Published on: October 21, 2022

ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್

ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್

ಸುದ್ದಿಯಲ್ಲಿ ಏಕಿದೆ?

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ನ್ನು ಲೋಕಾರ್ಪಣೆ ಮಾಡಿದರು. ಇದೇ ಮೊದಲ ಬರಿಗೆ ಬೆಂಗಳೂರಿಗೆ ಏರಿಯಲ್ ಲ್ಯಾಡರ್ ವಾಹನ ಪರಿಚಯಿಸಲಾಗಿದ್ದು ಈ ವಾಹನದ ಸಹಾಯದಿಂದ 90 ಮೀಟರ್ ಎತ್ತರದ ವರೆಗೂ ತಲುಪಿ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಂದಿಸಬಹುದು

ಮುಖ್ಯಾಂಶಗಳು

  • ರಾಜ್ಯ ಸರಕಾರ ಸುಮಾರು 30 ಕೋಟಿ ವೆಚ್ಚದ ಲ್ಯಾಡರ್ ವಾಹನವನ್ನು ಫಿನ್ಲೆಂಡ್‌ ದೇಶದಿಂದ ಖರೀದಿಸಿದೆ. ಅಗ್ನಿಶಾಮಕ ಇಲಾಖೆ 2020ರಲ್ಲಿ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಮುಂದಾಗಿತ್ತು.
  • ದೇಶದಲ್ಲಿ ಏರಿಯಲ್ ಲ್ಯಾಡರ್ ವಾಹನ ಹೊಂದಿರುವ ಎರಡನೇ ನಗರ ಬೆಂಗಳೂರು. ಈ ಮೊದಲು ಮುಂಬೈ ನಗರದಲ್ಲಿ 90 ಮೀಟರ್ ಎತ್ತರದ ಲ್ಯಾಡರ್ ವಾಹನ ಬಳಕೆ ಮಾಡಲಾಗಿದೆ. ಸದ್ಯ ಇನ್ನು ಮುಂದೆ ಬೆಂಗಳೂರಿನಲ್ಲೂ ಈ ವಾಹನ ಬಳಸಲಾಗುತ್ತದೆ.
  • ನಗರದಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡಗಳ ಸಂಖ್ಯೆ ಹಿನ್ನೆಲೆ ಅವಘಡಗಳ ಸಂದರ್ಭದಲ್ಲಿ ಬಳಸಿಕೊಳ್ಳಲು ಅತ್ಯಾಧುನಿಕ ಲ್ಯಾಡರ್ ವಾಹನ ಖರೀದಿಸಲಾಗಿದೆ.