Published on: February 10, 2024

ಏಕರೂಪ ನಾಗರಿಕ ಸಂಹಿತೆ (ಯುಸಿಸಿ)

ಏಕರೂಪ ನಾಗರಿಕ ಸಂಹಿತೆ (ಯುಸಿಸಿ)

ಸುದ್ದಿಯಲ್ಲಿ ಏಕಿದೆ? ಉತ್ತರಾಖಂಡ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದೆ. ಈ ಮೂಲಕ ಯುಸಿಸಿ ಜಾರಿಗೆ ತಂದ ದೇಶದ ಮೊದಲ ರಾಜ್ಯವೆನಿಸಿಕೊಂಡಿದೆ.

ಮುಖ್ಯಾಂಶಗಳು

ಅನ್ವಯ: ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.

ಅಧಿಕಾರ: ಈ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ.

ಉದ್ದೇಶ

ಮದುವೆ, ಜೀವನಾಂಶ, ಉತ್ತರಾಧಿಕಾರ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಯುಸಿಸಿ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಮುಖ್ಯವಾಗಿ ಮಹಿಳೆಯರ ವಿರುದ್ಧದ ತಾರತಮ್ಯವನ್ನು ತೆಗೆದುಹಾಕುತ್ತದೆ. ಮಹಿಳೆಯರ ವಿರುದ್ಧ ಅನ್ಯಾಯ ಮತ್ತು ತಪ್ಪು ಕಾರ್ಯಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ.

ಏನೆಲ್ಲಾ ನಿಯಮಗಳಿವೆ?

  1. a) ಲಿವ್‌-ಇನ್‌-ಸಂಬಂಧ
  • ಈ ವಿಧೇಯಕದಡಿ ಲಿವ್‌-ಇನ್‌-ರಿಲೇಷನ್‌ಶಿಪ್‌ನಲ್ಲಿರುವ (ಒಪ್ಪಿತ ಸಹ ಜೀವನ) ಜೋಡಿಗಳು ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, ಗರಿಷ್ಠ 6 ತಿಂಗಳು ಸೆರೆವಾಸ ಮತ್ತು 25,000 ರೂ. ದಂಡ ಇಲ್ಲವೇ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
  • 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೋಡಿಗಳು ಸಹ ಜೀವನ ನಡೆಸಲು ಬಯಸಿದರೆ ಅದಕ್ಕೆ ಪೋಷಕರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
  • ಲಿವ್‌-ಇನ್‌-ಸಂಬಂಧದಲ್ಲಿರುವ ಜೋಡಿಗಳು ತಾವು ಉತ್ತರಾಖಂಡದ ನಿವಾಸಿಗಳೇ ಅಥವಾ ಅನ್ಯ ರಾಜ್ಯದ ನಿವಾಸಿಗಳೇ ಎಂಬ ವಿಚಾರವನ್ನೂ ನೋಂದಣಿ ವೇಳೆ ಸ್ಪಷ್ಟಪಡಿಸುವ ನಿಯಮ ರೂಪಿಸಲಾಗಿದೆ.
  • ಲಿವ್‌-ಇನ್‌-ರಿಲೇಷನ್‌ಶಿಪ್‌ನಲ್ಲಿರುವ ಜೋಡಿಗಳಿಗೆ ಇಂಥ ಸಂಬಂಧದಿಂದ ಜನಿಸಿದ ಮಗುವು ಕಾನೂನುಬದ್ಧ ಎಂದು ಘೋಷಿಸಲಾಗುತ್ತದೆ.
  • ಲಿವ್‌-ಇನ್‌-ಸಂಬಂಧ ತೊರೆಯುವ ಮಹಿಳೆಯು ಜೀವನಾಂಶ ಕೋರಿ, ಕೋರ್ಟ್‌ ಮೊರೆ ಹೋಗಲು ಅವಕಾಶ ಕಲ್ಪಿಸಲಾಗಿದೆ.
  1. b) ಮದುವೆ, ವಿಚ್ಛೇದನ, ಭೂಮಿ, ಆಸ್ತಿ, ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಎಲ್ಲಾಧರ್ಮದವರಿಗೂ ಸಮಾನ ಕಾನೂನು.
  2. c) ಬಹು ಪತ್ನಿತ್ವ ಮತ್ತು ಬಹು ಪತಿತ್ವ ಪದ್ಧತಿ ನಿಷೇಧ
  3. d) ಯುಸಿಸಿ ವಿಧೇಯಕ ಸೆಕ್ಷನ್‌ 30ರ ಅನುಸಾರ ಹಲಾಲ್‌ ನಿಷೇಧ.
  4. e) ಒಂದೇ ಪೂರ್ವಜರ ಕುಟುಂಬದ ರಕ್ತ ಸಂಬಂಧಿಗಳು ಸೇರಿದಂತೆ ನಿರ್ದಿಷ್ಟ ಸಂಬಂಧಗಳ ನಡುವೆ ವಿವಾಹಕ್ಕೆ ನಿರ್ಬಂಧ

ವಿನಾಯಿತಿ

 UCC ಮಸೂದೆಯ ನಿಬಂಧನೆಗಳು ಬುಡಕಟ್ಟು ಸಮುದಾಯಗಳಿಗೆ ಅನ್ವಯಿಸುವುದಿಲ್ಲ:

ಪರಿಶಿಷ್ಟ ಪಂಗಡಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ವಿಶಿಷ್ಟ ಸಾಂಪ್ರದಾಯಿಕ ಆಚರಣೆ: ಭಾರತದ ಸಂವಿಧಾನದ 366 ನೇ ವಿಧಿಯ ಷರತ್ತು (25) ರ ಅರ್ಥದಲ್ಲಿ ಯಾವುದೇ ಪರಿಶಿಷ್ಟ ಪಂಗಡಗಳ ಸದಸ್ಯರಿಗೆ ಮತ್ತು ಭಾರತದ ಸಂವಿಧಾನದ XXI ಭಾಗದ ಅಡಿಯಲ್ಲಿ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸುವ ವ್ಯಕ್ತಿಗಳು ಮತ್ತು ವ್ಯಕ್ತಿಗಳ ಗುಂಪುಗಳಿಗೆ ನಿಬಂಧನೆಗಳು ಅನ್ವಯಿಸುವುದಿಲ್ಲ

ಕಾಳಜಿ: ಗೌಪ್ಯತೆಯು ವ್ಯಕ್ತಿಗಳಿಗೆ ಹೊರಗಿನ ಸಮುದಾಯದಿಂದ ಅಥವಾ ರಾಜ್ಯದಿಂದ ಹಸ್ತಕ್ಷೇಪವಿಲ್ಲದೆ ಮಾನವ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ.

ಭಾರತೀಯ ಸಂವಿಧಾನದಲ್ಲಿ, ಗೌರವದಿಂದ ಬದುಕುವ ಹಕ್ಕು ಮತ್ತು ಖಾಸಗಿತನದ ಹಕ್ಕು ಎರಡನ್ನೂ ಪರಿಚ್ಛೇದ 21 ರ ಆಯಾಮಗಳಾಗಿ ಗುರುತಿಸಲಾಗಿದೆ.