Published on: September 14, 2022

ಐಎನ್ಎಸ್ ವಿಕ್ರಾಂತ್

ಐಎನ್ಎಸ್ ವಿಕ್ರಾಂತ್

ಸುದ್ದಿಯಲ್ಲಿ ಏಕಿದೆ?

ಸೆಪ್ಟೆಂಬರ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ನಿರ್ಮಿತ ಮೊದಲ ವಿಮಾನ ವಾಹಕ ಯುದ್ಧನೌಕೆ ‘ಐಎನ್​ಎಸ್​ ವಿಕ್ರಾಂತ್’ ಲೋಕಾರ್ಪಣೆ ಮಾಡುವ ಮೂಲಕ ಆತ್ಮನಿರ್ಭರ  ಭಾರತ ದ ಸಂಕಲ್ಪಕ್ಕೆ ಪುಷ್ಟಿ ನೀಡಿದರು.

ಮುಖ್ಯ್ಯಾಂಶಗಳು

  • ಈ ಯುದ್ಧನೌಕೆಯನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಉಕ್ಕು ಸೇರಿದಂತೆ ಕಚ್ಚಾವಸ್ತು ಹಾಗೂ ಬಿಡಿಭಾಗಗಳನ್ನು ಬಳಸುವಾಗಲೂ ದೇಶೀಯ ಕಂಪನಿಗಳಿಗೇ ಆದ್ಯತೆ ನೀಡಲಾಗಿದೆ’.
  • 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಮೊದಲ ವಿಮಾನವಾಹಕ ನೌಕೆಯಾದ ವಿಕ್ರಾಂತ್ ಹೆಸರನ್ನು ಈ ಸ್ವದೇಶಿ ವಿಮಾನವಾಹಕ ನೌಕೆಗೆ ಇಡಲಾಗಿದೆ.
  • 262 ಮೀ ಉದ್ದ ಮತ್ತು 62 ಮೀ ಅಗಲದ ವಿಕ್ರಾಂತ್ ಹಡಗಿನಲ್ಲಿ ಸುಮಾರು 2,200 ವಿಭಾಗಗಳಿವೆ, ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳಿವೆ.
  • ಭಾರತೀಯ ನೌಕಾಪಡೆಯು ವಿವಿಧ ಹಂತಗಳಲ್ಲಿ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ಭಾರತವು ಐಎನ್​ಎಸ್​ ವಿಕ್ರಾಂತ್​ ಮೂಲಕ ವಸಾಹತು ಅವಮಾನಗಳನ್ನು ನಿವಾರಿಸಿಕೊಂಡಿದೆ.
  • ಐಎನ್​ಎಸ್​ ವಿಕ್ರಾಂತ್​ ಕೇವಲ ಹಡಗಷ್ಟೇ ಅಲ್ಲ, ಅದೊಂದು ತೇಲುವ ವಾಯುನೆಲೆಯೂ ಹೌದು.
  • ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರವಾಗಿ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ.
  • ಇದರಲ್ಲಿ ಉತ್ಪತ್ತಿಗುವ ವಿದ್ಯುತ್​ನಿಂದ 5,000 ಮನೆಗಳಿಗೆ ಬೆಳಕು ಕೊಡಬಹುದು.
  • ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರವಾಗಿ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ.
  • ಯುದ್ಧನೌಕೆಯನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್ಎಂಇಗಳು ಒದಗಿಸಿದ ಸ್ಥಳೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ.
  • ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿರುತ್ತದೆ, (ಇನ್ನೊಂದು INS ವಿಕ್ರಮಾದಿತ್ಯ) ಇದು ರಾಷ್ಟ್ರದ ಕಡಲ ಭದ್ರತೆಯನ್ನು ಹೆಚ್ಚಿಸುತ್ತದೆ.

ಉದ್ದೇಶ

  • ಇಂಡೋ ಪೆಸಿಫಿಕ ಸಾಗರದಲ್ಲಿ ಚೀನಾ ಅಧಿಪತ್ಯಕ್ಕೆ ಅಂಕುಶ ಹಾಕಲು ವಿಕ್ರಾಂತ ಪ್ರಭಲ ಅಸ್ತ್ರವಾಗಲಿದೆ. ಮತ್ತು ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸುವ ಸರ್ಕಾರದ ಬದ್ಧತೆಗೆ ಪ್ರತೀಕವಾಗಿದೆ.

ಹಿನ್ನೆಲೆ

  • ವಿಕ್ರಾಂತ್ (ಅಂದರೆ ಧೈರ್ಯಶಾಲಿ) ಭಾರತದ ಮೊದಲ ವಿಮಾನವಾಹಕ ನೌಕೆಯ ಹೆಸರನ್ನು ಇಡಲಾಗಿದೆ, ಇದನ್ನು ಯುಕೆಯಿಂದ ಖರೀದಿಸಿ 1961 ರಲ್ಲಿ ನಿಯೋಜಿಸಲಾಯಿತು.
  • 1971 ರ ಇಂಡೋ-ಪಾಕ್ ಯುದ್ಧವನ್ನು ಒಳಗೊಂಡಂತೆ ಹಲವಾರು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ, 1997 ರಲ್ಲಿ ನಿಷ್ಕ್ರಿಯಗೊಳಿಸಲಾಯಿತು.

ಹೊಸ ಧ್ವಜ :

  • ಭಾರತೀಯ ನೌಕಾಪಡೆಗೆ ಹೊಸ ಲಾಂಛನವಿರುವ ಹೊಸ ಧ್ವಜ ನಿಶಾನ್ ಅನ್ನು ಅನಾವರಣಗೊಳಿಸಲಾಯಿತು.ಇದರಲ್ಲಿ ಬ್ರಿಟಿಷರ ಆಡಳಿತದ ಸೇಂಟ್ ಜಾರ್ಜ್ ಕ್ರಾಸ್ ಚಿನ್ಹೆಯನ್ನು ತೆಗೆದುಹಾಕಿ, ಆ ಜಾಗದಲ್ಲಿ ಛತ್ರಪತಿ ಶಿವಾಜಿ ಆಡಳಿತದ ಸಮಯದಲ್ಲಿನ ರಾಜಮುದ್ರೆಯ ಆಕೃತಿಯನ್ನು ಅಳವಡಿಸಲಾಗಿದೆ.
  • ಈ ಹೊಸ ಧ್ವಜವು ಗುಲಾಮಗಿರಿಯ ಪೂರ್ಣ ವಿಧಾಯದ ದ್ಯೋತಕವಾಗಿದೆ ಮತ್ತು ಯುದ್ಧನೌಕೆಯನ್ನು ಶಿವಾಜಿ ಮಹಾರಾಜರ ತ್ಯಾಗ ಬಲಿದಾನಕ್ಕೆ ಸಮರ್ಪಿಸಲಾಯಿತು

ನಿರ್ಮಾಣ:  

  • ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ವಾರ್‌ಶಿಪ್ ಡಿಸೈನ್ ಬ್ಯೂರೋ (ಡಬ್ಲ್ಯೂಡಿಬಿ) ವಿನ್ಯಾಸಗೊಳಿಸಿದ ಮತ್ತು ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಶಿಪ್‌ಯಾರ್ಡ್ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟಿದೆ.
  • ವಿಕ್ರಾಂತ್ ನ್ನು ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು ಇದಾಗಿರುವುದು ವಿಶೇಷ. ವಿಕ್ರಾಂತ್ ನ್ನು ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ. ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು ಇದಾಗಿರುವುದು ವಿಶೇಷ.

ವಿಶೇಷತೆಗಳು :

  • ಭಾರತೀಯ ನೌಕಾಪಡೆಯ ಪ್ರಕಾರ, 262-ಮೀಟರ್ ಉದ್ದದ ವಾಹಕವು 45,000 ಟನ್‌ಗಳ ಸ್ಥಳಾಂತರವನ್ನು ಹೊಂದಿದೆ, ಇದು ಹಿಂದಿನ ವಿಕ್ರಾಂತ ವಿಮಾನ ವಾಹಕಕ್ಕಿಂತ ಹೆಚ್ಚು ದೊಡ್ಡದಾಗಿದೆ.
  • ವಿಕ್ರಾಂತ್ ಸುಮಾರು 30 ವಿಮಾನಗಳನ್ನು ಒಯ್ಯುತ್ತದೆ. ಇದು MiG 29k ಯುದ್ಧ ವಿಮಾನವನ್ನು ವಾಯು ವಿರೋಧಿ, ಮೇಲ್ಮೈ ವಿರೋಧಿ ಮತ್ತು ಭೂ ದಾಳಿಯಲ್ಲಿ ಬಳಸಿಕೊಳ್ಳಬಹುದು.
  • ಇದು Kamov 31 ಒಂದು ಆರಂಭಿಕ ವಾಯು ಎಚ್ಚರಿಕೆ ಹೆಲಿಕಾಪ್ಟರ್ ನ್ನು ನಿರ್ವಹಿಸಲು ಸಾಧ್ಯವಾಗುತ್ತದೆ, ಇತ್ತೀಚೆಗೆ ಸೇರ್ಪಡೆಗೊಂಡ ಆದರೆ ಇನ್ನೂ ಕಾರ್ಯಾರಂಭಿಸದ MH-60R ಇದು ಬಹು-ಪಾತ್ರ ಹೆಲಿಕಾಪ್ಟರ್ ಮತ್ತು ನಮ್ಮ ಸ್ಥಳೀಯ ALH ಆಗಿದೆ.  ಭಾರತೀಯ ನೌಕಾ ದಾಸ್ತಾನುಗಳಲ್ಲಿ ಅತಿದೊಡ್ಡ ಯುದ್ಧನೌಕೆಯಾಗಿದೆ.
  • ಐಎಎಸ್ ವಿಕ್ರಾಂತ್ ಸೇರ್ಪಡೆಯೊಂದಿಗೆ,  ಭಾರತವು ವಿಮಾನವಾಹಕ ನೌಕೆಯನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪನ್ನು ಸೇರಿಕೊಂಡಿದೆ.
  • ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ 14 ಡೆಕ್‌ಗಳನ್ನು ಹೊಂದಿದ್ದು 2,300 ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ.
  • ಇದು ಸುಮಾರು 1,500 ಸಮುದ್ರ ಯೋಧರನ್ನು ಹೊತ್ತೊಯ್ಯಬಲ್ಲದು. ಸಿಬ್ಬಂದಿಗಳಿಗೆ ಆಹಾರ ಅವಶ್ಯಕತೆಯನ್ನು ಒದಗಿಸಲು ಹಡಗಿನ ಅಡುಗೆಮನೆಯಲ್ಲಿ ಸುಮಾರು 10,000 ಚಪಾತಿ ಅಥವಾ ರೊಟ್ಟಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಹಡಗಿನ ಗ್ಯಾಲಿ ಎಂದು ಕರೆಯಲಾಗುತ್ತದೆ.

ಪ್ರಪಂಚದಾದ್ಯಂತ ಇರುವ ಇತರ ವಿಮಾನವಾಹಕ ನೌಕೆಗಳು

  • ಯುಎಸ್ಎ: ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ಕ್ಲಾಸ್
  • ಚೀನಾ: ಫುಜಿಯಾನ್
  • ಯುನೈಟೆಡ್ ಕಿಂಗ್ಡಮ್: ಕ್ವೀನ್ ಎಲಿಜಬೆತ್ ಕ್ಲಾಸ್
  • ರಷ್ಯಾ: ಅಡ್ಮಿರಲ್ ಕುಜ್ನೆಟ್ಸೊವ್
  • ಫ್ರಾನ್ಸ್: ಚಾರ್ಲ್ಸ್ ಡಿ ಗಾಲ್
  • ಇಟಲಿ: ಕಾವೂರ್