Published on: May 3, 2024
ಎವರೆಸ್ಟ್ ಸ್ವಚ್ಛತಾ ಅಭಿಯಾನ
ಎವರೆಸ್ಟ್ ಸ್ವಚ್ಛತಾ ಅಭಿಯಾನ
ಸುದ್ದಿಯಲ್ಲಿ ಏಕಿದೆ? ಮೌಂಟ್ ಎವರೆಸ್ಟ್ ಪರ್ವತ ಪ್ರದೇಶದಲ್ಲಿ ಎವರೆಸ್ಟ್ ಸ್ವಚ್ಛತಾ ಅಭಿಯಾನ– 2024 ಅನ್ನು ನೇಪಾಳ ಸೇನೆ ಆರಂಭಿಸಿದೆ.
ಮುಖ್ಯಾಂಶಗಳು
- ಈ ಅಭಿಯಾನಕ್ಕೆ ನೇಪಾಳದ ಅರಣ್ಯ ಮತ್ತು ಪರಿಸರ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ನೇಪಾಳ ಪರ್ವತಾರೋಹಿಗಳ ಸಂಘಗಳು ನೆರವು ನೀಡುತ್ತಿವೆ.
- ಈ ಸ್ವಚ್ಛತಾ ಅಭಿಯಾನ 50 ದಿನಗಳವರೆಗೆ ನಡೆಯಲಿದೆ.
- ಈ ತಂಡ ಮೌಂಟ್ ಎವರೆಸ್ಟ್, ಮೌಂಟ್ ಲೊಟ್ಸೆ ಮತ್ತು ಮೌಂಟ್ ನಪ್ಟ್ಸೆ ಗಳಿಂದ ಕಸವನ್ನು ಸಂಗ್ರಹಿಸಿ ತರಲಿದೆ.
- ನೇಪಾಳ ಸೇನೆ 2019 ರಿಂದ ಎವರೆಸ್ಟ್ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ನೇಪಾಳ ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ವಚ್ಛತಾ ಅಭಿಯಾನ ಇದಾಗಿದೆ.
- ಈ ಬಾರಿಯ ಅಭಿಯಾನದ ಧ್ಯೇಯ ವಾಕ್ಯ: ‘ಕಸ ನಿರ್ಮೂಲಿಸಿ; ಹಿಮಾಲಯ ಉಳಿಸಿ’
ಉದ್ದೇಶ
ಈ ಸ್ವಚ್ಛತಾ ಅಭಿಯಾನದಡಿ ಎವರೆಸ್ಟ್ ಪರ್ವತದಲ್ಲಿ ಸಂಗ್ರಹಿತವಾಗಿರುವ ಮಾನವ ನಿರ್ಮಿತ ತ್ಯಾಜ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಲಾಗಿದೆ.
ಮೌಂಟ್ ಎವರೆಸ್ಟ್
- ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಸಮುದ್ರ ಮಟ್ಟದಿಂದ 8,848 ಮೀಟರ್ (29,029 ಅಡಿ) ಎತ್ತರದಲ್ಲಿದೆ.
- ಮೌಂಟ್ ಎವರೆಸ್ಟ್, ನೇಪಾಳ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ನಡುವಿನ ಗಡಿಯಲ್ಲಿರುವ ದಕ್ಷಿಣ ಏಷ್ಯಾದ ಗ್ರೇಟ್ ಹಿಮಾಲಯದ ಶಿಖರದಲ್ಲಿರುವ ಪರ್ವತ
- ಸಾಮಾನ್ಯವಾಗಿ ಟಿಬೆಟಿಯನ್ ಹೆಸರು, ಚೊಮೊಲುಂಗ್ಮಾ, ಅಂದರೆ ವಿಶ್ವದ ದೇವತೆ ಅಥವಾ “ಕಣಿವೆಯ ದೇವತೆ”. ಸಾಗರಮಾತಾ ಎಂಬ ಸಂಸ್ಕೃತ ಹೆಸರು ಅಕ್ಷರಶಃ “ಸ್ವರ್ಗದ ಶಿಖರ” ಎಂದರ್ಥ.
- 1953 ರಲ್ಲಿ ನ್ಯೂಜಿಲೆಂಡ್‌ನ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ಟೆನ್ಸಿಂಗ್ ನೋರ್ಗೆ ಎವರೆಸ್ಟ್ ಶಿಖರವನ್ನು ಏರಿದ ಮೊದಲಿಗರು.
- ಲೆಫ್ಟಿನೆಂಟ್ ಕರ್ನಲ್ ಅವತಾರ. ಎಸ್. ಚೀಮಾ: ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ.
- ಬಚೇಂದ್ರಿ ಪಾಲ್: ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ