Published on: January 24, 2023
ಐಎನ್ಎಸ್ ವಾಗಿರ್
ಐಎನ್ಎಸ್ ವಾಗಿರ್
ಸುದ್ದಿಯಲ್ಲಿ ಏಕಿದೆ? ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಮುಖ್ಯಾಂಶಗಳು
- ಕಲ್ವರಿ ವರ್ಗದ ನಾಲ್ಕು ಜಲಾಂತರ್ಗಾಮಿ ನೌಕೆಗಳನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ.
- ಜಲಾಂತರ್ಗಾಮಿಯು ಇಲ್ಲಿಯವರೆಗಿನ ಎಲ್ಲಾ ಸ್ಥಳೀಯವಾಗಿ ತಯಾರಿಸಿದ ಜಲಾಂತರ್ಗಾಮಿ ನೌಕೆಗಳಲ್ಲಿ ಅತ್ಯಂತ ಕಡಿಮೆ ನಿರ್ಮಾಣ ಸಮಯ ತೆಗೆದುಕೊಂಡ ಹೆಗ್ಗಳಿಕೆಯಿದೆ.
- ವಾಗಿರ್ ಅಂದರೆ ‘ಸ್ಯಾಂಡ್ ಷಾರ್ಕ್’ , ರಹಸ್ಯ, ನಿರ್ಭಯತೆಯನ್ನು ಪ್ರತಿಬಿಂಬಿಸುತ್ತದೆ.
ನಿರ್ಮಾಣ :ಐಎನ್ಎಸ್ ವಾಗಿರ್ ಅನ್ನು ಫ್ರಾನ್ಸ್ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.
ವಿಶೇಷತೆಗಳು
- ಸುಧಾರಿತ ತಂತ್ರಜ್ಞಾನದ ಐಎನ್ಎಸ್ ವಾಗಿರ್, ಶತ್ರುಗಳ ದಾಳಿ ತಡೆಯಲು, ಸಾಗರದಲ್ಲಿ ಭಾರತದ ರಕ್ಷಣೆಯ ಬಲವರ್ಧನೆಗೆ, ಗುಪ್ತಚರ ಹಾಗೂ ನಿಗಾ ವಹಿಸಲು ನೆರವಾಗಲಿದೆ. ಜಗತ್ತಿನ ಅತ್ಯುತ್ತಮ ಸೆನ್ಸಾರ್ಗಳನ್ನು ಇದು ಒಳಗೊಂಡಿವೆ.
ನಿಮಗಿದು ತಿಳಿದಿರಲಿ
- ಇದೆ ವರ್ಗದ ಮೊದಲ ಸಬ ಮರಿನ್ ಐಎನ್ಎಸ ಕಲ್ವಾರಿ 2017 , ಐಎನ್ಎಸ ಖಂಡೇರಿ 2019 , ಐಎನ್ಎಸ ಕಾರಂಜಾ ಮಾರ್ಚ್ 2021, ಐಎನ್ಎಸ ವೇಲಾ 2021 ನವೇಂಬರನಲ್ಲಿ ಸೇರ್ಪಡೆಯಾಗಿವೆ.