡುಗಡೆ ಮಾಡಿರುವ ವರದಿಯು, ದೇಶದ ಶೇ.59ರಷ್ಟು ಪ್ರದೇಶದಲ್ಲಿ ವಿವಿಧ ತೀವ್ರತೆಯ ಭೂಕಂಪದ ಸಾಧ್ಯತೆ ಇದೆ ಎಂದು ತಿಳಿಸಿದೆ.
ನಾಲ್ಕು ವಲಯಗಳಾಗಿ ವಿಂಗಡಣೆ
- ಎನ್ಸಿಎಸ್ ವರದಿಯು ಭೂಕಂಪದ ತೀವ್ರತೆ ಆಧಾರದ ಮೇಲೆ ಎರಡು, ಮೂರು, ನಾಲ್ಕು ಹಾಗೂ ಐದು ಎಂಬ ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಐದನೇ ವಲಯದಲ್ಲಿಯೇ ಹೆಚ್ಚು ಭೂಕಂಪವಾಗುತ್ತದೆ.
5ನೇ ವಲಯದ ನಗರಗಳು
- ಶ್ರೀನಗರ (ಜಮ್ಮು-ಕಾಶ್ಮೀರ), ಭುಜ್ (ಗುಜರಾತ್), ದರ್ಭಾಂಗ (ಬಿಹಾರ), ಜೋರ್ಹಾಟ್, ಸಾದಿಯಾ, ತೇಜ್ಪುರ ಮತ್ತು ಗುವಾಹಟಿ (ಅಸ್ಸಾಂ), ಸಾದಿಯಾ, ಪೋರ್ಟ್ಬ್ಲೇರ್, ಮಂಡಿ (ಹಿಮಾಚಲ ಪ್ರದೇಶ), ಕೊಹಿಮಾ (ನಾಗಾಲ್ಯಾಂಡ್).
4ನೇ ವಲಯದ ನಗರ
- ಅಲ್ಮೋರಾ, ಜಲ್ಪೈಗುರಿ, ಕೋಲ್ಕೊತಾ, ಲುಧಿಯಾನ, ಮೊರಾದಾಬಾದ್, ಪಟನಾ, ಉತ್ತರ ಮತ್ತು ದಕ್ಷಿಣ ಪರಗಣ, ಪಿಲಿಭಿತ್, ಶಿಮ್ಲಾ, ರೂರ್ಕಿ, ಅಂಬಾಲ, ಅಮೃತಸರ, ಬಹರೈಚ್, ಬುಲಂದ್ಶಹರ್, ಚಂಡೀಗಢ, ಡಾರ್ಜಿಲಿಂಗ್, ಡೆಹ್ರಾಡೂನ್, ದಿಲ್ಲಿ, ಘಾಜಿಯಾಬಾದ್, ಗ್ಯಾಂಗ್ಟಾಕ್ ಹಾಗೂ ಗೋರಖ್ಪುರ.
ಭೂಕಂಪನ ನಿಗಾ ಹೇಗೆ?
- ರಾಷ್ಟ್ರೀಯ ಭೂಕಂಪ ಕೇಂದ್ರವು ಬೃಹತ್ ರಾಷ್ಟ್ರೀಯ ಭೂಕಂಪ ಜಾಲ (ಎನ್ಸಿಎನ್) ಹೊಂದಿದ್ದು, ದೇಶಾದ್ಯಂತ 115 ವೀಕ್ಷಣಾಲಯಗಳನ್ನು ಹೊಂದಿದೆ. ಭೂಕಂಪದ ಕುರಿತು ನಿಗಾ ಇಡುವ ಸಂಸ್ಥೆ ಇದಾಗಿದ್ದು, ಯಾವುದೇ ಭಾಗದಲ್ಲಿ ಕಂಪನವಾದರೆ ಕೂಡಲೇ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳಿಗೆ ಸಂದೇಶ ರವಾನಿಸುತ್ತದೆ. ಹಾಗೆಯೇ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸಲು ಸಹ ನಿರ್ವಹಣಾ ಪಡೆಗಳಿಗೆ ಸೂಚಿಸುತ್ತದೆ. ಇದಕ್ಕಾಗಿ ಸ್ಯಾಟಲೈಟ್ ಸೇರಿ ಹಲವು ಸುಧಾರಿತ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದೆ.