Published on: August 7, 2021
‘ಏಜೆನ್ಸಿ ಬ್ಯಾಂಕ್’
‘ಏಜೆನ್ಸಿ ಬ್ಯಾಂಕ್’
ಸುದ್ಧಿಯಲ್ಲಿ ಏಕಿದೆ ? ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಪಟ್ಟ ನಿರ್ವಹಣೆಗೆ ದೇಶದ ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ್ನು ಏಜೆನ್ಸಿ ಬ್ಯಾಂಕ್ ಆಗಿ ನೇಮಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಮಾನ್ಯತೆ ನೀಡಿದೆ.
ಮಹತ್ವ
- ಇದರಿಂದಾಗಿ ಕರ್ಣಾಟಕ ಬ್ಯಾಂಕ್ ಅಧಿಕೃತವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪರವಾಗಿ ಆದಾಯ ಸ್ವೀಕೃತಿ ಮತ್ತು ಪಾವತಿ, ಪಿಂಚಣಿ ಪಾವತಿ, ಮುದ್ರಾಂಕ ಶುಲ್ಕ ಸಂಗ್ರಹ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದ ಇತರ ಪ್ರಮುಖ ವ್ಯವಹಾರಗಳನ್ನು ಮಾಡಬಹುದಾಗಿದೆ.
- ಕರ್ಣಾಟಕ ಬ್ಯಾಂಕ್ ಭಾರತದಾದ್ಯಂತ ವ್ಯಾಪಿಸಿದ್ದು, ತಂತ್ರಜ್ಞಾನ ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿದೆ