Published on: June 13, 2022

ಎಲಿಜಬೆತ್ ರಾಣಿ ದಾಖಲೆ

ಎಲಿಜಬೆತ್ ರಾಣಿ ದಾಖಲೆ

ಸುದ್ದಿಯಲ್ಲಿ ಏಕಿದೆ?

ಎಲಿಜಬೆತ್‌ ರಾಣಿ ಜಗತ್ತಿನಲ್ಲೇ ಅತ್ಯಂತ ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜ ವಂಶಸ್ಥೆಯಾಗಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ದಾಖಲೆ ನಿರ್ಮಿಸಿದ್ದಾರೆ.

ಮುಖ್ಯಾಂಶಗಳು

  • ಫ್ರಾನ್ಸ್‌ನ 14ನೇ ಲೂಯಿಸ್‌ 1643ರಿಂದ 1715ರ ವರೆಗೆ ಒಟ್ಟು 72 ವರ್ಷ 110 ದಿನಗಳ ಕಾಲ ಆಳ್ವಿಕೆ ನಡೆಸಿ, ಜಗತ್ತಿನಲ್ಲಿ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಮೊದಲ ರಾಜ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.
  • ಸುದೀರ್ಗೆ ಅವಧಿಗೆ ಸಿಂಹಾಸನದಲ್ಲಿದ್ದ ಎರಡನೇ ರಾಜನ ದಾಖಲೆ ಇದುವರೆಗೆ ಥಾಯ್ಲೆಂಡ್‌ನ ರಾಜ ಭುಮಿಬೊಲ್‌ ಅದುಲ್ಯದೆಜ್‌ ಅವರ ಹೆಸರಲ್ಲಿತ್ತು. 1927ರಿಂದ 2016ರ ನಡುವೆ ಅವರು 70 ವರ್ಷ 126 ದಿನ ಸಿಂಹಾಸನದಲ್ಲಿದ್ದರು.
  • ಇದೀಗ 96 ವರ್ಷದ ಬ್ರಿಟನ್‌ನ ರಾಣಿ ಈ ದಾಖಲೆ ಮುರಿದಿದ್ದಾರೆ. 1953ರಲ್ಲಿ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರಿದ್ದ 2ನೇ ಎಲಿಜಬೆತ್ ಅವರು 2015ರಲ್ಲಿ ತಮ್ಮ ಅಜ್ಜಿ ವಿಕ್ಟೋರಿಯಾ ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದು, ಬ್ರಿಟನ್‌ ರಾಜಮನೆತನದ ದೀರ್ಘಾವಧಿಯ ರಾಣಿ ಎನಿಸಿಕೊಂಡಿದ್ದರು.